ಜ್ಞಾನಾರ್ಜನೆಗೆ ಮಕ್ಕಳನ್ನು ಪ್ರೇರೇಪಿಸಬೇಕು: ಲಿಂಗರಾಜ್

KannadaprabhaNewsNetwork | Published : Aug 26, 2024 1:42 AM

ಸಾರಾಂಶ

ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಸೂಕ್ತವಾಗಿ ಅನಾವರಣಗೊಳಿಸಲು ಸೂಕ್ತ ವೇದಿಕೆಯಾಗಿದೆ ಎಂದು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಚ್.ಕೆ. ಲಿಂಗರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಜಗಳೂರು

ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಸೂಕ್ತವಾಗಿ ಅನಾವರಣಗೊಳಿಸಲು ಸೂಕ್ತ ವೇದಿಕೆಯಾಗಿದೆ ಎಂದು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಚ್.ಕೆ. ಲಿಂಗರಾಜ್ ಹೇಳಿದರು.

ತಾಲೂಕಿನ ಮೆದಿಕೇರನಹಳ್ಳಿ ಪ್ರೌಢಶಾಲಾ ಆವರಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ನಾವು ಜ್ಞಾನ ತುಂಬುವುದಲ್ಲ, ಜ್ಞಾನ ಗಳಿಸುವಂತೆ ಪ್ರೇರೇಪಿಸಬೇಕು. ಸಮಯ, ಸಂದರ್ಭಕ್ಕೆ ಅನುಸಾರವಾಗಿ ಆ ಜ್ಞಾನ ಬಳಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಶಿಕ್ಷಣ ಕೊಡಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಮೂರ್ತಿ ಮಾತನಾಡಿ, ಪಠ್ಯಪುಸ್ತಕಗಳ, ಜೊತೆ, ಕ್ರೀಡೆ, ಪ್ರತಿಭಾ ಕಾರಂಜಿ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಬೆಳಕಿಗೆ ತರಲು ಸಾಧ್ಯವಾಗುತ್ತದೆ. ಅಂತಹ ವಿದ್ಯಾರ್ಥಿಗಳನ್ನು ಗುರ್ತಿಸಿ ಪ್ರೋತ್ಸಾಹಿಸಬೇಕು ಎಂದರು.

ದೇವಿಕೆರೆ ವಿಭಾಗದ ಸಿ.ಆರ್.ಪಿ. ಆಂಜನೇಯ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಾಡಲು ಮೆದಿಕೆರೆನೆಹಳ್ಳಿಯ ಎಲ್ಲ ಗ್ರಾಮಸ್ಥರು ಹಾಗೂ ಶಿಕ್ಷಣ ಪ್ರೇಮಿಗಳು ಉತ್ತಮವಾಗಿ ಸಹಕಾರ ನೀಡಿದಕ್ಕಾಗಿ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶಿವಣ್ಣ ವೀರೇಶ್ ಟಿ. ಕಾರ್ಯಕ್ರಮದ ಅಧ್ಯಕ್ಷತೆ ಅವರು ವಹಿಸಿದ್ದರು. ದೇವಿಕೆರೆ ಗ್ರಾಪಂ ಸದಸ್ಯ, ಮಾಜಿ ಅಧ್ಯಕ್ಷ ಸದಾಶಿವಪ್ಪ, ಬಿ.ಆರ್.ಸಿ. ಡಿ.ಡಿ.ಹಾಲಪ್ಪ, ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಹನುಮಂತೇಶ್, ಕಾರ್ಯದರ್ಶಿ ಶಕುಂತಲಮ್ಮ, ರವಿಕುಮಾರ, ಇಂದ್ರಮ್ಮ, ನೀಲಮ್ಮ, ನಾಗರಾಜ್ , ಸಿ.ಆರ್.ಪಿ. ಶಿಕ್ಷಕರಾದ ರಮೇಶ, ಚಂದ್ರಪ್ಪ ಎಚ್.ಬಿ., ಮುಖ್ಯೋಪಾಧ್ಯಾಯ ಬಸವರಾಜಪ್ಪ ನಾಯಕ, ದೇವಿಕೆರೆ ಶಾಲೆ ಮುಖ್ಯಶಿಕ್ಷಕಿ ಎಂ.ಮಂಜುಳಾ, ಅರುಣ್ ಕುಮಾರ್ ಎಚ್.ಎಂ., ಮೆದಕೇರನಹಳ್ಳಿ ಗ್ರಾಮಸ್ಥರಾದ ಅಜ್ಜಯ್ಯ, ಹಾಲೇಶಪ್ಪ, ನಾಗೇಶ, ದೇವಿಕೆರೆ ವಿಭಾಗದ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಪಾಲ್ಗೊಂಡಿದ್ದರು.

Share this article