ಹೊಸಕೋಟೆ: ತಾಲೂಕಿನ ಕಸಬಾ ಹೋಬಳಿಯ ಕಣ್ಣೂರಹಳ್ಳಿ ಗ್ರಾಮದಲ್ಲಿ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಮನೆಗೆ ಕಲ್ಲು ತೂರಿರುವ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಘಟನೆ ವಿಚಾರವಾಗಿ ಎರಡು ಗುಂಪುಗಳಿಂದ ಪ್ರತ್ಯೇಕ ದೂರುಗಳಲ್ಲಿ 28 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ, ಹಲ್ಲೆ ಆರೋಪದ ಪ್ರತಿ ದೂರು: ದಲಿತ ಕೇರಿಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆಗೆಂದು ಮೆರವಣಿಗೆ ಮಾಡುವ ಸಂದರ್ಭದಲ್ಲಿ ರಾಮಮೂರ್ತಿ ಅವರ ಮನೆ ಬಳಿ ಮೆರವಣಿಗೆ ಬಂದಾಗ ರಾಮಮೂರ್ತಿ ದಲಿತರ ಕಾಲೋನಿಯ ಗಣಪತಿ ನಮ್ಮ ಬೀದಿಗೆ ಏನಕ್ಕೆ ಮೆರವಣಿಗೆಗೆ ತರುತ್ತೀರಾ? ನಮ್ಮ ಬೀದಿಗೆ ನೀವು ಬರಬಾರದು ಎಂದು ಗುಂಪು ಕಟ್ಟಿಕೊಂಡು ಬಂದು ಪ್ರದೀಪ್, ಅಂಬರೀಶ್ ಮೇಲೆ ದೊಣ್ಣೆಯಿಂದ ಕೆಂಪರಾಜು, ಆನಂದ್, ಮುರಳಿ, ಮುನಿರಾಜು, ಮಧುಸೂದನ್, ಮಂಜುನಾಥ್, ಅನಿಲ್, ಹರ್ಷ, ಸುನಿಲ್, ನರೇಂದ್ರ, ಕೆಂಪರಾಜು, ಜುಂಜಪ್ಪ, ಉಮೇಶ್, ಸುಧಾ, ಉಷಾ ಸೇರಿದಂತೆ ಒಟ್ಟು ೫೦ಕ್ಕೂ ಹೆಚ್ಚು ಜನ ಹಲ್ಲೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ.
ಬಾಕ್ಸ್.................ದಲಿತರ ಮೇಲೆ ಹಲ್ಲೆ: ಮೆರವಣಿಗೆ ನಿಲ್ಲಿಸಿ ಪ್ರತಿಭಟನೆ
ಗಣಪತಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಗುಂಪು ಘರ್ಷಣೆ ವೇಳೆ ದಲಿತರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದರೆಂದು ಆರೋಪಿಸಿ ಗಣಪತಿ ಮೆರವಣಿಗೆ ನಿಲ್ಲಿಸಿ ಮಂಗಳವಾರ ರಾತ್ರಿ 12 ಗಂಟೆಗೆ ದಲಿತ ಸಮುದಾಯದ ಮುಖಂಡರು ಅಂಬೇಡ್ಕರ್ ಭಾವಚಿತ್ರ ಕೈಯಲ್ಲಿಡಿದು ಪ್ರತಿಭಟನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ್ ಕುಮಾರ್, ನಾಗೇಶ್, ಡಿವೈಎಸ್ಪಿ ಅಣ್ಣ ಸಾಹೇಬ್ ಪಾಟೀಲ್, ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್, ಸುಂದರ್ ಸೇರಿದಂತೆ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಹೆಚ್ಚುವರಿ ಪೊಲೀಸ್ ತುಕಡಿ ನಿಯೋಜನೆ ಮಾಡಿ ಪ್ರತಿಭಟನಾಕಾರರ ಮನವೊಲಿಸಿ ಗಣಪತಿ ವಿಸರ್ಜನೆ ಮಾಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.ಫೋಟೋ : 18 ಹೆಚ್‌ಎಸ್‌ಕೆ 3 ಮತ್ತು 4
ಹೊಸಕೋಟೆ ತಾಲೂಕಿನ ಕಣ್ಣೂರಹಳ್ಳಿ ಗ್ರಾಮದಲ್ಲಿ ಗಣಪತಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾರಮಾರಿ ನಡೆದು ದಲಿತ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು.4. ಗಲಾಟೆ ವೇಳೆ ರಾಮಮೂರ್ತಿ ಮನೆಗೆ ಕಲ್ಲು ತೂರಿ ಕಿಟಕಿ ಗಾಜು ಒಡೆದಿರುವುದು.