ಕನ್ನಡಪ್ರಭ ವಾರ್ತೆ ಕೋಲಾರ ಎಸ್.ಆಗ್ರಹಾರ ಸ.ನಂ. ೬೦ ಹಾಗೂ ಇರಗಸಂದ್ರ ಸ.ನಂ. ೫೨ ರಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಗ್ರಾಮಸ್ಥರು ಮತ್ತು ರೈತ ಸಂಘದಿಂದ ರಾಜ್ಯ ಹೆದ್ದಾರಿ ಚಿಟ್ನಹಳ್ಳಿ ಗೇಟ್ ಬಂದ್ ಮಾಡಿ, ಪರಿಸರ, ಗಣಿ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಗಣಿಗಾರಿಕೆಗೆ ಅನುಮತಿ ನೀಡಲು ಮುಂದಾಗಿರುವ ಜಮೀನಿನ ಪಕ್ಕದಲ್ಲಿಯೇ ಹತ್ತಾರು ಹಳ್ಳಿಗಳಿಗೆ ಚಾನುವಾರುಗಳಿಗೆ ಹಾಗೂ ವ್ಯವಸಾಯಕ್ಕೆ ಯೋಗ್ಯ ಹಾಗೂ ಗುಣಮಟ್ಟದ ನೀರು ಸಿಗುವ ಕೆರೆ ಇರುವ ಜೊತೆಗೆ ಪಕ್ಕದಲ್ಲಿಯೇ ಚೌಡೇಶ್ವರಿ ದೇವಸ್ಥಾನವು ಅಭಿವೃದ್ಧಿಯಾಗಿದ್ದು, ಪ್ರತಿ ವರ್ಷ ೧೦ ಸಾವಿರ ಜನ ಭಕ್ತಾದಿಗಳು ಸೇರುವ ಪ್ರದೇಶವಾಗಿದೆ. ಅದರ ಜೊತೆಗೆ ಸಾವಿರಾರು ಜಿಂಕೆಗಳು ನವಿಲುಗಳು ಕಾಡು ಪ್ರಾಣಿಗಳು ಪ್ರತಿ ದಿನ ಕೆರೆಯಲ್ಲಿ ನೀರು ಕುಡಿಯುತ್ತಿರುತ್ತವೆ ಎಂದು ಪ್ರತಿಭಟನಾಕಾರರು ಹೇಳಿದರು. ಅಧಿಕಾರಿಗಳ ಮೇಲೆ ಒತ್ತಡ
ಅಧಿಕಾರಿಗಳ ಭರವಸೆ:
ಮನವಿ ಸ್ವೀಕರಿಸಿ ಮಾತನಾಡಿದ ಗಣಿ ಪರಿಸರ, ಕಂದಾಯ ಅಧಿಕಾರಿಗಳು ಹತ್ತಾರು ಹಳ್ಳಿಯ ಸಾವಿರಾರು ರೈತರು ಗಣಿಗಾರಿಕೆಗೆ ತಕರಾರು ಇರುವುದರಿಂದ ಅವಕಾಶ ಮತ್ತು ಪರವಾನಿಗೆ ನೀಡುವುದಿಲ್ಲ ಎಂದು ಭರವಸೆ ನೀಡಿದರು.ಹೋರಾಟದಲ್ಲಿ ಗ್ರಾಪಂ ಸದ್ಯಸ್ಯರಾದ ಭೂಪತಿಗೌಡ, ಮಾದಮಂಗಲ ನಾಗರಾಜ ಬಾಸ್ಕರ, ಕೃಷ್ಣಪ್ಪ, ಮಂಜುನಾಥ, ಯಳೇಗೌಡ, ರಾಮು, ತಿಮ್ಮಣ್ಣ, ಗಿರೀಶ್, ರಾಜು, ಆಂಜಿನಪ್ಪ, ನಾಗರಾಜ್, ಕೃಷ್ಣಪ್ಪ, ಚಂದ್ರು, ಮುನಿಶಾಮಪ್ಪ, ಶ್ರೀನಿವಾಸ್, ವೆಂಕಟರವಣಪ್ಪ ಇದ್ದರು.