ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಅ. 27ರಂದು ಆರಂಭವಾದ ''''''''''''''''ಚಿಟ್ಟಾಣಿ ಸಂಸ್ಮರಣ ಸಪ್ತಾಹ'''''''''''''''' ನ.2ರಂದು ಸಮಾಪನಗೊಂಡಿತು. ಚಿಟ್ಟಾಣಿ ರಾಮಚಂದ್ರ ಹೆಗಡೆ ಸಂಸ್ಮರಣ ಪ್ರಶಸ್ತಿಯನ್ನು ಮರಣೋತ್ತರವಾಗಿ ಥಂಡಿಮನೆ ಶ್ರೀಪಾದ ಭಟ್ಟರಿಗೆ ನೀಡಲಾಯಿತು. ಅವರ ಪತ್ನಿ ಸುನಿತಾ ಶ್ರೀಪಾದ ಭಟ್ ಸ್ವೀಕರಿಸಿದರು.
ಅನುಗ್ರಹ ಸಂದೇಶ ನೀಡಿದ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಯಕ್ಷಗಾನ ಸಪ್ತಾಹದಿಂದ ಕೃಷ್ಣ ಸಂಪ್ರೀತನಾಗಿದ್ದಾನೆ. ಕಲೆಯ ಆರಾಧನೆಗೆ ಕಾರಣರಾದ ಎಲ್ಲರಿಗೆ ಸನ್ಮಂಗಲವಾಗಲಿ ಎಂದರು.ವೇದಿಕೆಯಲ್ಲಿ ಡಾ. ಟಿ. ಎಸ್. ರಾವ್, ನರಸಿಂಹ ಚಿಟ್ಟಾಣಿ, ಅಭಿಮಾನಿ ಬಳಗದ ಕಾರ್ಯದರ್ಶಿ ಗೋಪಿಕೃಷ್ಣ ರಾವ್, ಯಕ್ಷಗಾನ ಕಲಾರಂಗದ ಎಂ. ಗಂಗಾಧರ ರಾವ್, ಮುರಲಿ ಕಡೆಕಾರ್ ಉಪಸ್ಥಿತರಿದ್ದರು.ಅಭಿಮಾನಿ ಬಳಗದ ಅದ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.