ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ತಡೆಗೆ ಚೌಕಟ್ಟು ಆ್ಯಪ್ ಬಿಡುಗಡೆ: ದೀಪಕ್

KannadaprabhaNewsNetwork |  
Published : Nov 21, 2026, 01:45 AM IST
19ಕೆಎಂಎನ್ ಡಿ19 | Kannada Prabha

ಸಾರಾಂಶ

ಕಾಳಸಂತೆಯಲ್ಲಿ ರಸಗೊಬ್ಬರದ ಮಾರಾಟ ತಡೆಗಟ್ಟಿ ರೈತರಿಗೆ ನಿಖರ ಬೆಲೆಯಲ್ಲಿ ಅಗತ್ಯ ರಸಗೊಬ್ಬರ ಪೂರೈಕೆಗಾಗಿ ಕೇಂದ್ರ ಸರ್ಕಾರ ರಸಗೊಬ್ಬರ ಮಾರಾಟ ಚೌಕಟ್ಟು ಆ್ಯಪ್ (ಎಫ್ಎಫ್ಎಸ್) ಬಿಡುಗಡೆ ಮಾಡಿದೆ. ರೈತರು ಆ್ಯಪ್ ಡೌನ್ ಲೋಡ್ ಮಾಡಿಕೊಂಡು ತಮ್ಮ ಇಷ್ಟದ ಅಂಗಡಿಯಲ್ಲಿ ಅಗತ್ಯ ರಸಗೊಬ್ಬರ ಪಡೆಯಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಾಳಸಂತೆಯಲ್ಲಿ ರಸಗೊಬ್ಬರದ ಮಾರಾಟ ತಡೆಗಟ್ಟಿ ರೈತರಿಗೆ ನಿಖರ ಬೆಲೆಯಲ್ಲಿ ಅಗತ್ಯ ರಸಗೊಬ್ಬರ ಪೂರೈಕೆಗಾಗಿ ಕೇಂದ್ರ ಸರ್ಕಾರ ರಸಗೊಬ್ಬರ ಮಾರಾಟ ಚೌಕಟ್ಟು ಆ್ಯಪ್ (ಎಫ್ಎಫ್ಎಸ್) ಬಿಡುಗಡೆ ಮಾಡಿದೆ. ರೈತರು ಆ್ಯಪ್ ಡೌನ್ ಲೋಡ್ ಮಾಡಿಕೊಂಡು ತಮ್ಮ ಇಷ್ಟದ ಅಂಗಡಿಯಲ್ಲಿ ಅಗತ್ಯ ರಸಗೊಬ್ಬರ ಪಡೆಯುವಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ದೀಪಕ್ ಮನವಿ ಮಾಡಿದರು.

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ, ತಾಲೂಕು ಕೃಷಿಕ ಸಮಾಜದ ಸಹಯೋಗದಲ್ಲಿ ನಡೆದ ರಸಗೊಬ್ಬರ ಮಾರಾಟ ಚೌಕಟ್ಟು ಆ್ಯಪ್ ಬಗ್ಗೆ ತರಬೇತಿ ಶಿಬಿರದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ರೈತರಿಗೆ ಅಗತ್ಯ ರಸಗೊಬ್ಬರ ಪೂರೈಕೆಗೆ 1.7 ಲಕ್ಷ ಕೋಟಿ ಅನುದಾನ ನೀಡುತ್ತಿದೆ. ಆದರೆ, ಸಹಾಯಧನದಡಿ ಪೂರೈಕೆಯಾದ ರಸಗೊಬ್ಬರ ಕೆಲವು ಕಡೆ ಅಕ್ರಮವಾಗಿ ಕಾಳಸಂತೆ ಸೇರುತ್ತಿದೆ ಎಂದರು.

ಗೊಬ್ಬರ ಮಾರಟ ಮಾಡುವ ವ್ಯಾಪಾರಿಗಳೂ ಕೂಡ ಕೆಲವೊಮ್ಮೆ ತಮ್ಮಲ್ಲಿ ಅಗತ್ಯ ದಾಸ್ತಾನು ಇದ್ದರೂ ಅದನ್ನು ಬಚ್ಚಿಟ್ಟು ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಎಂಆರ್‌ಪಿ ದರಕ್ಕಿಂತಲೂ ಅಧಿಕ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಕೆಲವು ವರ್ತಕರು ಒಂದು ಚೀಲ ಯೂರಿಯಾ ಕೊಂಡರೆ ಅದರ ಜೊತೆಯಲ್ಲಿ ರೈತರಿಗೆ ಅಗತ್ಯವಿಲ್ಲದ ಇತರೆ ಗೊಬ್ಬರ ಕೊಂಡುಕೊಳ್ಳುವಂತೆ ಕಡ್ಡಾಯ ಮಾಡಿ ರೈತನ ಶೋಷಣೆ ಮಾಡುತ್ತಿದ್ದಾರೆ ಎಂದರು.

ಇದೆಲ್ಲವನ್ನು ತಪ್ಪಿಸಲು ಕೇಂದ್ರ ಸರ್ಕಾರ ಇದೀಗ ರಸಗೊಬ್ಬರ ಮಾರಾಟ ಚೌಕಟ್ಟು ಆ್ಯಪ್(ಎಫ್‌ಎಫ್ಎಸ್) ಬಿಡುಗಡೆ ಮಾಡಿದೆ. ರೈತರು ಆ್ಯಪ್ ಡೌನ್ ಲೋಡ್ ಮಾಡಿಕೊಂಡು ತಮಗೆ ಅಗತ್ಯ ರಸಗೊಬ್ಬರವನ್ನು ಮಾರಾಟದ ಅಂಗಡಿಗಳಲ್ಲಿ ಪಡೆದುಕೊಳ್ಳಬಹುದು ಎಂದರು.

ರಾಜ್ಯದ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಎಫ್ಎಫ್ಎಸ್ ನೀತಿ ಜಾರಿಗೆ ತಂದಿದ್ದು ಯಶಸ್ವಿಯಾಗಿದೆ. ಆ್ಯಪ್ ಡೌನ್ ಲೋಡ್ ಬಗ್ಗೆ ರೈತರು ಮತ್ತು ಗೊಬ್ಬರ ವ್ಯಾಪಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ರೈತರಿಗೆ ನೂತನ ಆ್ಯಪ್ ಡೌನ್ ಲೋಡ್ ಸಮಸ್ಯೆಯಾದರೆ ಸ್ಥಳೀಯ ಕೃಷಿ ಇಲಾಖೆ ಹಾಗೂ ಕೃಷಿ ಸಖಿಯರ ಸಹಕಾರ ಪಡೆದುಕೊಳ್ಳಬೇಕು ಎಂದರು.

ಸಭೆಯಲ್ಲಿ ಸಹಾಯಕ ಕೃಷಿ ಅಧಿಕಾರಿ ಶ್ರೀಧರ್, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಎತ್ತುಗೋನಹಳ್ಳಿ ನಾರಾಯಣಗೌಡ, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಮರುವನಹಳ್ಳಿ ಶಂಕರ್, ಕರೋಟಿ ತಮ್ಮಯ್ಯ, ಚೌಡೇನಹಳ್ಳಿ ಕೃಷ್ಣೇಗೌಡ, ಕೃಷ್ಣಾಪುರ ರಾಜಣ್ಣ, ಮಡುವಿನಕೋಡಿ ಪ್ರಕಾಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ
ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ