ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪಂಚಾಚಾರ್ಯ ಕಲ್ಯಾಣ ಮಂಟಪದ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ವರ್ಣರಂಜಿತ ಗಣಪತಿ ಪ್ರತಿಷ್ಠಾಪನಾ ಪೆಂಡಾಲ್‍ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಾವತಾರ ಮಾದರಿಯಲ್ಲಿ ಪೆಂಡಾಲ್ ಕೆಲಸ ಆರಂಭಗೊಂಡಿದ್ದು, ಬುಧವಾರ ಗಣಪತಿ ಪುರ ಪ್ರವೇಶ ಮಾಡಲಿದೆ. ಹಿಂದೂ ಮಹಾಗಣಪತಿ ಎಂದರೆ ದೇಶ ಭಕ್ತಿಯನ್ನು ಹೆಚ್ಚಿಸ ಮೂಲ ಉದ್ದೇಶ. ವರ್ಷದಿಂದ ವರ್ಷಕ್ಕೆ ಭಕ್ತಾಧಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ವಿವಿಧ ಕಲಾ ತಂಡ ವಾದ್ಯಗೋಷ್ಠಿಗಳೊಂದಿಗೆ ಹಿಂದು ಮಹಾಗಣಪತಿಯನ್ನು ಮೆರವಣಿಗೆ ಮೂಲಕ ಪೆಂಡಾಲ್‍ಗೆ ತರಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರತಿಷ್ಠಾಪಿಸುವ ಗಣಪತಿಯಲ್ಲಿ ರಾಷ್ಟ್ರೀಯತೆ, ದೇಶಭಕ್ತಿ, ಸಂಸ್ಕೃತಿ ಬಿಂಬಿಸುವುದು ಕಂಡು ಬಂದಲ್ಲಿ ಅಂತಹ 25 ಗಣಪತಿಗಳಿಗೆ ಬಹುಮಾನ ನೀಡಲಾಗುವುದು. ಗಣಪತಿ ವಿಸರ್ಜನಾ ಸಂಬಂಧ ಸೆ.28 ರಂದು ನಡೆಯುವ ಶೋಭಾಯಾತ್ರೆಯನ್ನು ಬಜರಂಗದಳದ ನೀರಜ್ ತೊಗೇರಿಯಾ ಉದ್ಘಾಟಿಸಲಿದ್ದಾರೆ ಎಂದರು.ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಬಿ.ನಯನ್ ಮಾತನಾಡಿ, 21 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 26 ರಂದು ಕನಕ ವೃತ್ತದಿಂದ ಹೊರಡುವ ಬೈಕ್ ರ್‍ಯಾಲಿ ನಗರದೆಲ್ಲೆಡೆ ಸಂಚರಿಸಲಿದ್ದು, 28 ರಂದು ಮಹಾಗಣಪತಿಯನ್ನು ವಿಸರ್ಜಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಐಶ್ವರ್ಯ ಗ್ರೂಪ್ ಆಫ್ ಹೋಟೆಲಿಸಿ ಶರಣ್, ಬಜರಂಗದಳದ ಜಿಲ್ಲಾ ಸಂಯೋಜಕ ಸಂದೀಪ್, ವಿಶ್ವಹಿಂದೂ ಪರಿಷತ್ ನಗರಾಧ್ಯಕ್ಷ ಈ.ಅಶೋಕ್, ಉಪಾಧ್ಯಕ್ಷ ಜಿ.ಎಸ್.ರಂಗಸ್ವಾಮಿ ಹಾಜರಿದ್ದರು.