ಕನ್ನಡಪ್ರಭ ವಾರ್ತೆ ಮೈಸೂರುವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ''''ಪ್ರಾಚೀನ ಪಾರ್ಲಿಮೆಂಟ್ಗಳ ಪ್ರದಕ್ಷಿಣೆಗಳು'''' ಕೃತಿಯನ್ನು ಹೊರತಂದಿದ್ದಾರೆ. ಅವರು ವಿವಿಧ ದೇಶಗಳ ಸಂಸತ್ಗಳಿಗೆ ಭೇಟಿ ನೀಡಿ, ಅಲ್ಲಿನ ಅನುಭವನಗಳನ್ನು ಇಲ್ಲಿ ದಾಖಲಿಸಿದ್ದಾರೆ.ವಿಶ್ವನಾಥ್ ಅವರು ಈಗಾಗಲೇ ಹಳ್ಳಿಹಕ್ಕಿಯ ಹಾಡು, ಮತಸಂತೆ, ಮಲ್ಲಿಗೆಯ ಮಾತು, ಆಪತ್ಸ್ಥಿತಿಯ ಆಲಾಪಗಳು, ಸಿರಿಭೂಮಿ, ದಿ ಟಾಕಿಂಗ್ ಶಾಪ್, ಅಥೆನ್ಸಿನ ರಾಜ್ಯಾಡಳಿತ ಕೃತಿಗಳನ್ನು ಪ್ರಕಟಿಸಿದ್ದು, ಪ್ರಾಚೀನ ಪಾರ್ಲಿಮೆಂಟಿನ ಪ್ರದಕ್ಷಿಣೆಗಳು ಎಂಟನೇಯದು. ಭಾರತ, ಅಥೆನ್ಸ್, ಸಿಂಗಾಪುರ್, ಪೋಲೆಂಡ್, ಇಂಗ್ಲೆಂಡ್ ಸೇರಿದಂತೆ ಪ್ರಪಂಚದ ಕೆಲವು ಮುಖ್ಯ ಸಂಸತ್‌ಗಳನ್ನು ಆಗಾಗ ಸಂದರ್ಶಿಸಿರುವ ವಿಶ್ವನಾಥ್ ಈಗ ಬದುಕುತ್ತಿರುವ ವ್ಯವಸ್ಥೆ, ಅದರ ಚರಿತ್ರೆ, ಮಹತ್ವ, ಸೌಂದರ್ಯಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.''''ಸಂಸತ್ ಎಂಬ ಶಬ್ದ ನಮಗೆಲ್ಲ ಗೊತ್ತು. ಆದರೆ ನಮ್ಮೆಲ್ಲರ ಆಶೋತ್ತರಗಳನ್ನು ಪ್ರತಿನಿಧಿಸುವ, ನಮ್ಮೆಲ್ಲರ ಜೀವನ ಮಟ್ಟ ಮೌಲ್ಯಗಳಲ್ಲಿ ಸುಧಾರಣೆ ತರಬೇಕಾದ ಸಂಸತ್ತುಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲ. ಜನಪ್ರತಿನಿಧಿಗಳು ಕೂಡ ಪಾರ್ಲಿಮೆಂಟುಗಳ ಬಗ್ಗೆ ತಿಳಿಯುವ ಉಮೇದನ್ನು ತೋರಿಸುವುದು ಕಡಿಮೆಯೇ. ಆದರೆ ನಾನು ಮೈಸೂರು- ಕೊಡಗು ಕ್ಷೇತ್ರದಿಂದ ಸಂಸತ್‌ಗೆ ಚುನಾಯಿತನಾದಾಗ ಪ್ರಭಾವಿಸಿತು. ಹೀಗಾಗಿ ಪ್ರಪಂಚದ ಪುರಾತನ ಪಾರ್ಲಿಮೆಂಟುಗಳ ಅಧ್ಯಯನ, ವೀಕ್ಷಣೆ, ಸಂಶೋಧನೆಗೆ ಪ್ರೇರೇಪಿಸಿದವು'''' ಎಂದು ಅವರು ಹೇಳಿಕೊಂಡಿದ್ದಾರೆ.ಭಾರತದ ಸಂಸತ್ ಭವನ, ಯುರೋಪಿನ ಸ್ಟ್ರಾಸ್ ಬರ್ಗ್ ಪಾರ್ಲಿಮೆಂಟ್, ಗ್ರೀಸ್‌ನ ಹೆಲೆನಿಕ್ ಪಾರ್ಲಿಮೆಂಟ್, ಬುಡಾಪೆಸ್ಟ್ ಪಾರ್ಲಿಮೆಂಟ್, ಸಿಂಗಾಪುರ್ ಪಾರ್ಲಿಮೆಂಟ್, ಅಮೆರಿಕಾದ ಪಾರ್ಲಿಮೆಂಟ್, ಲಂಡನ್ ಪಾರ್ಲಿಮೆಂಟ್ ಕುರಿತ ತೌಲನಿಕ ಅಧ್ಯಯನ, ವಿಮರ್ಶಾತ್ಮಕ ಬರಹವನ್ನು ಇಲ್ಲಿ ಕಾಣಬಹುದು. ಬೆಂಗಳೂರಿನ ದೇಸಿ ಪುಸ್ತಕ ಪ್ರಕಟಿಸಿದ್ದು, ಆಸಕ್ತರು ಪ್ರಕಾಶಕ ಸೃಷ್ಟಿ ನಾಗೇಶ್, ಮೊ. 98450 96668 ಸಂಪರ್ಕಿಸಬಹುದು.-- ಬಾಕ್ಸ್---