ನಗರಸಭೆಯಿಂದ ಸ್ವಚ್ಛ ದೀಪಾವಳಿ, ಶುಭ ದೀಪಾವಳಿ ಜಾಗೃತಿ ಕಾರ್ಯಕ್ರಮ

KannadaprabhaNewsNetwork | Published : Nov 14, 2023 1:16 AM

ಸಾರಾಂಶ

ಸ್ವಚ್ಛ ಭಾರತ ಯೋಜನೆ 2.0

ಭದ್ರಾವತಿ: ನಗರಸಭೆ ವತಿಯಿಂದ ಸ್ವಚ್ಛ ಭಾರತ ಯೋಜನೆ 2.0 ಅಡಿಯಲ್ಲಿ ಸ್ವಚ್ಛ ದೀಪಾವಳಿ, ಶುಭ ದೀಪಾವಳಿ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು.

ನಗರಸಭೆ ವ್ಯಾಪ್ತಿಯ ವಿವಿಧೆಡೆ ಜನನಿಬಿಡ ಸಂತೆ ಮೈದಾನ, ಮಾರುಕಟ್ಟೆ, ವಾಣಿಜ್ಯ ರಸ್ತೆಗಳಲ್ಲಿ, ಅಂಗಡಿ- ಮುಂಗಟ್ಟುಗಳ ಬಳಿ ನಗರಸಭೆ ಆರೋಗ್ಯ ಶಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಪರಿಸರಸ್ನೇಹಿ ಪಟಾಕಿ ಹಾಗೂ ದೀಪ ಬಳಸುವ ಮೂಲಕ ವಾಯುಮಾಲಿನ್ಯ ರಹಿತ ದೀಪಾವಳಿ ಆಚರಿಸುವಂತೆ ಕರೆ ನೀಡಲಾಯಿತು.

ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ. ಸತೀಶ್, ಕಿರಿಯ ಆರೋಗ್ಯ ನಿರೀಕ್ಷಕರಾದ ಶೃತಿ, ಎಂ. ನಿತೀಶ್, ಸಿಬ್ಬಂದಿ ಪಾಲ್ಗೊಂಡಿದ್ದರು.

- - -

-ಡಿ13ಬಿಡಿವಿಟಿ2:

ಭದ್ರಾವತಿ ನಗರಸಭೆಯಿಂದ ಸ್ವಚ್ಛ ಭಾರತ ಯೋಜನೆ 2.0 ಅಡಿಯಲ್ಲಿ ಸ್ವಚ್ಛ ದೀಪಾವಳಿ, ಶುಭ ದೀಪಾವಳ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು.

Share this article