ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ 8ಕ್ಕೆ ನಗರಸಭೆಗೆ ಮುತ್ತಿಗೆ

KannadaprabhaNewsNetwork |  
Published : Oct 05, 2026, 01:30 AM IST
3ಕೆಪಿಎಸ್ಎನ್ಡಿ2: ವೀರೇಶ ಭಾವಿಮನಿ | Kannada Prabha

ಸಾರಾಂಶ

ನಗರದ ವಿವಿಧ ವಾರ್ಡುಗಳಲ್ಲಿರುವ ಜ್ವಲಂತ ಸಮಸ್ಯೆಗಳನ್ನು 6 ದಿನಗಳೊಳಗೆ ಪರಿಹರಿಸಬೇಕು. ಇದಕ್ಕೆ ಸ್ಪಂದಿಸದಿದ್ದರೆ ಅ.8ರಂದು ಬಸ್ ನಿಲ್ದಾಣ ಪಕ್ಕದಲ್ಲಿ ರುವ ಅಂಬಾದೇವಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಬಂದು ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ತಾಲೂಕು ಅಧ್ಯಕ್ಷ ವೀರೇಶ ಭಾವಿಮನಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ನಗರದ ವಿವಿಧ ವಾರ್ಡುಗಳಲ್ಲಿರುವ ಜ್ವಲಂತ ಸಮಸ್ಯೆಗಳನ್ನು 6 ದಿನಗಳೊಳಗೆ ಪರಿಹರಿಸಬೇಕು. ಇದಕ್ಕೆ ಸ್ಪಂದಿಸದಿದ್ದರೆ ಅ.8ರಂದು ಬಸ್ ನಿಲ್ದಾಣ ಪಕ್ಕದಲ್ಲಿ ರುವ ಅಂಬಾದೇವಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಬಂದು ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ತಾಲೂಕು ಅಧ್ಯಕ್ಷ ವೀರೇಶ ಭಾವಿಮನಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವಿಧ ವಾರ್ಡ್‌ಗಳಲ್ಲಿ ಮಹಿಳಾ ಶೌಚಾಲಯಗಳ ನಿರ್ವಹಣೆ ಇಲ್ಲದೆ ಹದಗೆಟ್ಟು ದುರ್ವಾಸನೆ ಬೀರುತ್ತಿದ್ದು, ಇದರಿಂದ ಅಕ್ಕಪಕ್ಕದ ಪರಿಸರ ವಾತಾವರಣ ಕಲುಷಿತಗೊಂಡಿವೆ. ತಕ್ಷಣವೇ ಸ್ವಚ್ಛಗೊಳಿಸಿ ನೀರಿನ ವ್ಯವಸ್ಥೆ ಕಲ್ಪಿಸಿ ಮಹಿಳೆಯರಿಗೆ ಅನುಕೂಲ ಕಲ್ಪಿಸಬೇಕು. ಬೀದಿ ದೀಪಗಳನ್ನು ದುರಸ್ತಿ ಗೊಳಿಸಬೇಕು. ಅಗತ್ಯ ಪೌರ ಕಾರ್ಮಿಕ ಸಿಬ್ಬಂದಿಗಳಿಂದ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಕೈಗೊಳ್ಳಬೇಕು. ಮುಖ್ಯರಸ್ತೆಗಳಂತೆ ವಾರ್ಡ್ಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಿ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು. ನಗರಸಭೆಯಿಂದ ಫಾರಂ ನಂ.3, ಮುಟೇಷನ್, ಕಟ್ಟಡ ಪರವಾನಿಗೆ, ಜನನ ಮತ್ತು ಮರಣ ಪ್ರಮಾಣ ಪತ್ರದ ದಾಖಲೆಗಳನ್ನು ನಿಗದಿತ ಸಮಯಕ್ಕೆ ನೀಡಬೇಕು. ಸಾರ್ವಜನಿಕರನ್ನು ಅಲೆದಾಡಿಸಬಾರದು ಎಂದು ಒತ್ತಾಯಿಸಿದರು.

ನಿರಾಶ್ರಿತರು ನಿವೇಶನ ಮತ್ತು ವಸತಿ ಸೌಲಭ್ಯಕ್ಕಾಗಿ ಐದಾರು ಸಾವಿರ ಜನ ಅರ್ಜಿ ಸಲ್ಲಿಸಿದ್ದು, ಇಲ್ಲಿಯವರಿಗೆ ನಿವೇಶನ ನೀಡಿಲ್ಲ. ಅರ್ಹ ಕುಟುಂಬಗಳ ಸರ್ವೆ ತಕ್ಷಣವೇ ನಗರಸಭೆಯಿಂದ ನಿವೇಶನಗಳನ್ನು ಹಂಚಿಕೆ ಮಾಡಬೇಕು. ನಿರ್ವಹಣೆ ಇಲ್ಲದೆ ಹಾಳಾಗಿರುವ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಬೇಕು. ಜೊತೆಗೆ ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಅಳವಡಿಸಬೇಕು. ಕೋರ್ಟ್ ಹಿಂಭಾಗದ ಉದ್ಯಾನವನಕ್ಕೆ ಭುವನೇಶ್ವರಿ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ಡಿ.ಫಾರೂಕ್, ಸಂಘಟನಾ ಕಾರ್ಯದರ್ಶಿ ಶೇಖ್ ರಾಜಾಹುಸೇನ್, ಪದಾಧಿಕಾರಿಗಳಾದ ಸರಫ್ರಾಜ್, ಮಶಾಕ್ ಬಾಬಾ, ಸದ್ದಾಂಹುಸೇನ್, ಹುಸೇನಬಾಷಾ, ನಿಂಗರಾಜ ಬೋತರ್, ಸಾಧಿಕ್, ಮೊಹಸೀನ್, ರವಿಕುಮಾರ, ಸುರೇಶ ಬಾಲಿ, ಮಹಿಬೂಬ್ ಲಕ್ಕಿ, ಪರಶುರಾಮ, ಬೂದೇಶ ಮರಾಠ, ರುದ್ರಗೌಡ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾನೆಂದಿಗೂ ಮರೆಯದ ನಾಯಕ ಸಿದ್ದರಾಮಯ್ಯ: ಶಾಸಕ ಕೃಷ್ಣಮೂರ್ತಿ
ಚಿರತೆ ದಾಳಿಗೆ ಕರು ಬಲಿ: ಗ್ರಾಮಸ್ಥರಲ್ಲಿ ಆತಂಕ