ಹಲಾಲ್‌ಗಿಂತ ಚೀನಾ ವಸ್ತುಗಳು ಭಾರತಕ್ಕೆ ಅಪಾಯ: ಪ್ರಮೋದ ಮುತಾಲಿಕ್‌

KannadaprabhaNewsNetwork |  
Published : Sep 03, 2024, 01:36 AM IST
ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಹಲಾಲ್ ಗಿಂತ ಚೀನಾ ವಸ್ತುಗಳು ದೊಡ್ಡ ಅಪಾಯ. ಅವುಗಳನ್ನು ಜನರು ಬಹಿಷ್ಕರಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಲಾಲ್ ಗಿಂತ ಚೀನಾ ವಸ್ತುಗಳು ದೊಡ್ಡ ಅಪಾಯ. ಅವುಗಳನ್ನು ಜನರು ಬಹಿಷ್ಕರಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲಾಲ್‌ ಮುಕ್ತ ಗಣೇಶೋತ್ಸವ ಆಚರಣೆ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದೇವೆ. ಗಣೇಶ ಹಬ್ಬದಲ್ಲಿ ಹೂವು, ಹಣ್ಣು, ಕಾಯಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಹಲಾಲ್ ಕಟ್ ಮಾಡುವವರ ಕಡೆಯಿಂದ ಖರೀದಿಸಬಾರದು. ಗೋ ಹಂತಕರು, ಗೋ ಭಕ್ಷಕರು ಮಾರಾಟ ಮಾಡುವ ವಸ್ತು ಅಪವಿತ್ರವಾಗಿರುತ್ತದೆ. ದೇವಸ್ಥಾನದ ಸುತ್ತಮುತ್ತಲಿನ ಕಡೆ ಮುಸ್ಲಿಮರು ವ್ಯಾಪಾರ ನಡೆಸಿ ದೇವಸ್ಥಾನ ಧ್ವಂಸ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಹೈದರಾಬಾಜ್‌ನಲ್ಲಿ 16 ದೇವಸ್ಥಾನದ ಧ್ವಂಸ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಇಲ್ಲಿಯವರೆಗೂ ಹಿಂದುಗಳ ಮೇಲೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಿಲ್ಲ. 40 ಹಿಂದು ಶಿಕ್ಷಕರಿಂದ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆದು ಶಾಲಾ, ಕಾಲೇಜಿಗೆ ನುಗ್ಗಿ ಹಲ್ಲೆ ನಡೆಸುತ್ತಿದ್ದಾರೆ. ಹಿಂದು ಸಮಾಜವನ್ನು ಕೆಣಕುತ್ತಿರುವ ಪುಟಗೋಸಿ ಬಾಂಗ್ಲಾದೇಶಕ್ಕೆ ತಕ್ಕ ಉತ್ತರ ಕೊಡಬೇಕಿದ್ದ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಮೌನ ವಹಿಸಿರುದೇಕೆ ಎಂದು ಪ್ರಶ್ನಿಸಿದರು.

ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾಗೆ ರಕ್ಷಣೆ ಕೊಡುವ ಕೇಂದ್ರ ಸರ್ಕಾರ ಬಾಂಗ್ಲಾದೇಶದ ಹಿಂದುಗಳ ರಕ್ಷಣೆ ‌ಮಾಡುತ್ತಿಲ್ಲ. ಇಂದಿರಾ ಗಾಂಧಿಯವರು 1971ರಲ್ಲಿ ನಡೆಸಿದ ಯುದ್ಧದ ಮಾದರಿಯಲ್ಲಿ ಬಾಂಗ್ಲಾದೇಶದ ಮೇಲೆ ಕೇಂದ್ರ ಸರ್ಕಾರ ಕಾರ್ಯಾಚರಣೆ ನಡೆಸಬೇಕು. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ 5 ಕೋಟಿ, ಕರ್ನಾಟಕದಲ್ಲಿ 12 ಲಕ್ಷ ಜನರು ಬಾಂಗ್ಲಾ ನುಸುಳಿಕೋರರು ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ್ರೋಹಿಗಳು ಕ್ಯಾನ್ಸರ್ ಇದ್ದ ಹಾಗೆ. ಇವರನ್ನು ಈಗಲೇ ಹೊಸಕಿ ಹಾಕಬೇಕು. ಮಹಾರಾಷ್ಟ್ರದ ಜಳಗಾವದಲ್ಲಿ ರಾಮಗಿರಿ ಮಹಾರಾಜರು ವಿರುದ್ಧ ಸರತನ್ ಸೇ ಜುದಾ ಅಂತಾರೆ. ಇದೇನು ಪಾಕಿಸ್ತಾನವಾ ಎಂದು ಪ್ರಶ್ನಿಸಿದ ಅವರು, ರಾಮಗೀರಿ ಮಹಾರಾಜರ ಪರವಾಗಿ ಶ್ರೀರಾಮ ಸೇನೆ ನಿಲ್ಲಲಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದು ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣ ಹಿಂಪಡೆಯಬೇಕಿತ್ತು. ಆದರೆ ಇವರಿಗೆ ಚುನಾವಣೆಯಲ್ಲಿ ಮಾತ್ರ ಹಿಂದುಗಳು ನೆನಪಾಗುತ್ತಾರೆ‌. ಬಿಜೆಪಿ ಹುಟ್ಟಿದ್ದೇ ಜನಸಂಘ, ಹಿಂದು ಸಂಘಟನೆಯಿಂದ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು. ಶ್ರೀರಾಮ ಸೇನಾ ಮುಖಂಡರಾದ ರವಿ ಕೋಕಿತ್ಕರ್, ವಿನಯ ಅಂಗ್ರೋಳಿ, ವಿಠ್ಠಲ ಗಡ್ಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ