ಸಂಬಳಕ್ಕಾಗಿ ನಗರಸಭಾ ಹೊರಗುತ್ತಿಗೆ ನೌಕರರ ಪ್ರತಿಭಟನೆ

KannadaprabhaNewsNetwork |  
Published : Jan 05, 2024, 01:45 AM IST
ಸಂಬಳಕ್ಕಾಗಿ ನಗರಸಭಾ ಹೊರಗುತ್ತಿಗೆ ನೌಕರರ ಪ್ರತಿಭಟನೆ | Kannada Prabha

ಸಾರಾಂಶ

ಕಳೆದ ನಾಲ್ಕು ತಿಂಗಳಿನಿಂದ ಸಂಬಳ ನೀಡದೆ ದುಡಿಸುತ್ತಿರುವ ಚಾಮರಾಜನಗರ ನಗರಸಭೆ ವಿರುದ್ಧ ಹೊರಗುತ್ತಿಗೆ ನೌಕರರು ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರು ಮಹಾ ಸಂಘದ ಸಹಯೋಗದಲ್ಲಿ ನಗರಸಭೆಯ ಬಳಿ ಪ್ರತಿಭಟನೆ ನಡೆಸಿದರು. ನಗರಸಭಾ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ನಗರಸಭೆ ಪೌರಾಯುಕ್ತರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಾಲ್ಕು ತಿಂಗಳಿನಿಂದ ಸಿಗದ ವೇತನ । ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆಕಳೆದ ನಾಲ್ಕು ತಿಂಗಳಿನಿಂದ ಸಂಬಳ ನೀಡದೆ ದುಡಿಸುತ್ತಿರುವ ಚಾಮರಾಜನಗರ ನಗರಸಭೆ ವಿರುದ್ಧ ಹೊರಗುತ್ತಿಗೆ ನೌಕರರು ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರು ಮಹಾ ಸಂಘದ ಸಹಯೋಗದಲ್ಲಿ ನಗರಸಭೆಯ ಬಳಿ ಪ್ರತಿಭಟನೆ ನಡೆಸಿದರು. ನಗರಸಭಾ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ನಗರಸಭೆ ಪೌರಾಯುಕ್ತರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಚಾಮರಾಜನಗರ ನಗರಸಭೆಯಲ್ಲಿ ಕಳೆದ ೨ ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಸದ ವಿಲೇವಾರಿ ವಾಹನ ಚಾಲಕರು, ಲೋಡರ್‌ಗಳು, ಕ್ಲೀನರ್‌ ಸೇವೆ ಮಾಡುತ್ತಿದ್ದು, ಪ್ರತಿ ತಿಂಗಳು ಸಂಬಳವಾದರೆ ಮಾತ್ರ ಜೀವನ ನಡೆಸಲು ಸಾಧ್ಯವಾಗುತ್ತದೆ. ನಗರಸಭೆಯಲ್ಲಿ ಈವರೆಗೂ ಪ್ರತಿ ತಿಂಗಳ ಸಂಬಳ ನೀಡುತ್ತಿಲ್ಲ. ಇದರಿಂದ ಕಾರ್ಮಿಕರಿಗೆ ತುಂಬಾ ತೊಂದರೆಯಾಗಿರುತ್ತದೆ. ಈಗ ನಾಲ್ಕು ತಿಂಗಳಿಂದ ಸಂಬಳ ಇಲ್ಲದಿರುವುದರಿಂದ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ತಕ್ಷಣ ನಮಗೆ ಸಂಬಳ ಕೊಡಬೇಕೆಂದು ಆಗ್ರಹಿಸಿದರು. ಪ್ರತಿ ತಿಂಗಳು ಒಂದರಿಂದ 5ನೇ ತಾರೀಖಿನೊಳಗೆ ಸಂಬಳವನ್ನು ಕಾರ್ಮಿಕರ ಖಾತೆಗೆ ಜಮೆ ಮಾಡಬೇಕು, ಇ.ಎಸ್.ಐ ಮತ್ತು ಪಿ.ಎಫ್ ಹಣವನ್ನು ಕಲ್ಪಿಸಬೇಕು, ಕಾರ್ಮಿಕರಿಗೆ ಸಮವಸ್ತ್ರ ಕೊಡಿಸಿಕೊಡಬೇಕು, ನಗರಸಭೆಯಿಂದ ಕಾರ್ಮಿಕರಿಗೆ ಗುರುತಿನ ಚೀಟಿ ಕೊಡಿಸಿಕೊಡುವುದು.ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಶಾಸಕರು, ಪೌರಾಯುಕ್ತರು ಬರಬೇಕೆಂದು ಪಟ್ಟು ಹಿಡಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಪ್ರತಿಭಟನಾಕಾರರ ಮನವಿ ಆಲಿಸಿದರು. ಕೂಡಲೇ ಎರಡು ತಿಂಗಳ ಸಂಬಳ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಗ ಎರಡು ತಿಂಗಳ ಸಂಬಳ ಕೊಡಿಸುತ್ತೇನೆ. ಇನ್ನೆರಡು ತಿಂಗಳ ಸಂಬಳವನ್ನು ಕೆಲ ದಿನಗಳಲ್ಲೇ ಕೊಡಿಸಲಾಗುವುದು. ಅಲ್ಲದೇ ಸಮವಸ್ತ್ರ ಕೊಡಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಿ.ಶಂಕರ ಅಂಕನಶೆಟ್ಟಿಪುರ, ಕುಮಾರ, ಅಜಿತ್, ಸುಜಿತ್, ಪಾರ್ವತಿ, ಜಾನಕಿ, ಪ್ರಭು, ಕಾರ್ತಿಕ್ ಸೇರಿದಂತೆ ಇತರರು ಭಾಗವಹಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ