ಸಿನಿಮಾ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಶಿಕ್ಷಣ, ಸಾಂಸ್ಕೃತಿಕ, ಭಾಷೆ, ನಾಡು- ನುಡಿ, ಆರೋಗ್ಯ, ಹೀಗೆ ಎಲ್ಲ ವಿಷಯಗಳನ್ನು ಒಳಗೊಳ್ಳುವ ಜನಪ್ರಿಯ ಮಾಧ್ಯಮವಾಗಿದೆ.
ರಾಣಿಬೆನ್ನೂರು: ಸಿನಿಮಾ ಬಹುಸಂಖ್ಯಾತರ ಆಕರ್ಷಣೀಯ ಕಲಾ ಪ್ರಕಾರವಾಗಿದ್ದು, ಮನರಂಜನೆಗೆ ಮಾತ್ರ ಸೀಮಿತವಾದುದಲ್ಲ ಎಂದು ಪ್ರಾ. ಎಸ್.ಪಿ. ಗೌಡರ ತಿಳಿಸಿದರು.ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಆಂಗ್ಲ ವಿಭಾಗಗಳ ಆಶ್ರಯದಲ್ಲಿ ಆಯೋಜಿಸಿದ್ದ ಫಿಲ್ಮ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಿನಿಮಾ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಶಿಕ್ಷಣ, ಸಾಂಸ್ಕೃತಿಕ, ಭಾಷೆ, ನಾಡು- ನುಡಿ, ಆರೋಗ್ಯ, ಹೀಗೆ ಎಲ್ಲ ವಿಷಯಗಳನ್ನು ಒಳಗೊಳ್ಳುವ ಜನಪ್ರಿಯ ಮಾಧ್ಯಮವಾಗಿದೆ. ವಿದ್ಯಾರ್ಥಿಗಳು ಸಿನಿಮಾ ನೋಡಿದರೆ ಹಾಳಾಗುತ್ತಾರೆ ಎಂಬ ಲೋಕರೂಢಿಯ ಅಪನಂಬಿಕೆ ಪ್ರಸ್ತುತ ದಿನಗಳಲ್ಲಿ ದೂರವಾಗುತ್ತಿದೆ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ರವಿ ಎಂ. ಸಿದ್ಲಿಪುರ ಮಾತನಾಡಿ, ಸಿನಿಮಾ ಒಂದು ಕಲಾ ಅಭಿವ್ಯಕ್ತಿ. ಸಿನಿಮಾ ನೋಡುವುದು ಮತ್ತು ವಿಮರ್ಶೆ ಮಾಡುವುದು ಒಂದು ಕೂಡ ಉತ್ತಮ ಕಲೆ. ಇದನ್ನು ವಿದ್ಯಾರ್ಥಿಗಳು ಬೌದ್ಧಿಕವಾಗಿ ರೂಢಿಸಿಕೊಳ್ಳಬೇಕು. ಸಿನಿಮಾಗಳು ಕೂಡ ನಮ್ಮನ್ನು ತಿದ್ದಬಲ್ಲವು ಎಂದರು.ಲೋಹಿಯಾ ಕೆಜೆಆರ್, ಬಸವರಾಜ ಹುಗ್ಗಿ, ಅಂಬಿಕಾ ಹೊಸಮನಿ., ರವಿಕುಮಾರ ಎಸ್.ಯು. ಅಧೀಕ್ಷಕ ಸತೀಶ್ ಎಂ. ಮೋಹನ್ ಬೆಣಿಗೇರಿ, ಹೊನ್ನಪ್ಪ ಹೊನ್ನಪ್ಪನವರ, ಸಂತೋಷಕುಮಾರ ಕೆ.ಸಿ., ಗಂಗಮ್ಮ ದಾನಮ್ಮನವರ, ರೂಪಾ ಮುದಿಗೌಡರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಜೂಜುಕೋರರ ಗುಂಪಿನ ಮೇಲೆ ಪೊಲೀಸರ ದಾಳಿ
ಹಾವೇರಿ: ನಗರದ ಹಾನಗಲ್ಲ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಜೂಜುಕೋರರ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿಕೊಂಡಿದ್ದ ಆರೋಪಿತರಿಂದ ಸುಮಾರು ₹31,430 ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮೆಹಬೂಬಲಿ ಮಹ್ಮದಗೌಸ್ ಖುರ್ಸುಮಿಯಾ ಹಾಗೂ ಎಂಟು ಜನರ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಈ ಸಂಬಂಧ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.