ಚಿತ್ತಾಪುರ: ಚಿರತೆ ಪ್ರತ್ಯಕ್ಷ, ಸೆರೆಗೆ ಬೋನು

KannadaprabhaNewsNetwork |  
Published : Feb 06, 2024, 01:31 AM ISTUpdated : Feb 06, 2024, 01:52 PM IST
ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಹೊರವಲಯದ ಹೊಲವೊಂದರಲ್ಲಿ ಚಿರತೆ ಶ್ವಾನವೊಂದಕ್ಕೆ ದಾಳಿ ಮಾಡಿ ಗಾಯಗೊಳಿಸಿದ ಕಾರಣ ಅರಣ್ಯ ಇಲಾಖೆಯ ವತಿಯಿಂದ ಅದನ್ನು ಸೆರೆ ಹಿಡಿಯಲು ಬೊನು ಹಾಕಿರುವದು. | Kannada Prabha

ಸಾರಾಂಶ

ಲಾಡ್ಲಾಪುರ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿ ಶ್ವಾನದ ಮೇಲೆ ದಾಳಿ ಮಾಡಿರುವ ಘಟನೆಯ ಹಿನ್ನಲೆಯಲ್ಲಿ ಆ ಪ್ರದೇಶದಲ್ಲಿ ಅದನ್ನು ಸೆರೆ ಹಿಡಿಯಲು ಬೋನು ಹಾಕಲಾಗಿದೆ.

ಚಿತ್ತಾಪುರ: ತಾಲೂಕಿನ ಲಾಡ್ಲಾಪುರ ಹೊರವಲಯದ ಸುತ್ತ ಮುತ್ತ ಗುಡ್ಡಗಾಡು ಪ್ರದೇಶ ಇದ್ದು ಲಾಡ್ಲಾಪುರ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿ ಶ್ವಾನದ ಮೇಲೆ ದಾಳಿ ಮಾಡಿರುವ ಘಟನೆಯ ಹಿನ್ನಲೆಯಲ್ಲಿ ಆ ಪ್ರದೇಶದಲ್ಲಿ ಅದನ್ನು ಸೆರೆ ಹಿಡಿಯಲು ಬೋನು ಹಾಕಲಾಗಿದೆ ಎಂದು ಅರಣ್ಯ ವಲಯ ಅಧಿಕಾರಿ ವಿಜಯಕುಮಾರ ಬಡೀಗೇರ ತಿಳಿಸಿದ್ದಾರೆ.

ತಾಲೂಕಿನ ದಂಡಗುಂಡ, ಅಲ್ಲೂರ, ಯಾಗಾಪುರ ಸೇರಿದಂತೆ ಕೆಲ ಗ್ರಾಮಗಳ ಸುತ್ತ ಮುತ್ತ ಗುಡ್ಡಗಾಡು ಪ್ರದೇಶಗಳಿದ್ದು ಅಲ್ಲಿ ಆಗಾಗ ಕಾಡುಪ್ರಾಣಿಗಳ ಹಾವಳಿ ಎದುರಾಗುತ್ತಿದ್ದು ಸುರಕ್ಷತೆಗಾಗಿ ನಮ್ಮ ಅರಣ್ಯ ಇಲಾಖೆಯು ಹಲವಾರು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಜನರ ಸಂರಕ್ಷಣೆಯನ್ನು ಮಾಡುತ್ತಿದ್ದು ಲಾಡ್ಲಾಪುರ ಹೊರವಲಯದಲ್ಲಿ ಚಿರತೆಯು ಶ್ವಾನದ ಮೇಲೆ ದಾಳಿ ಮಾಡಿದ ಹಿನ್ನಲೆಯಲ್ಲಿ ಆ ಪ್ರದೇಶದಲ್ಲಿ ಅದನ್ನು ಸೆರೆ ಹಿಡಿಯಲು ಬೊನು ಅಳವಡಿಸಿ ಅಲ್ಲಿನ ಜನರ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ