ಕನ್ನಡಪ್ರಡ ವಾರ್ತೆ ರಾಯಚೂರು
ಮನುಕುಲಕ್ಕೆ ಶಾಂತಿ ಆಚರಣೆಯಡಿ ದೈವತ್ವದ ಮಾರ್ಗತೋರಿದ ಏಸು ಕ್ರಿಸ್ತನ ಜನ್ಮ ದಿನ ನಿಮಿತ್ತ ಕ್ರೈಸ್ತ ಬಾಂಧವರ ಆಚರಿಸುವ ಹಬ್ಬಗಳಲ್ಲಿ ಅತ್ಯಂತ ದೊಡ್ಡದಾದ ಕ್ರಿಸ್‌ಮಸ್ ಹಬ್ಬವನ್ನು ಎಲ್ಲಡೆ ಸಂಭ್ರಮ-ಸಡಗರದಿಂದ ಸೋಮವಾರ ಆಚರಿಸಲಾಯಿತು.ನಗರದ ಸೇರಿದಂತೆ ಜಿಲ್ಲೆಯ ತಾಲೂಕು, ಹೋಬಳಿ ಮತ್ತು ಗ್ರಾಮೀಣ ಭಾಗದ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ನಿಮಿತ್ತ ವಿಶೇಷ ಪ್ರಾರ್ಥನೆ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಹಬ್ಬ ಹಿನ್ನೆಲೆಯಲ್ಲಿ ಕ್ರೈಸ್ತಬಾಂಧವರು ಹೊಸಬಟ್ಟೆಗಳನ್ನು ಧರಿಸಿಕೊಂಡು ಸಮೀಪದ ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ನೆರವೇರಿಸಿ, ಏಸುವಿನ ಜೀವನ, ಸಾಧನೆ, ಪವಾಡಗಳ ಮೆಲುಕು ಹಾಕಿದರು.
ಕ್ರಿಸ್‌ಮಸ್ ನಿಮಿತ್ತ ಕ್ರೈಸ್ತ ಬಾಂಧಾವರು ತಮ್ಮ ಮೆಗಳಲ್ಲಿ ಏಸು ಕ್ರಿಸ್ತನ ಜನ್ಮ ಸ್ಥಾನ ದನದ ಗೋದಲಿಯನ್ನು ಅಲಂಕೃತಗೊಳಿಸಿ, ದೀಪಗಳನ್ನು ಹಾಕಿದ್ದರು. ಕ್ರಿಸ್‌ಮಸ್ ಮರಕ್ಕೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಚರ್ಚ್, ಕ್ರೈಸ್ತರ ಪ್ರಾರ್ಥನ ಮಂದಿರಗಳಲ್ಲಿ ದೀಪಾಲಂಕಾರ, ಕೇಕ್ ಕತ್ತರಿಸಿ ಪರಸ್ಪರ ಹಂಚಿಕೊಂಡು,ಏಸು ನಾಮಸ್ಮರಣಾ ಕಾರ್ಯಕ್ರಮಗಳು ನಡೆದವು.ನಗರದ ಇನ್‌ಫೆಂಟ್ ಜೀಸಸ್ ಶಾಲೆ, ಮೆಥೋಡಿಸ್ಟ್, ಕ್ಯಾಥೋಲಿಕ್, ಸೆಂಟ್ ಮೇರಿ, ಅಗಾಪೆ ಚರ್ಚ್‌ಗಳಲ್ಲಿ, ಫಾನ್ಸಿಸ್ ದೇವಾಲಯಗಳಲ್ಲಿಯೂ ಕ್ರೈಸ್ತ ಬಾಂಧವರು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿ ಇಡೀ ದಿನ ಸಂತ ಏಸುಕ್ರಿಸ್ತನ ಸ್ಮರಣೆಯನ್ನು ಮಾಡಿದರು.
ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಚರ್ಚ್‌ನಲ್ಲಿ ಕ್ರೈಸ್ತ ಧರ್ಮ ಗುರುಗಳು ಸಾಮೂಹಿಕ ಪ್ರಾರ್ಥನೆಗೆ ಮಾರ್ಗದರ್ಶನ ನೀಡಿದರು. ಮಹಾನ್ ದೈವ ಏನು ಕ್ರಿಸ್ತ ನೀಡಿರುವ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ನೆರೆದ ಭಕ್ತರಿಗೆ ಸಂದೇಶವನ್ನು ರವಾನಿಸಿದರು.ಳೀಯ ಮೆಥೋಡಿಸ್ಟ್ ಚರ್ಚ್‌ನಲ್ಲಿ ನಡೆದ ಕ್ರಿಸ್‌ಮಸ್ ಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ.ಶಿವರಾಜ ಪಾಟೀಲ್ ಕೇಕ್ ಕತ್ತರಿಸಿ ಶುಭಾಶಯಗಳನ್ನು ಕೋರಿದರು. ಈ ವೇಳೆ ಮಾತನಾಡಿ, ಶಾಂತಿ ಪ್ರಿಯನಾಗಿರುವ ಏನು ಕ್ರಿಸ್ತನು ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ದೇವನಾಗಿದ್ದು, ಅದಕ್ಕಾಗಿಯೇ ಜಗತ್ತಿನಲ್ಲಿ ಅತೀ ಹೆಚ್ಚಿನ ಜನರು ಏನು ಪ್ರಭುವನ್ನು ಆರಾಧಿಸುತ್ತಾರೆ. ಪ್ರಪಂಚದ ಎಲ್ಲ ಧರ್ಮಗಳ ಉದ್ದೇಶ ಶಾಂತಿ, ಸಹಭಾಳ್ವೆ, ನೆಮ್ಮದಿ ಹಾಗೂ ಸಾಮರಸ್ಯದ ಜೀವನ ನಡೆಸುವುದಾಗಿದೆ. ಆ ಅಂಶಗಳಡಿಯಲ್ಲಿಯೇ ಕ್ರೈಸ್ತ ಧರ್ಮದ ಸ್ಥಾಪನೆಗೊಂಡಿದೆ. ನಮ್ಮೆಲ್ಲರಿಗೂ ಏಸು ಕ್ರಿಸ್ತನು ಸುಖ-ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.
ನಂತರ ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಮಾತನಾಡಿ, ಶಾಂತಿಯ ಸಂದೇಶ ನೀಡಿದ ಯೇಸು ಕ್ರಿಸ್ತನ ಜನ್ಮದಿನದ ಅಂಗವಾಗಿ ಇಡೀ ವಿಶ್ವದೆಲ್ಲೆಡೆ ಕ್ರಿಸ್‌ಮಸ್ ಹಬ್ಬ ಆಚರಣೆ ಮಾಡಲಾಗುತ್ತದೆ. ಸಕಲ ಮಾನವರಿಗೆ ಲೇಸನ್ನು ಬಯಸಿದ ಆತನ ಸಂದೇಶಗಳನ್ನು ಪ್ರಚಾರ ಪಡಿಸಿ ಎಲ್ಲಾ ಸಮುದಾಯಗಳೊಂದಿಗೆ ಬಾಂಧವ್ಯ ಹೊಂದಿರುವ ಕ್ರೈಸ್ತರ ಮಾದರಿಯಾಗಿದೆ ಎಂದು ಹೇಳಿದರು.ಈ ಸಂದಭರ್ದಲ್ಲಿ ಕ್ರೈಸ್ತ ಧರ್ಮಗುರು ಎ.ಸಿಮಿಯೋನ್,ವಿವಿಧ ಪಕ್ಷಗಳ ಮುಖಂಡರಾದ ಮೊಹಮ್ಮದ ಶಾಲಂ, ರವೀಂದ್ರ ಜಲ್ದಾರ್,ಎ.ವಸಂತ ಕುಮಾರ, ಜಯಣ್ಣ, ರಮೇಶ, ಸೇರಿದಂತೆ ಪ್ರಮುಖರು, ಕ್ರೈಸ್ತಬಾಂಧವರು ಭಾಗವಹಿಸಿದ್ದರು.