ಕನ್ನಡಪ್ರಭ ವಾರ್ತೆ ಚಿಂತಾಮಣಿ
ಚಿಕ್ಕಬಳ್ಳಾಪುರ ಜಿಲ್ಲೆಯ ವಾಣಿಜ್ಯ ನಗರಿ ಎಂದೇ ಪ್ರಸಿದ್ದಿಯಾದ ಚಿಂತಾಮಣಿಯಲ್ಲಿ ಎರಡು ವರ್ಷಗಳಿಂದ ನಗರಸಭೆಯಲ್ಲಿ ನೂತನ ಖಾತೆ ಸೇರಿದಂತೆ ಖಾತೆ ಬದಲಾವಣೆ, ಖಾತೆ ದುರಸ್ತಿ, ಈ-ಸ್ವತ್ತುಗಳನ್ನು ಸ್ಥಗಿತಗೊಳ್ಸಿರುವ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.ನಗರಸಭೆಗೆ ಬಹಳ ಪ್ರಮುಖ ಆದಾಯ ಅಂದರೆ ತೆರಿಗೆ, ಆದರೆ ಚಿಂತಾಮಣಿ ನಗರಸಭೆಯಲ್ಲಿ ಖಾತೆ ಕಾರ್ಯಗಳು ನಡೆಯದ ಪರಿಣಾಮ ಜನರು ತಮ್ಮ ಆಸ್ತಿ ತೆರಿಗೆ ಪಾವತಿಸಲು ಹಿಂಜರಿಯುತ್ತಿದ್ದು ಖಾತೆಗಳಿಗಾಗಿ ನಗರಸಭೆಗೆ ತಿರುಗಾಡುವಂತಾಗಿದೆ.
ದಲ್ಲಾಳಿಗಳ ಕಾರುಬಾರುಸಾಮಾನ್ಯವಾಗಿ ಯಾವುದೇ ಸರ್ಕಾರಿ ಕಚೇರಿ ಬಹುತೇಕವಾಗಿ ಜನಸಾಮನ್ಯರು ನೇರವಾಗಿ ಅಧಿಕಾರಿಗಳನ್ನು ಭೇಟಿ ಆಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ ನಗರಸಭೆಯ ಕಾರ್ಯಾಲಯದಲ್ಲಿ ಮಾತ್ರ ಖಾತೆ ಮಾಡಲು ಜನನ, ಮರಣ ಪ್ರಮಾಣಪತ್ರ ಪಡೆಯುವುದು ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ದಲ್ಲಾಳಿಗಳನ್ನೇ ಅವಲಂಭಿಸಬೇಕಾದ ಪರಿಸ್ಥಿತಿ ಉೆಟಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ದಲ್ಲಾಳಿಗಳಿಗೆ ಮಾತ್ರ ಆದ್ಯತೆನಗರಸಭೆಯಲ್ಲಿ ಖಾತೆ ಬದಲಾವಣೆಗೂ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರೂ ಸಹ ಅವುಗಳನ್ನು ಅಧಿಕಾರಗಳು ಪರಿಗಣಿಸುತ್ತಿಲ್ಲ. ಬದಲಾಗಿ ದಲ್ಲಾಳಿಗಳ ಮೂಲಕ ಮ್ಯಾನ್ಯುಯಲ್ ಫೈಲ್ ಹೋದರೆ ಅವುಗಳನ್ನು ಅಧಿಕಾರಿಗಳು ಮುಟ್ಟುತ್ತಾರೆ. ಸಾವಿರಾರು ರು. ಲಂಚ ಪಡೆಯುತ್ತಾರೆ ಎಂದು ಈ ಹಿಂದೆ ನಗರಸಭೆ ಸಾಮಾನ್ಯ ಸಭೆಯಲ್ಲೆ ಸದಸ್ಯರು ಆರೋಪ ಮಾಡಿದ್ದರು.
ಶೇ.೮೦ ರಷ್ಟು ಬಡಾವಣೆಗಳು ಬದ್ಧತೆಯಿಂದ ಕೂಡಿಲ್ಲ: ನಗರ ೩೧ ವಾರ್ಡ್‌ಗಳಲ್ಲಿ ನಿರ್ಮಾಣಗೊಂಡಿರುವ ೮೦ರಷ್ಟು ಬಡಾವಣೆಗಳು ಸರ್ಕಾರದ ಎಲ್ಲಾ ನಿಯಮಗಳ ಅಮುಸಾರ ಇಲ್ಲವಾದರೂ ನಗರದ ಸಾವಿರಾರು ಮನೆಗಳಿಗೆ ಇ ಖಾತೆ, ಇ ಸ್ವತ್ತು ಎಲ್ಲಾ ಮಾಡಿಕೊಡಲಾಗಿದೆ. ಆದರೆ ಕಳೆದೆರಡು ವರ್ಷದಿಂದ ಕಾನೂನು ಬದ್ದವಾಗಿದ್ದರೆ ಮಾತ್ರ ಖಾತೆ ಮಾಡಲಾಗುವುದೆಂದು ಅಧಿಕಾರಿಗಳು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಲಂಚಕೊಟ್ಟರೆ ಅನಧಿಕೃತವಾಗಿರುವ ಖಾತೆಗಳು ಸಹ ಅಧಿಕೃತವಾಗುತ್ತವೆ.ಪ್ರಗತಿ ಪರಿಶೀಲನಾ ಸಭೆ ಮಾಡಲಿ
ಸರ್ಕಾರದ ನಿಯಮಗಳ ಪ್ರಕಾರ ನಗರಸಭೆ ಸಾಮಾನ್ಯ ಸಭೆಗಳನ್ನು ಮಾಡಿ ಚರ್ಚಿಸಿದರೆ ಎಲ್ಲಾ ಅಭಿವೃದ್ದಿ ಆಗುತ್ತದೆ, ಇಲ್ಲವಾದರೆ ಖಾತೆಗಳು ಆಗುವುದಿಲ್ಲ, ಅಭಿವೃದ್ದಿಯೂ ಆಗಲ್ಲ, ತಾಲೂಕು, ನಗರ ಅಭಿವೃದ್ಧಿ ಆಗಬೇಕಾದರೆ, ಎಂಪಿ, ಎಂಎಲ್ ಎ, ನಗರಸಭೆ ಅಧ್ಯಕ್ಷರು ಸೇರಿ ತಿಂಗಳ ತಿಂಗಳ ಸಭೆ ಮಾಡಿ ಪ್ರಗತಿಪರಿಶೀಲನೆ ಮಾಡಿದರೆ ನಗರ ಅಭಿವೃದ್ಧಿ ಸಾಧ್ಯವಿಲ್ಲವೆಂದರೆ ಜನ ಅಭಿವೃದ್ಧಿ ಇಲ್ಲದೆ ತತ್ತರಿಸಿ ಹೋಗುತ್ತಾರೆಂದು ನಗರಸಭಾ ಸದಸ್ಯ ಮಹ್ಮದ್ ಶಪೀಕ್ ಆರೋಪಿಸಿದ್ದಾರೆ.ಕ್ರಮಬದ್ದವಾಗಿರುವ ಖಾತೆಗಳನ್ನು, ಸರ್ಕಾರದ ಸುತ್ತೋಲೆಯಂತೆ ಇರುವ ಖಾತೆಗಳನ್ನು ಮಾಡುತ್ತಿದ್ದೇವೆ, ಹಳೆಯ ಎಂ.ಎ.ಆರ್ ನಲ್ಲಿರುವ ಖಾತೆಗಳನ್ನು ಮಾಡಿದ್ದೇವಾದರೂ ಅಕ್ರಮ ಬಡಾವಣೆಗಳು, ಗ್ರಾಪಂ ವ್ಯಾಪ್ತಿಯಲ್ಲಿ ಇರುವ ಬಡಾವಣೆಗಳ ಖಾತೆಗಳನ್ನು ಮಾಡುತ್ತಿಲ್ಲವೆಂದು ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ತಿಳಿಸಿದ್ದಾರೆ.ಫೋಟೋ: ..............ನಗರಸಭೆ.