ಗದಗ: ನಗರದ ಹಿದಾಯತ್ ಪ್ರಿ ಪ್ರಾಥಮಿಕ ಹಾಗೂ ಜೆ.ಯು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ನೀಡಲಾಯಿತು.
ನಿವೃತ್ತ ಡಿಡಿಪಿಐ ಐ.ಬಿ. ಬೆನಕೊಪ್ಪ, ಇಲಕಲ್‌ನ ಅರೇಬಿಕ್ ಸ್ಕೂಲ್ ಶಿಕ್ಷಕ ಲಾಲಹುಸೇನ್ ಕಂದಗಲ್ ಹಾಗೂ ನಿವೃತ್ತ ಶಿಕ್ಷಕ ಎಂ.ಎಸ್. ಚಿನ್ನೂರ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಹಾಜಿ ಜುನೇದ ಉಮಚಗಿ ಅಧ್ಯಕ್ಷತೆ ವಹಿಸಿದ್ದರು. ಕೆ.ಐ.ಶೇಖ,ವಿಜಯಕುಮಾರ ಗಡ್ಡಿ, ಅಶ್ಪಾಕ್ ಹೊಸಳ್ಳಿ, ಹಾಜಿ ಇಕ್ಬಾಲ್ ಹಣಗಿ, ಅಬ್ದುಲ್ ಹಫಿಜ್ ಉಮಚಗಿ, ಶಾಲೆಯ ಪ್ರಧಾನ ಗುರುಮಾತೆ ಪರವಿನ ಗುದಗಿ ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.