ಜಿಬಿಎ ಕಸದ ಲಾರಿ ಭಾರಕ್ಕೆ ಕುಸಿದ ಚರ್ಚ್‌ಸ್ಟ್ರೀಟ್ ರಸ್ತೆ

KannadaprabhaNewsNetwork |  
Published : Oct 13, 2026, 03:45 AM IST
Road

ಸಾರಾಂಶ

ಕಸ ಸಾಗಿಸುವ ಕಾಂಪ್ಯಾಕ್ಟರ್ ಲಾರಿಯ ಭಾರ ತಾಳದೆ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನಗರದ ಪ್ರತಿಷ್ಠಿತ ಚರ್ಚ್ ಸ್ಟ್ರೀಟ್‌ನಲ್ಲಿ ರಸ್ತೆ ಕುಸಿದಿದೆ. ಸೋಮವಾರ ಬೆಳಗ್ಗೆ ಕಸ ಸಾಗಿಸುತ್ತಿದ್ದ ಲಾರಿಯ ಚಕ್ರ ಅರ್ಧದಷ್ಟು ಗುಂಡಿಯೊಳಗೆ ಇಳಿದಿತ್ತು

ಬೆಂಗಳೂರು : ಕಸ ಸಾಗಿಸುವ ಕಾಂಪ್ಯಾಕ್ಟರ್ ಲಾರಿಯ ಭಾರ ತಾಳದೆ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನಗರದ ಪ್ರತಿಷ್ಠಿತ ಚರ್ಚ್ ಸ್ಟ್ರೀಟ್‌ನಲ್ಲಿ ರಸ್ತೆ ಕುಸಿದಿದೆ.

ಕಸ ಸಾಗಿಸುತ್ತಿದ್ದ ಲಾರಿಯ ಚಕ್ರ ಅರ್ಧದಷ್ಟು ಗುಂಡಿಯೊಳಗೆ ಇಳಿದಿತ್ತು

ಸೋಮವಾರ ಬೆಳಗ್ಗೆ ಕಸ ಸಾಗಿಸುತ್ತಿದ್ದ ಲಾರಿಯ ಚಕ್ರ ಅರ್ಧದಷ್ಟು ಗುಂಡಿಯೊಳಗೆ ಇಳಿದಿತ್ತು. ಹಿಂದಕ್ಕೆ ಮುಂದಕ್ಕೆ ಸಂಚರಿಸಲು ಸಾಧ್ಯವಾಗದೆ ಸುಮಾರು ನಾಲ್ಕು ತಾಸುಗಳವರೆಗೆ ಲಾರಿ ಸಿಕ್ಕಿ ಬಿದ್ದಿತ್ತು. ಬೇರೊಂದು ಕಾಂಪ್ಯಾಕ್ಟರ್ ತರಿಸಿ ಕಸವನ್ನು ಅದಕ್ಕೆ ವರ್ಗಾವಣೆ ಮಾಡಿದ ನಂತರ ಹರಸಾಹಸ ಪಟ್ಟು ಲಾರಿಯನ್ನು ಗುಂಡಿಯಿಂದ ಮೇಲಕ್ಕೆ ಎತ್ತಲಾಯಿತು.

₹9 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚರ್ಚ್‌ ಸ್ಟ್ರೀಟ್‌

ಪ್ರತಿಷ್ಠಿತ ವಾಣಿಜ್ಯ ಪ್ರದೇಶವಾಗಿರುವ ಕಾರಣ ನಗರಕ್ಕೆ ಮಾದರಿಯಾಗಿರಲಿ ಎಂದು ಸುಮಾರು ₹9 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚರ್ಚ್‌ ಸ್ಟ್ರೀಟ್‌ಗೆ ಟಾರು, ವೈಟ್ ಟಾಪಿಂಗ್ ಬದಲು ಕಲ್ಲು ಹಾಸು (ಕಾಬಲ್‌ಸ್ಟೋನ್) ಹಾಕಲಾಗಿದೆ. 2018ರಲ್ಲಿ ರಸ್ತೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಕೆಲವೆಡೆ ಕಲ್ಲುಹಾಸು ಕಿತ್ತು ಬಂದಿದ್ದವು. ಈ ವೇಳೆ ಕಾಮಗಾರಿ ಗುಣಮಟ್ಟದ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಎದ್ದಿದ್ದವು. ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಕೂಡಲೇ ಸರಿಪಡಿಸಿದ್ದರು.

ರಸ್ತೆಯ ಕೆಳಭಾಗದಲ್ಲಿ ತೇವಾಂಶದಿಂದ ಭಾರಿ ತೂಕದ ಲಾರಿಯ ಭಾರ ತಾಳದೆ ರಸ್ತೆ ಕುಸಿದಿರುವ ಸಾಧ್ಯತೆ ಇದೆ. ಈ ಕುರಿತು ಎಂಜಿನಿಯರ್‌ಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಜಿಬಿಎ ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನಗರ ಸಮಸ್ಯೆ ಪರಿಹಾರಕ್ಕೆ ಡಿಜಿಟಲ್‌ ಟ್ವಿನ್‌ ಚಿಂತನೆ
ವಿವಿಧ ಕಾಮಗಾರಿಗಳ ಕಡತಗಳು 2 ತಿಂಗ್ಳಿಂಧ ಸಚಿವರ ಬಳಿ ಇದೆ ಏಕೆ