ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ

KannadaprabhaNewsNetwork |  
Published : Jul 10, 2025, 01:46 AM IST
ಪ್ರತಿಭಟನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಅಂಗನವಾಡಿ ಕೇಂದ್ರಗಳಲ್ಲಿ ಎಫ್ ಆರ್ ಎಸ್ ಕಡ್ಡಾಯ ಬೇಡ, ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಸ್ಕೀಮ್ ನೌಕರರಿಗೆ ಕನಿಷ್ಠ ವೇತನ ಜಾರಿಯಾಗಬೇಕು. ಕನಿಷ್ಠ ವೇತನ ₹ 26000 ಹಾಗೂ ₹ 10000 ಪಿಂಚಣಿ ಜಾರಿ ಮಾಡಿ, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಖಾಯಂ ಮಾಡಬೇಕು, ಅಂಗನವಾಡಿ ಕಾರ್ಯಕರ್ಯತೆಯರನ್ನು ಬಿಎಲ್ಒ ಕೆಲಸಕ್ಕೆ ನೇಮಿಸಬಾರದು.

ಕನ್ನಡಪ್ರಭ ವಾರ್ತೆ ಇಂಡಿ

ಅಂಗನವಾಡಿ ಕೇಂದ್ರಗಳಲ್ಲಿ ಎಫ್ ಆರ್ ಎಸ್ ಕಡ್ಡಾಯ ಬೇಡ, ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಸ್ಕೀಮ್ ನೌಕರರಿಗೆ ಕನಿಷ್ಠ ವೇತನ ಜಾರಿಯಾಗಬೇಕು. ಕನಿಷ್ಠ ವೇತನ ₹ 26000 ಹಾಗೂ ₹ 10000 ಪಿಂಚಣಿ ಜಾರಿ ಮಾಡಿ, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಖಾಯಂ ಮಾಡಬೇಕು, ಅಂಗನವಾಡಿ ಕಾರ್ಯಕರ್ಯತೆಯರನ್ನು ಬಿಎಲ್ಒ ಕೆಲಸಕ್ಕೆ ನೇಮಿಸಬಾರದು. 2011ನಿವೃತ್ತಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಗ್ರಾಚ್ಯೂಟಿ ನೀಡಬೇಕು, ಬಿಸಿಯೂಟ ನೌಕರರಿಗೆ ನಿವೃತ್ತಿ ಪರಿಹಾರ ಕೂಡಲೇ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಸಂಯೋಜಿತ ಇಂಡಿ, ಚಡಚಣ ಮುಖಂಡರು, ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಅಂಬೇಡ್ಕರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಿಐಟಿಯು ಮುಖ್ಯಸ್ಥೆ ಭಾರತಿ ವಾಲಿ, ಅಂಗನವಾಡಿ ನೌಕರರು 50 ವರ್ಷಗಳಿಂದ ಐಸಿಡಿಎಸ್ ಅಡಿಯಲ್ಲಿ ದುಡಿಯುತ್ತಿದ್ದಾರೆ. ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಖಾಯಂ ಮಾಡಬೇಕು. ಅಲ್ಲಿವರೆಗೆ ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಸೀಲ್ದಾರ್‌ ಧನಪಾಲ್‌ ಶೆಟ್ಟಿ ದೇವೂರಗೆ ಮನವಿ ಸಲ್ಲಿಸಿ ಪ್ರತಿಭಟನೆ ಹಿಂಪಡೆದರು.ಚಡಚಣ ತಾಲೂಕ ಅಧ್ಯಕ್ಷೆ ಅಶ್ವಿನಿ ತಳವಾರ, ಗಿರಿಜಾ ಸಕ್ರಿ, ಶೋಭಾ ಕಬಾಡೆ, ಕಾಳಮ್ಮ ಬಡಿಗೇರ, ಮಹಾನಂದಾ ದೊತ್ರೆ, ರೇಣುಕಾ ಫರಜಾನ ಬೆಗಂ, ಸುಜಾತಾ ಬಿರಾದಾರ, ಭಾಗ್ಯಶ್ರೀ ಕಟಕದೊಂಡ, ಸುಮಿತ್ರಾ ನಾಯಕೊಡಿ, ಶಾರದಾ ತಾಂಬೆ, ಕಲಾವತಿ ಕುಡಿಗನೂರ, ದಾಕ್ಷಾಯಣಿ ಅವಟಿ, ಭಾಗೀರಥಿ ತಳವಾರ, ಮಹಾದೇವಿ ಡೊಂಬರ, ಸುನಂದಾ ಶಿವೂರ, ಪಾರ್ವತಿ ದಾರೆಕರ, ರೇಖಾ ಕಬಾಡೆ, ಸಾವಿತ್ರಿ ಪಾಸೋಡಿ, ಭವಾನಿ ಕಲ್ಕೂರ, ಶಂಕ್ರೆಮ್ಮ ಪುಟಾಣಿ, ನೀಲಮ್ಮ ಬಿಜಾಪುರ, ಶೀಲಾ ಲಾಳಸಂಗಿ ಸೇರಿ ಇತರರು ಇದ್ದರು.

PREV