ಮೈಸೂರು ಕರ್ನಾಟಕದ ನಂ.1 ಸ್ವಚ್ಛನಗರ ಪಟ್ಟ ಗಳಿಸಲು ಪೌರಕಾರ್ಮಿಕರು ಕಾರಣ: ಯದುವೀರ್

KannadaprabhaNewsNetwork |  
Published : Nov 13, 2026, 01:15 AM IST
38 | Kannada Prabha

ಸಾರಾಂಶ

ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು ಸ್ಥಾನ ಪಡೆಯದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿವಿಧ ಮಾನದಂಡಗಳನ್ನು ಅನುಸರಿಸಿ ಸ್ಥಾನವನ್ನು ನೀಡುತ್ತಾರೆ. ನಮ್ಮಲ್ಲಿ ಇರುವ ಕೆಲವೊಂದು ಲೋಪಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಹೊರ ವರ್ತುಲ ರಸ್ತೆ, ಎಕ್ಸೆಲ್ ಪ್ಲಾಂಟ್ ನಲ್ಲಿ ಕಸ ವಿಲೇವಾರಿ ಸಮಸ್ಯೆ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಕರ್ನಾಟಕದ ನಂಬರ್ 1 ಸ್ವಚ್ಛನಗರ ಪಟ್ಟ ಗಳಿಸಲು 100ಕ್ಕೆ 100 ರಷ್ಟು ಪೌರಕಾರ್ಮಿಕರ ಪಾತ್ರ ಪ್ರಮುಖ ಕಾರಣವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಂಬರ್ 1 ಸ್ವಚ್ಛನಗರ ಸ್ಥಾನ ಗಳಿಸುವುದು ಕೂಡ ಸುಲಭವಲ್ಲ. ಪೌರಕಾರ್ಮಿಕರ ಪರಿಶ್ರಮದ ಫಲವಾಗಿ ಮೈಸೂರು ರಾಜ್ಯದ ನಂಬರ್ ಒನ್ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ. ದಿನ ಬೆಳಗಾದರೆ ಪೌರಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಜೊತೆಗೆ ಮಹಾನಗರ ಪಾಲಿಕೆಯು ಪ್ರಮುಖ ಪಾತ್ರ ವಹಿಸಿದೆ ಎಂದರು.

ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು ಸ್ಥಾನ ಪಡೆಯದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿವಿಧ ಮಾನದಂಡಗಳನ್ನು ಅನುಸರಿಸಿ ಸ್ಥಾನವನ್ನು ನೀಡುತ್ತಾರೆ. ನಮ್ಮಲ್ಲಿ ಇರುವ ಕೆಲವೊಂದು ಲೋಪಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಹೊರ ವರ್ತುಲ ರಸ್ತೆ, ಎಕ್ಸೆಲ್ ಪ್ಲಾಂಟ್ ನಲ್ಲಿ ಕಸ ವಿಲೇವಾರಿ ಸಮಸ್ಯೆ ಇದೆ. ಇದನ್ನು ಸರಿಪಡಿಸಲು ಪ್ರಯತ್ನಗಳು ಸಾಗಿವೆ. ಇದರಲ್ಲಿ ಸಾರ್ವಜನಿಕರ ಪಾತ್ರ ಕೂಡ ಪ್ರಮುಖವಾಗಿದೆ. ಜನ ಎಲ್ಲೆಂದರಲ್ಲಿ ಕಸ ಎಸೆಯುವುದ‌ನ್ನು ಬಿಡಬೇಕು ಎಂದರು.ಗುಪ್ತಚರ ಇಲಾಖೆಯ ವೈಫಲ್ಯ

ನಂಜನಗೂಡಿನಲ್ಲಿ ಕೇರಳಂ ಮೂಲದ ಡ್ರಗ್ಸ್ ಆರೋಪಿ ವಾಸ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ನಮ್ಮ ಪೊಲೀಸರ ಬಗ್ಗೆ ಅಪಾರವಾದ ಗೌರವವಿದೆ‌. ಆದರೆ, ಡ್ರಗ್ಸ್ ವಿಚಾರದಲ್ಲಿ ನಮ್ಮ ಪೊಲೀಸ್ ಇಲಾಖೆಯ ಬಗ್ಗೆ ಹಲವು ರೀತಿಯ ಅನುಮಾನ ಮೂಡುತ್ತದೆ. ಈ ಬಗ್ಗೆ ನಮ್ಮ ಪೊಲೀಸರಿಗೆ ಮಾಹಿತಿ ಇಲ್ವಾ?.

ನಮ್ಮ ಪೊಲೀಸರು ಗ್ರೌಂಡ್ ಲೆವೆಲ್ ನಲ್ಲಿ ಕೆಲಸ ಮಾಡುತ್ತಿಲ್ವಾ ಅನಿಸುತ್ತೆ. ಇದು ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ ಎಂದು ದೂರಿದರು.

ದೆಹಲಿ, ಮಹಾರಾಷ್ಟ್ರ, ಗುಜರಾತ್, ಕೇರಳಂ ಪೊಲೀಸರು ಇಲ್ಲಿಗೆ ಬಂದು ಡ್ರಗ್ಸ್ ಪತ್ತೆ ಹಚ್ಚುತ್ತಾರೆ. ಆದರೆ, ನಮ್ಮ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಕೊಡ್ತಿಲ್ವಾ ಎನ್ನುವ ಪ್ರಶ್ನೆ ಮೂಡುತ್ತಿದೆ‌. ಈ ಬಗ್ಗೆ ರಾಜ್ಯ ಸರ್ಕಾರ ಚಿಂತಿಸಬೇಕು. ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕು‌ ಎಂದರು.

ಪಿಂಕ್ ಮೆಟ್ರೋ ಅನುಷ್ಠಾ‌ನದಲ್ಲಿ ಕ್ರೆಡಿಟ್ ವಾರ್ ಬೇಡ

ಮೆಟ್ರೋ ಯೋಜನೆ ಅನುಷ್ಠಾ‌ನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೊಡುಗೆ ಇದೆ‌. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಿಂದ ಮೆಟ್ರೋ ಅಭಿವೃದ್ಧಿಯಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ. ಇದರಲ್ಲಿ ಕ್ರೆಡಿಟ್ ವಾರ್ ಬೇಡ. ಕ್ರೆಡಿಟ್ ಕೊಡೋದು ಜನರು. ಮೆಟ್ರೋ ಯೋಜನೆಯನ್ನು ಅಚ್ಚುಕಟ್ಟಾಗಿ ಉದ್ಘಾಟನೆ ಮಾಡೋಣ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಸಚಿವ ಕೃಷ್ಣ ಭೈರೇಗೌಡ ಭಾಷಣ ಮೊಟಕುಗೊಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾರ್ಯಕ್ರಮದ ಸಮಯ ಮೊದಲೇ ನಿಗದಿಯಾಗಿರುತ್ತದೆ. ಪ್ರಧಾನಿಗಳ ಕಾರ್ಯಕ್ರಮವಾದ ಹಿನ್ನೆಲೆಯಲ್ಲಿ ಪ್ರೋಟೋಕಾಲ್ ಪ್ರಕಾರ ಎಲ್ಲವೂ ಆಗುತ್ತದೆ. ಬೇಕಂತಲೇ ಭಾಷಣ ಮೊಟಕು ಮಾಡಿರುವುದಿಲ್ಲ ಎಂದರು.ಇಂದು ಮೋದಿ ರೋಡ್ ಶೋ

ಬೆಂಗಳೂರು ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಮೈಸೂರಿಗೆ ಬರುತ್ತಾರೆ. ಕಾರಿನಲ್ಲಿ ರೋಡ್ ಶೋ ಇರುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಆ ಬಳಿಕ ತಾರಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.

- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌