ಚಿಂಚೋಳಿ: ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

KannadaprabhaNewsNetwork |  
Published : Jan 17, 2024, 01:46 AM IST
ಚಿಂಚೋಳಿ ಪಟ್ಟಣಕ್ಕೆ ಆಗಮಿಸಿದ ಕರ್ನಾಟಕ ಸಂಭ್ರಮ-೫೦ ಕನ್ನಡ ಜ್ಯೋತಿ ರಥಯಾತ್ರೆಯನ್ನು ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು. ತಹಸೀಲ್ದಾರ್‌ ಸುಬ್ಬಣ್ಣ ಜಮಖಂಡಿ, ತಾಪಂ ಶಂಕರ ರಾಠೋಡ, ಗುರುಪ್ರಸಾದ ಕವಿತಾಳ ಇನ್ನಿತರಿದ್ದರು. | Kannada Prabha

ಸಾರಾಂಶ

ಕರ್ನಾಟಕ ಸಂಭ್ರಮ-೫೦ರ ಕನ್ನಡ ಜ್ಯೋತಿ ರಥಯಾತ್ರೆಗೆ ಕನ್ನಡಾಭಿಮಾನಿಗಳು ಅಧಿಕಾರಿಗಳು ಜೊತೆಗೂಡಿ ಎಲ್ಲರೂ ಸಡಗರ ಸಂಭ್ರಮದಿಂದ ಮತ್ತು ಸಂಗೀತ ವಾದ್ಯಗಳದೊಂದಿಗೆ ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿಗೆ ಆಗಮಿಸಿದ ಕರ್ನಾಟಕ ಸಂಭ್ರಮ-೫೦ರ ಕನ್ನಡ ಜ್ಯೋತಿ ರಥಯಾತ್ರೆಗೆ ಕನ್ನಡಾಭಿಮಾನಿಗಳು ಅಧಿಕಾರಿಗಳು ಜೊತೆಗೂಡಿ ಎಲ್ಲರೂ ಸಡಗರ ಸಂಭ್ರಮದಿಂದ ಮತ್ತು ಸಂಗೀತ ವಾದ್ಯಗಳದೊಂದಿಗೆ ಬರಮಾಡಿಕೊಂಡರು.

ತಾಲೂಕಿನ ಗಡಿಪ್ರದೇಶ ಶಿರೋಳಿ ಗ್ರಾಮಕ್ಕೆ ಆಗಮಿಸಿದ ಯಾತ್ರೆಯನ್ನು ತಹಸೀಲ್ದಾರ್‌ ಸುಬ್ಬಣ್ಣ ಜಮಖಂಡಿ, ತಾಪಂ ಅಧಿಕಾರಿ ಶಂಕರ ರಾಠೋಡ, ಮಹಿಳೆಯರು, ಮಕ್ಕಳು ಹಾಗೂ ಗ್ರಾಮಸ್ಥರು ಭುವನೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಂಡರು.

ಸೇಡಂನಿಂದ ತಾಲೂಕಿನ ಶಿರೋಳಿ, ಹೂವಿನಹಳ್ಳಿ, ನಿಡಗುಂದಾ, ಕೊರಡಂಪಳ್ಳಿ, ಪೆಂಪನಪಳ್ಳಿ, ಸುಲೇಪೇಟ, ದಸ್ತಾಪೂರ, ಚಿಮ್ಮಾಇದಲಾಯಿ, ಬೊಮ್ಮನಳ್ಳಿ ಗ್ರಾಮಗಳ ಮೂಲಕ ಚಿಂಚೋಳಿ ಪಟ್ಟಣಕ್ಕೆ ಆಗಮಿಸಿದ ಜ್ಯೋತಿಯನ್ನು ಬಸವೇಶ್ವರ, ಅಂಬೇಡ್ಕರ್‌, ಸಂಗೋಳಿ ರಾಯಣ್ಣ, ಕನಕದಾಸ ಚೌಕ, ಬಸ್‌ ನಿಲ್ದಾಣ ಮೂಲಕ ಭವ್ಯಮೆರವಣಿಗೆಯೊಂದಿಗೆ ಡೊಳ್ಳು ಕುಣಿತ, ಹಲಗೆ ವಾದನ, ಕೋಲಾಟದಿಂದ ಸ್ವಾಗತಿಸಿದರು. ಶಾಲೆ ಕಾಲೇಜು ವಿದ್ಯಾರ್ಥಿಗಳು ಕನ್ನಡ ಬಾವುಟ ಪ್ರದರ್ಶಿಸಿದರು.

ಮೆರವಣಿಗೆಯಲ್ಲಿ ತಹಸೀಲ್ದಾರ್‌ ಸುಬ್ಬಣ್ಣ ಜಮಖಂಡಿ, ತಾಪಂ ಅಧಿಕಾರಿ ಶಂಕರ ರಾಠೋಡ, ಸಿಡಿಪಿಓ ಗುರುಪ್ರಸಾದ ಕವಿತಾಳ, ಕೃಷಿ ಅಧಿಕಾರಿ ವೀರಶೆಟ್ಟಿ ರಾಠೋಡ, ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳ, ಗ್ರೇಡ್‌-೨ ತಹಸೀಲ್ದಾರ್ ವೆಂಕಟೇಶ ದುಗ್ಗನ್, ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಬಿಸಿಯೂಟ ಅಧಿಕಾರಿ ಜಯಪ್ಪಚಾಪೆಲ, ಮಸೂದ ಖುರೇಶಿ, ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ, ಹಿರಿಯ ಸಾಹಿತಿ ನಾಟಕಕಾರ ಎಸ್.ಎನ್.ದಂಡಿನಕುಮಾರ, ಶ್ರೀನಿವಾಸ ಚಿಂಚೋಳಿಕರ, ಶ್ರೀಶೈಲ ನಾಗಾವಿ, ಮಲ್ಲಿಕಾರ್ಜುನ ಪಾಲಾಮೂರ, ಪತ್ರಕರ್ತರಾದ ಶಾಮರಾವ ಚಿಂಚೋಳಿ, ಜಗನ್ನಾಥ ಶೇರಿಕಾರ, ಕೆ.ಎಮ.ಬಾರಿ, ನರಸಮ್ಮ ಲಕ್ಷ್ಮಣ ಆವಂಟಿ, ನಾಗಶೆಟ್ಟಿ ಭದ್ರಶೆಟ್ಟಿ, ಅಮರ ಲೊಡನೋರ, ಕನ್ನಡ ಪರ ಸಂಘಟನೆಗಳ ಮುಖಂಡರಾದ ಶ್ರೀಕಾಂತ ಜಾನಕಿ, ಉಲ್ಲಾಸ ಕೆರೋಳಿ, ವಿಠಲ್ ಕುಸಾಳೆ, ಬಸವರಾಜ ವಾಡಿ, ರೇವಣಸಿದ್ದಯ್ಯ ಸ್ವಾಮಿ ನರನಾಳ, ಇನ್ನಿತರರಿದ್ದರು.

ಪಿಎಸ್‌ಐ ಹಣಮಂತ ಬಂಕಲಗಿ, ನಂದಿನಿ, ವೆಂಕಟೇಶ ನಾಯಕ, ಸಿಪಿಐ ಅಂಬಾರಾಯ ಕಮಾನಮನಿ ಸೂಕ್ತ ಪೋಲಿಸ ಬಂದೋಬಸ್ತ ವ್ಯವಸ್ಥೆಗೊಳಿಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ