ರಾಮನಗರ: ಒಬ್ಬ ಹೆಣ್ಣುಮಗಳು ಏಕಾಂಗಿಯಾಗಿ ಬೈಕ್‌ರೈಡ್ ಮೂಲಕ ದೇಶದ ಉದ್ದಗಲಕ್ಕೂ 4800 ಕಿಲೋ ಮೀಟರ್ ದೂರ ಕ್ರಮಿಸಿ ವೃದ್ಧ ತಂದೆ ತಾಯಿಗಳ ಪಾಲನೆ ಪೋಷಣೆ ಮಹತ್ವವನ್ನ ಸಮಾಜಕ್ಕೆ ಸಾರುವ ಸಾಧನೆ ಅಸಾಮಾನ್ಯವಾದುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ ಅಭಿಪ್ರಾಯಪಟ್ಟರು.
ಭಾರತ ಯಾತ್ರೆ ಪೂರೈಸಿ ರಾಮನಗರಕ್ಕೆ ಹಿಂತಿರುಗಿದ ನೃತ್ಯ ಕಲಾವಿದೆ ರಾಮನಗರದ ಚಿತ್ರಾರಾವ್ ಅವರನ್ನು ಶುಕ್ರವಾರ ನಗರದಲ್ಲಿ ಸಂಘ ಸಂಸ್ಥೆಗಳಿಂದ ಸನ್ಮಾಸಿ ಸ್ವೀಕರಿಸಿ ಮಾತನಾಡಿದ ಅವರು, ಒಬ್ಬ ಹೆಣ್ಣುಮಗಳು ಅದರಲ್ಲೂ ರಾಮನಗರದ ಹೆಣ್ಣುಮಗಳು ಅಸಾಮಾನ್ಯ ಸಾಧನೆ ಮಾಡಿರುವುದು ನಮಗೆಲ್ಲರಿಗೂ ಹೆಮ್ಮೆ. ದೃಢ ನಿರ್ಧಾರದಿಂದ ಹೆಜ್ಜೆಇಟ್ಟು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಚಿತ್ರಾರಾವ್ ರಾಮನಗರಕ್ಕೆ ಮತ್ತು ಜನ್ಮ ನೀಡಿದ ತಂದೆ ತಾಯಿಗಳಿಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.ನಗರಸಭಾ ಸದಸ್ಯ ಕೆ.ಶೇಷಾದ್ರಿ(ಶಶಿ) ಮಾತನಾಡಿ, ಸಮಾಜಕ್ಕೆ ಚಿತ್ರಾರಾವ್ ಉತ್ತಮ ಸಂದೇಶ ಸಾರುವ ಮೂಲಕ ಮಹತ್ತರ ಜವಾಬ್ದಾರಿ ನಿರ್ವಹಿಸಿದ್ದಾರೆ. ರಾಮನಗರ ಜಿಲ್ಲೆಗೆ ಹೆಮ್ಮೆ ತಂದಿರುವ ನಮ್ಮ ಹೆಣ್ಣು ಮಗಳಿಗೆ ಜ.12ರಂದು ಸ್ವಾಮಿ ವಿವೇಕಾನಂದ ಅವರ ಜನ್ಮದಿನದ ಪ್ರಯುಕ್ತ ಅವರಿಗೆ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬಾಷ್ ಕಂಪನಿ ಅಧಿಕಾರಿ ಡಾ.ಪುಂಡಲೀಕ ಕಾಮತ್ ಮಾತನಾಡಿ, ಸಂಕಲ್ಪ ಮಾಡುವುದು ಸುಲಭ. ಆದರೆ ಅದನ್ನು ಸಿದ್ದಿ ಮಾಡಿಕೊಳ್ಳುವುದೇ ಸಾಧನೆ. ಅದಕ್ಕೆ ಛಲ, ಸತತ ಪರಿಶ್ರಮ, ಧೈರ್ಯ ಬೇಕು. ಅದನ್ನು ಚಿತ್ರಾರಾವ್ ಸಾಧಿಸಿದ್ದಾರೆ. ಇಂತಹ ಮತ್ತಷ್ಟು ಸಾಧನೆಗೆ ದೇವರು ಆ ಹೆಣ್ಣುಮಗಳಿಗೆ ಸ್ಪೂರ್ತಿ ನೀಡಲಿ ಎಂದು ಹೇಳಿದರು.ರೈತ ನಾಯಕಿ ಅನಸೂಯಮ್ಮ ಮಾತನಾಡಿ, ಇದೊಂದು ಅಸಾಮಾನ್ಯ ಸಾಧನೆ. ಈ ಸಾಧನೆಯಲ್ಲಿ ಅವರ ತಂದೆ-ತಾಯಿ ಶ್ರಮ ದೊಡ್ಡದು. ಅವರು ನೀಡಿದ ಸಂಸ್ಕಾರವೇ ಚಿತ್ರಾಳ ಸಾಧನೆಗೆ ಪ್ರೇರಣೆ. ಹೆಣ್ಣು ಮಕ್ಕಳಿಗೆ ಚಿತ್ರಾ ಸಾಧನೆ ಸ್ಪೂರ್ತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು ಸ್ವಾಗತಿಸಿ ಸನ್ಮಾನಿಸಿದರು.ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸೋಮಶೇಖರ್, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೆ. ಸತೀಶ್, ಕಸ್ತೂರಿಕರ್ನಾಟಕಜನಪರ ವೇದಿಕೆ ರಾಜ್ಯಾಧ್ಯಕ್ಷ ಎಲ್. ರಮೇಶ್‌ಗೌಡ, ಕರುನಾಡ ಸೇನೆ ಐಜೂರುಜಗದೀಶ್, ಭಾರತ್ ವಿಕಾಸ್ ಪರಿಷತ್‌ಅಧ್ಯಕ್ಷ ರಾ.ಶಿ. ಬಸವರಾಜು, ಹೊಂಬೆಳಕು ಪೋಲೀಸ್ ಸುರೇಶ್, ಸಾಂಸ್ಕೃತಿಕ ಸಂಘಟಕಿ ಕವಿತಾರಾವ್, ಹಿರಿಯ ವಕೀಲ ಎಚ್.ವಿ. ಶೇಷಾದ್ರಿಅಯ್ಯರ್, ಶಿಕ್ಷಕರಾದ ಕಾಂತರಾಜು, ವಾಸು, ಲಿಂಗರಾಜು, ಪ್ರಭಾಕರ್, ಧನಂಜರ, ಸುಮಂಗಲ, ಸಿದ್ದರಾಜು, ಮುಖಂಡರಾದ ಎಸ್. ರುದ್ರೇಶ್ವರ, ಸಮದ್, ಮುಕುಂದರಾವ್, ಕೆಂಪರಾಜು, ಸೋಮಶೇಖರರಾವ್, ಶ್ರೀನಿವಾಸ ರಾವ್ ನಲಿಗೆ, ಎಸ್. ಬೈರೇಗೌಡ, ಸಿ.ಆರ್. ಅರುಣ್ ಕುಮಾರ್, ಪುನೀತ್ ರಾಜ್, ಕುಮಾರ್, ಚಂದ್ರಶೇಖರಯ್ಯ, ಚಂದನ್ ಮೋರೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು. ಪೊಟೋ೨೯ಸಿಪಿಟಿ೨:
ರಾಮನಗರದಲ್ಲಿ ಬೈಕ್‌ರೈಡ್ ಮೂಲಕ ಏಕಾಂಗಿ ಭಾರತ ಯಾತ್ರೆ ಪೂರೈಸಿ ಹಿಂದುರುಗಿದ ನೃತ್ಯ ಕಲಾವಿದೆ ಚಿತ್ರಾರಾವ್ ಅವರನ್ನು ಸಂಘ ಸಂಸ್ಥೆಗಳ ಮುಖಂಡರು ಸ್ವಾಗತಿಸಿ ಸನ್ಮಾಸಿದರು.