ಮಕ್ಕಳಿಗೆ ಇತಿಹಾಸ, ಸಂಸ್ಕೃತಿಯ ಸಾರ ತಿಳಿಸಬೇಕು: ಸಿ.ಎನ್. ಮಂಜೇಗೌಡ

KannadaprabhaNewsNetwork |  
Published : Aug 17, 2025, 01:32 AM IST
2 | Kannada Prabha

ಸಾರಾಂಶ

ಕೃಷ್ಣ ಇಡೀ ಮನುಕುಲದ ಮಾದರಿ ಹಾಗೂ ಸಮಾಜವನ್ನು ಮುನ್ನಡೆಸುವ ಸಾರಥಿಯಂತೆ. ಕೃಷ್ಣ ಯಾವಗಲೂ ನ್ಯಾಯದ ಪರವಾಗಿದ್ದವನು.

ಕನ್ನಡಪ್ರಭ ವಾರ್ತೆ ಮೈಸೂರುನಮಗೆ ತಿಳಿದಷ್ಟು ಇತಿಹಾಸ, ಧರ್ಮ ನಮ್ಮ ಮಕ್ಕಳಿಗೆ ತಿಳಿದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಿಗೆ ಇತಿಹಾಸ, ಸಂಸ್ಕೃತಿ, ಹಿಂದು ಧರ್ಮ ಗ್ರಂಥಗಳ ಸಾರವನ್ನು ತಿಳಿಸುವಕೆಲಸವಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾಮಂದಿರ ಆವರಣ ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.ಕೃಷ್ಣ ಇಡೀ ಮನುಕುಲದ ಮಾದರಿ ಹಾಗೂ ಸಮಾಜವನ್ನು ಮುನ್ನಡೆಸುವ ಸಾರಥಿಯಂತೆ. ಕೃಷ್ಣ ಯಾವಗಲೂ ನ್ಯಾಯದ ಪರವಾಗಿದ್ದವನು. ಧರ್ಮೋ ರಕ್ಷಿತೀ ರಕ್ಷಿತಃ. ಧರ್ಮವನ್ನು ಕಾಪಾಡಬೇಕು ಎಂದು ಭೋಧಿಸಿದವನು. ಕೃಷ್ಣ ಜನ್ಮಾಷ್ಠಮಿ ಭಾರತದಲ್ಲಿ ಎಲ್ಲರಿಗೂ ಪ್ರಮುಖವಾದ ಶ್ರೇಷ್ಠ ಹಬ್ಬವಾಗಿದೆ ಎಂದರು.ನಾವೆಲ್ಲರೂ ಈ ಆಚರಣೆಗಳನ್ನು ಮಾಡುವುದರಿಂದ ಮುಂದಿನ ಪೀಳಿಗೆಗೆ ಒಳ್ಳೆಯ ಆಶಯ, ಸಂಸ್ಕೃತಿ, ಜೀವನ ಪಾಠವನ್ನು ಕಲಿಸಿದಂತಾಗುತ್ತದೆ. ಕೃಷ್ಣನ ಬಗ್ಗೆ ಪುರಾಣಗಳಿದ್ದರು, ಕೃಷ್ಣ ನಿಜವಾಗಿ ಇದ್ದನು ಎಂಬ ನಿಜವಾದ ಪುರಾವೆಗಳಿವೆ ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮಾತನಾಡಿ, ಕೃಷ್ಣ ಮಹಾಭಾರತದಲ್ಲಿ ತಿಳಿಸಿರುವಂತೆ ಜೀವನದಲ್ಲಿ ಯಾರೊಬ್ಬರು ಆತಂಕಕ್ಕೆ ಒಳಗಾಗದೇ, ಹತಾಶರಾಗದೇ, ಸೋತಿದ್ದೇವೆ ಎಂದು ಶರಣಾಗತರಾಗಬಾರದು. ಧೃಡವಾಗಿ ನಿಲ್ಲಬೇಕು. ಎಲ್ಲಿ ಅಧರ್ಮ ನಡೆಯುತ್ತದೆಯೋ ಅಲ್ಲಿ ಕೃಷ್ಣ ಮತ್ತೆ ಹುಟ್ಟಿರುತಾನೆ. ಅಂದರೆ ಕೃಷ್ಣ ಬಿತ್ತಿದಂತಹ ಆದರ್ಶಗಳು, ಮಾರ್ಗಗಳ ಮೂಲಕ ಪ್ರತಿಯೊಬ್ಬರ ಜೀವನದಲ್ಲಿ ಮೊಳಕೆಯಾಗಿ ಸಸಿಯಂತೆ ಮೂಡುತ್ತವೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕ ಡಾ. ಶಲ್ವಪಿಳ್ಳೆ ಅಯ್ಯಂಗಾರ್ ಮಾತನಾಡಿ, ಶ್ರೀಕೃಷ್ಣನನ್ನು ಪೂರ್ಣಾವತಾರ ಎಂದು ಪರಂಪರೆ ಒಕ್ಕಣಿಸಿದೆ. ಮನುಷ್ಯ ಭಾವದ ಎಲ್ಲಾ ಭಾವಗಳ ಮೂರ್ತರೂಪವಾಗಿ ಅವನು ಕಾಣಿಸಿಕೊಂಡ ಮಾತ್ರವಲ್ಲ. ಆ ಎಲ್ಲಾ ಭಾವಗಳನ್ನೂ ಮೀರಿನಿಂತ ಕೂಡ. ಹೀಗಾಗಿಯೇ ಅವನು ಪೂರ್ಣಾವತಾರಿ. ಅವನು ಎಲ್ಲರ ಭಾವಗಳನ್ನೂ ಅರ್ಥಮಾಡಿಕೊಳ್ಳಬಲ್ಲ, ಅವನು ಎಲ್ಲರ ಸಮಸ್ಯೆಗಳಿಗೂ ಪರಿಹಾರವಾಗಿಯೂ ಒದಗಬಲ್ಲ. ಹೀಗಾಗಿಯೇ ಅವನು ಜಗದ್ಗುರು ಎಂದು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಶ್ರೀ ಕೃಷ್ಣ ಜಯಂತ್ಯುತ್ಸವ ಸಮಿತಿ ಮುಖಂಡರಾದ ವೆಂಕಟಾಚಲ ಮೊದಲಾದವರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌