ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರ ವಯನಾಡು, ಶಿರೂರು ಗುಡ್ಡಕುಸಿತ ಪ್ರಕರಣಗಳನ್ನು ನೆಪವಾಗಿರಿಸಿಕೊಂಡು ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಮುಂದಾಗಿದೆ. ಈಗಾಗಲೇ ವರದಿ ಜಾರಿ ಬಗ್ಗೆ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಆಕ್ಷೇಪಣೆ ಸಲ್ಲಿಸುವ ಅವಧಿ ಇನ್ನೂ ಇರುವಾಗಲೇ ಒತ್ತುವರಿ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದೆ. ಒತ್ತುವರಿ ಸಮಸ್ಯೆಯನ್ನು ಮುಂದಿಟ್ಟುಕೊಂಡೆ ಚುನಾವಣೆಗಳಲ್ಲಿ ಗೆದ್ದ ಬಿಜೆಪಿ ಸಂಸದರು, ರೈತ ನಾಯಕರು, ಹುಟ್ಟು ಹೋರಾಟಗಾರರೆನಿಸಿ ಕೊಂಡವರು ಈಗ ಮೌನವಾಗಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಯಾಕೆ ಪರಿಹಾರ ಕೊಡಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ವಾಣಿಜ್ಯ ಉದ್ದೇಶಗಳಿಗಾಗಿ, ರೆಸಾರ್ಟ್, ಶಿಕ್ಷಣ ಸಂಸ್ಥೆಗಳಿಗಾಗಿ ವನ್ಯಜೀವಿ ಅರಣ್ಯ ವ್ಯಾಪ್ತಿಯ ಭೂಮಿಯನ್ನು ಕಬಳಿಸಿರುವವರ ಬಗ್ಗೆ ಅರಣ್ಯ ಇಲಾಖೆ ಮೌನ ವಹಿಸಿರುವುದಾದರೂ ಏಕೆ? ಬಡವರು ಒಂದೋ ಎರಡೋ ಎಕರೆ ಸಾಗುವಳಿ ಮಾಡಿಕೊಂಡಿರುವವರ ಮೇಲೆ ಅಮಾನವೀಯವಾಗಿ ವರ್ತಿಸಲಾಗುತ್ತಿದೆ. ಫಸಲಿಗೆ ಬಂದ ಬೆಳೆಯನ್ನು ನಾಶ ಮಾಡಲಾಗುತ್ತಿದೆ ಇದನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ. ಅರಣ್ಯ ಇಲಾಖೆ ವರ್ತನೆ ಮತ್ತು ಕೇಂದ್ರ ಸರ್ಕಾರದ ವಿರುದ್ದ ಹೋರಾಟ ನಡೆಸಲಾಗುವುದು ಎಂದ ಮಂಜುನಾಥ ಗೌಡರು ಕಸ್ತೂರಿ ರಂಗನ್ ವರದಿ ವಾಸ್ತವಿಕ ಅಂಶಗಳನ್ನು ಒಳಗೊಂಡಿಲ್ಲ. ಇಂತಹ ವರದಿ ಜಾರಿಗೆ ನಮ್ಮ ವಿರೋಧ ವಿದೆ ಎಂದರು.ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಅರಣ್ಯ ಇಲಾಖೆಯವರು ಪ್ರತಿಷ್ಠಿತರ ಒತ್ತುವರಿ ತೆರೆವು ಮಾಡುವ ಬದಲಿಗೆ ಬಡವರನ್ನು ಟಾರ್ಗೆಟ್ ಮಾಡಿದ್ದಾರೆ. ಮಾನವೀಯತೆ ತೋರುವ ಬದಲಿಗೆ ದರ್ಪ ತೋರುತ್ತಿರುವುದು ವಿಚಿತ್ರವಾಗಿದೆ. 2015 ರ ಆಚೆಗೆ ಅರಣ್ಯ ಭೂಮಿ ಒತ್ತುವರಿ ಮಾಡಿರುವಂತಹ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕೆಲೆಬ್ಬಿಸಬಾರದು ಎಂದು ಹೇಳಲಾಗಿದೆ. ಜತೆಗೆ ಇವರೆಲ್ಲ ಬಡವರೇ ಆಗಿದ್ದಾರೆ ಎಂದು ಕಿಡಿಕಾರಿದರು.
ಸರ್ವೇ ನಡೆಯುವ ಮುಂಚೆಯೇ ತೆರವು