ಮೈಸೂರು: ಪೌರಕಾರ್ಮಿಕರು ತಮ್ಮ ವೃತ್ತಿಯನ್ನು ಮಕ್ಕಳಿಗೆ ಹಂಚದೆ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಆರೋಗ್ಯ ಅಧಿಕಾರಿ ಶಿವಪ್ರಸಾದ್ ತಿಳಿಸಿದರು.
ನಗರ ಸ್ವಚ್ಛವಾಗಿರುವುದಕ್ಕೆ ಪೌರಕಾರ್ಮಿಕರ ಶ್ರಮವೇ ಕಾರಣ. ಅವರಿಲ್ಲದೆ ಬೇರೆ ಯಾರೂ ಈ ಕೆಲಸ ಮಾಡಲು ಸಮರ್ಥರಿಲ್ಲ. ಹಾಗೆಂದು ನಿಮ್ಮ ಮುಂದಿನ ತಲೆಮಾರು ಇದೇ ವೃತ್ತಿ ಮಾಡಬೇಕು ಎಂಬುದು ತಪ್ಪು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಅವರು ಸಲಹೆ ನೀಡಿದರು.
ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ್, ಸೆಸ್ಕ್ ಕಾರು ಚಾಲಕರ ಮಾಲೀಕರ ಒಕ್ಕೂಟದ ಅಧ್ಯಕ್ಷ ರವಿ, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಮುಖಂಡರಾದ ಎಚ್.ವಿ. ಭಾಸ್ಕರ್, ಜತ್ತಿ ಪ್ರಸಾದ್, ನಿವೃತ್ತ ಶಿಕ್ಷಕ ಮಹದೇವಸ್ವಾಮಿ ಮೊದಲಾದವರು ಇದ್ದರು.