ಕನ್ನಡಪ್ರಭ ವಾರ್ತೆ ಹನೂರು ತಾಲೂಕಿನ ವಿವಿಧಡೆ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರದೊಂದಿಗೆ ಆಚರಣೆ ನಡೆಯಿತು. ಹನೂರು ತಾಲೂಕಿನ ಪಟ್ಟಣ ಸೇರಿದಂತೆ ಸಂದನಪಾಳ್ಯ, ಸುಳ್ವಾಡಿ, ಮಾರ್ಟಳ್ಳಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಮುದಾಯದವರು ವಿಶೇಷವಾಗಿ ಧಾರ್ಮಿಕ ಹಬ್ಬವನ್ನು ಆಚರಿಸಿದರು.
ಗೋದಾಮು ನಿರ್ಮಾಣ ಮಾಡಿರುವುದು ಎಲ್ಲರ ಗಮನ ಸೆಳೆಯಿತು. ಜೊತೆಗೆ ಸುಳ್ವಾಡಿ ಮತ್ತು ಮಾರ್ಟಳ್ಳಿ ಚರ್ಚ್‌ಗಳಲ್ಲೂ ಗೋದಾಮು ನಿರ್ಮಾಣ ಮಾಡಲಾಗಿತ್ತು. ಸಮುದಾಯದ ದೊಡ್ಡವರು ಮಕ್ಕಳು ಎಲ್ಲರೂ ಹೊಸ ಬಟ್ಟೆ ಧರಿಸಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಸಾಂಪ್ರದಾಯದಂತೆ ಕೇಕ್ ನೀಡುವ ಮೂಲಕ ವಿನಿಮಯ ಮಾಡಿಕೊಂಡರು.
ಹನೂರಿನಲ್ಲೂ ಕ್ರಿಸ್ಮಸ್ ವಿಶೇಷ ಆಚರಣೆ:ಪಟ್ಟಣದ ಚೆರ್ಚ್‌ನಲ್ಲಿ ಫಾದರ್ ರೋಷನ್ ಬಾಬು ಅವರ ನೇತೃತ್ವದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಜೊತೆಗೆ ಜಗಮಗಿಸಿದ ಕ್ಯಾಂಡಲ್ ಬೆಳಗುವಿಕೆ ನೋಟ ಕಣ್ಮನ ಸೆಳೆಯಿತು.