ಉಡುಪಿಯಲ್ಲಿ ಕ್ರಿಸ್ಮಸ್ ಕೇಕ್ ತಯಾರಿಕೆ: ಮಿಕ್ಸಿಂಗ್‌ಗೆ ಚಾಲನೆ

KannadaprabhaNewsNetwork |  
Published : Nov 02, 2025, 04:00 AM IST
01ಕೇಕ್ರಂಜಿತಾ ಪ್ಯಾಲೇಸ್‌ನಲ್ಲಿ ಕ್ರಿಸ್ಮಸ್ ಕೇಸ್ ಮಿಕ್ಸಿಂಗ್ ನಡೆಸಲಾಯಿುತು | Kannada Prabha

ಸಾರಾಂಶ

ಕ್ರಿಸ್ಮಸ್ ಹಬ್ಬ ಆರಂಭವಾಗಿದ್ದು, ಈಗಾಗಲೇ ಎಲ್ಲೆಡೆ ಹಬ್ಬದ ತಯಾರಿ ಆರಂಭವಾಗಿದೆ. ಇಲ್ಲಿನ ರಂಜಿತಾ ಪ್ಯಾಲೇಸ್ ಹೋಟೆಲ್‌ನಲ್ಲಿ ಶನಿವಾರ ಅದ್ದೂರಿಯಾಗಿ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ಗಣ‍್ಯರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕ್ರಿಸ್ಮಸ್ ಹಬ್ಬ ಆರಂಭವಾಗಿದ್ದು, ಈಗಾಗಲೇ ಎಲ್ಲೆಡೆ ಹಬ್ಬದ ತಯಾರಿ ಆರಂಭವಾಗಿದೆ. ಇಲ್ಲಿನ ರಂಜಿತಾ ಪ್ಯಾಲೇಸ್ ಹೋಟೆಲ್‌ನಲ್ಲಿ ಶನಿವಾರ ಅದ್ದೂರಿಯಾಗಿ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ಗಣ‍್ಯರ ಉಪಸ್ಥಿತಿಯಲ್ಲಿ ನಡೆಸಲಾಯಿತು.ಗಣ್ಯರು ಬಾಣಸಿಗ ಟೋಪಿಗಳು ಮತ್ತು ಅಪ್ರಾನ್‌ಗಳನ್ನು ಧರಿಸಿ ಒಣದ್ರಾಕ್ಷಿ, ಸಕ್ಕರೆ ಪಾಕದಲ್ಲಿ ಹಾಕಿದ ಹಣ್ಣಿನ ಸಿಪ್ಪೆಗಳು, ಖರ್ಜೂರ, ಚೆರ್ರಿಗಳು ಮತ್ತು ಪರಿಮಳಯುಕ್ತ ಮಸಾಲೆಗಳಂತಹ ಪದಾರ್ಥಗಳನ್ನು ಮಿಶ್ರಣ ಮಾಡಿದರು. ಹಣ್ಣುಗಳು ಮತ್ತು ಬೀಜಗಳನ್ನು ಕಲಸಿ ನೆನಸಿ ಇಡಲಾಯಿತು. ರಾಶಿರಾಶಿ ಡ್ರೈ ಫ್ರುಟ್ಸ್ ಗುಡ್ಡೆ ಹಾಕಿ, ಅದರ ಮೇಲೆ ಲೀಟರ್ ಗಟ್ಟಲೆ ಆಲ್ಕೋಹಾಲ್ ಸುರಿದು ಕೇಕ್ ಮಿಕ್ಸಿಂಗ್ ಮಾಡಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ಭಾಗವಹಿಸಿ, ಕ್ರಿಸ್ಮಸ್ ಹಬ್ಬ ಬಂತೆಂದರೆ ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ಕೇಕ್ ಈ ಹಬ್ಬದ ಪ್ರಮುಖ ಖಾದ್ಯವಾಗಿದ್ದು, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡುವುದರೊಂದಿಗೆ ಕೇಕ್ ಸವಿಯನ್ನು ಸವಿಯುವುದು ವಾಡಿಕೆ. ಹಬ್ಬದ ಮೂಲಕ ಪರಸ್ಪರ ಪ್ರೀತಿ ಮತ್ತು ಸಹೋದರತೆಯನ್ನು ಬಲಪಡಿಸಲು ಸಾಧ್ಯವಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಡುಪಿ ತನಿಷ್ಕ್ ಜುವೆಲ್ಲರಿಯ ಮ್ಯಾಕ್ಷಿಮ್ ಸಲ್ಡಾನಾ, ದಾಯ್ಜಿವಲ್ಡ್ ನಿರ್ದೇಶಕ ಕಿಶೋರ್ ಗೊನ್ಸಾಲ್ವಿಸ್ ಜೊತೆಯಾಗಿ ಕೇಕ್ ಮಿಕ್ಸಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಹೋಟೆಲಿನ ವ್ಯವಸ್ಥಾಪಕ ನಿರ್ದೇಶಕ ವಾಸುದೇವ ನಾಯಕ್, ವ್ಯವಸ್ಥಾಪಕ ಮನೋಜ್ ಪೂಜಾರಿ, ಫುಡ್ ಆ್ಯಂಡ್ ಬೆವರೇಜ್ ವ್ಯವಸ್ಥಾಪಕ ಪ್ರಮೋದ್ ಪೂಜಾರಿ, ಎಕ್ಸಿಕ್ಯೂಟಿವ್ ಶೆಫ್ ಶ್ರೀನಿವಾಸ್, ಹಾಟ್ ಚಿಕ್ಸ್ ಮಣಿಪಾಲ ಸಂಸ್ಥೆಯ ಡೊಲ್ಫಿ ಮಸ್ಕರೇನ್ಹಸ್ ಹಾಗೂ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ