ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಲಕ್ಷ್ಮೀಪುರ ಗ್ರಾಮದ ಅಮೃತ ವಿಕಲಚೇತನರ ವೃದ್ಧಾಶ್ರಮದಲ್ಲಿ ಲಯನ್ಸ್ ಮತ್ತು ಕಲಾಪ್ರಿಯ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಆಹಾರ ಪದಾರ್ಥಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನುಷ್ಯ ಬದುಕಿದಷ್ಟು ದಿನಗಳಲ್ಲಿ ಒಂದಲ್ಲಾ ಒಂದು ರೀತಿ ತಮ್ಮ ಕೈಲಾದ ಸಮಾಜಸೇವೆ ಮಾಡುವ ಮೂಲಕ ನೆರವಾಗುವ ಮನೋಭಾವನೆ ಮೂಡಬೇಕಿದೆ. ಮಕ್ಕಳಿಂದ ದೂರವಾದ ಹಿರಿಯ ಜೀವಗಳಿಗೆ ಅನಾಥಾಶ್ರಮ ನೆರವಾಗಿದೆ. ದೇವರ ಮಕ್ಕಳಂತೆ ಅವರನ್ನು ಕಾಪಾಡುವ ಜವಾಬ್ದಾರಿ ವಹಿಸಿರುವ ರಮೇಶ್ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.ಅನಾಥಾಶ್ರಮಗಳು ಇಲ್ಲದಿದ್ದಲ್ಲಿ ಎಷ್ಟೋ ಜನರು ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳದಲ್ಲಿ ಊಟ ಬಟ್ಟೆ, ಸ್ನಾನ ವಿಲ್ಲದೆ ಅನಾರೋಗ್ಯದಿಂದ ದೇಹ ತ್ಯಜಿಸಬೇಕಿತ್ತು. ಅಂತಹ ಸಮಯದಲ್ಲಿ ರಮೇಶ್ ಅವರು ಗ್ರಾಮೀಣ ಭಾಗದಲ್ಲಿ ಅನಾಥಾಶ್ರಮ ತೆರೆದು ಹಿರಿಯ ಜೀವಿಗಳನ್ನು ಪಾಲನೆ ಮಾಡುತ್ತಿದ್ದಾರೆ, ಇಂದು ನಾನು ಅಳಿಲು ಸೇವೆ ಮಾಡಿದ್ದು, ಪ್ರತಿ ತಿಂಗಳು ನನ್ನ ಕೈಲಾದ ನೆರವು ನೀಡುವುದಾಗಿ ಶಿವಸ್ವಾಮಿ ಹೇಳಿದರು.
ಅಮೃತ ವಿಕಲ ಚೇತನ ವೃದ್ಧಾಶ್ರಮದ ಸಂಸ್ಥಾಪಕ ರಮೇಶ್ ಮಾತನಾಡಿ, ನಾನು ಅನಾಥಾಶ್ರಮದಲ್ಲಿ ಹಿರಿಯರಿಗೆ ಮಾಡುತ್ತಿರುವ ಸೇವೆ ದೇವರಿಗೆ ಮಾಡುತ್ತಿರುವ ಸೇವೆ ಎಂದು ಭಾವಿಸಿದ್ದೇನೆ. ಸಾರ್ವಜನಿಕರ ನೆರವಿನಲ್ಲಿ ಆಶ್ರಯ ನೀಡುವ ಕೆಲಸ ಮಾಡುತ್ತಿದ್ದು, ಇನ್ನೂ ಒಂದು ದೊಡ್ಡ ಗುರಿ ನನ್ನಲ್ಲಿದೆ. ನಿಮ್ಮೆಲ್ಲರ ಸಹಕಾರವಿರಲಿ ಎಂದರು.
ವೃದ್ದಾಶ್ರಮಕ್ಕೆ ನಗರಸಭಾ ಸದಸ್ಯ ಶಿವಸ್ವಾಮಿ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡಿದರು. ಅಮೃತ ವಿಕಲಚೇತನರ ವೃದ್ದಾಶ್ರಮದ ಸಪ್ನಾ ರಮೇಶ್, ಲಯನ್ಸ್‌ನ ಕಾರ್ಯದರ್ಶಿ ವಿಜಯಲಕ್ಷ್ಮೀ, ಖಜಾಂಚಿ ನಿರ್ಮಲಾ, ನಿರ್ದೇಶಕಿ ಶಾಂತಮ್ಮ, ಶಾರದಾ, ಹೇಮಾವತಿ, ಕವಿತಾ, ಗೀತಾ, ಹೇಮಲತಾ, ಕಲಾಪ್ರಿಯ ಟ್ರಸ್ಟ್ ಕಾರ್ಯದರ್ಶಿ ಅರುಣ್ ಮತ್ತಿತರರು ಹಾಜರಿದ್ದರು.