ಬೆಂಗಳೂರಲ್ಲಿ ಅಳವಡಿಸಲಾಗಿರುವ ಅನಧಿಕೃತ ಫ್ಲೆಕ್ಸ್‌ : ಜೂ.1ರಿಂದ ಈವರೆಗೆ 8,362 ಫ್ಲೆಕ್ಸ್‌ಗಳ ತೆರವು, 142 ಕೇಸ್‌

KannadaprabhaNewsNetwork |  
Published : Jul 23, 2024, 01:45 AM ISTUpdated : Jul 23, 2024, 10:12 AM IST
ಫ್ಲೆಕ್ಸ್‌ | Kannada Prabha

ಸಾರಾಂಶ

ನಗರದಲ್ಲಿ ಅಳವಡಿಸಲಾಗಿರುವ ಅನಧಿಕೃತ ಫ್ಲೆಕ್ಸ್‌ ತೆರವು ಕಾರ್ಯಾಚರಣೆ ತೀವ್ರಗೊಳಿಸಿರುವ ಬಿಬಿಎಂಪಿ ಕಳೆದ ಜೂ.1ರಿಂದ ಈವರೆಗೆ 8,362 ಫ್ಲೆಕ್ಸ್‌ಗಳನ್ನು ತೆರವು ಮಾಡಿ, 142 ಎಫ್‌ಐಆರ್‌ ದಾಖಲಿಸಿದ್ದಾರೆ.

  ಬೆಂಗಳೂರು :  ನಗರದಲ್ಲಿ ಅಳವಡಿಸಲಾಗಿರುವ ಅನಧಿಕೃತ ಫ್ಲೆಕ್ಸ್‌ ತೆರವು ಕಾರ್ಯಾಚರಣೆ ತೀವ್ರಗೊಳಿಸಿರುವ ಬಿಬಿಎಂಪಿ ಕಳೆದ ಜೂ.1ರಿಂದ ಈವರೆಗೆ 8,362 ಫ್ಲೆಕ್ಸ್‌ಗಳನ್ನು ತೆರವು ಮಾಡಿ, 142 ಎಫ್‌ಐಆರ್‌ ದಾಖಲಿಸಿದ್ದಾರೆ.

ಅನಧಿಕೃತ ಫ್ಲೆಕ್ಸ್‌ ತೆರವು ಕಾರ್ಯಾಚರಣೆ ಕುರಿತಂತೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಅವರು ವಲಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ ನಗರದಲ್ಲಿ ಜೂ. 1ರಿಂದ ಈವರೆಗೆ 8,362 ಫ್ಲೆಕ್ಸ್‌ ಮತ್ತು ಬ್ಯಾನರ್‌ ತೆರವುಗೊಳಿಸಿದ್ದು, ವಿವಿಧ ಪೊಲೀಸ್‌ ಠಾಣೆಗಳಲ್ಲಿ 267 ದೂರು ದಾಖಲಿಸಲಾಗಿದೆ. ಈ ದೂರು ಆಧರಿಸಿ 142 ಎಫ್‌ಐಆರ್‌ ದಾಖಲಿಸಲಾಗಿದೆ. ಅನಧಿಕೃತ ಫ್ಲೆಕ್ಸ್‌ ಮತ್ತು ಬ್ಯಾನರ್‌ ಅಳವಡಿಸಿದವರಿಂದ 1 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ.

ಈ ವೇಳೆ ಮಾತನಾಡಿದ ಮುನೀಶ್‌ ಮೌದ್ಗಿಲ್‌, ನಾಗರಿಕರು ಅನಧಿಕೃತವಾಗಿ ಫ್ಲೆಕ್ಸ್‌-ಬ್ಯಾನರ್‌ ಅಳವಡಿಸದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ನಗರದಲ್ಲಿ ಶುಭಾಶಯ ಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸುವುದು ಹೆಚ್ಚುತ್ತಿದ್ದು, ಅದಕ್ಕೆ ತಡೆಯೊಡ್ಡಬೇಕು. ಒಂದು ವೇಳೆ ಫ್ಲೆಕ್ಸ್‌ಗಳು ಕಂಡು ಬಂದರೆ ಕೂಡಲೇ ತೆರವು ಮಾಡಬೇಕು ಹಾಗೂ ಅದನ್ನು ಹಾಕಿದವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ, ದಂಡ ವಿಧಿಸಬೇಕು ಎಂದು ಸೂಚಿಸಿದರು.

ದೂರು ನೀಡಿ

ಫ್ಲೆಕ್ಸ್‌-ಬ್ಯಾನರ್‌ ಅಳವಡಿಕೆ ತಡೆಗೆ ಸಾರ್ವಜನಿಕರು ಕೈ ಜೋಡಿಸುವಂತೆ ಮಾಡಬೇಕು. ದೂ.ಸಂ. 1533, ವಾಟ್ಸ್‌ಆ್ಯಪ್‌ 94806 83939ಗೆ ಫ್ಲೆಕ್ಸ್‌ಗಳ ಛಾಯಾಚಿತ್ರ ಸಹಿತ ದೂರು ನೀಡುವಂತೆ ಜನರಿಗೆ ತಿಳಿಸಬೇಕು ಎಂದು ಮೌದ್ಗಿಲ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ
ರಾಜಕ್ಕೆ ಕೇಂದ್ರ ಬಜೆಟ್ಟಲ್ಲಿ ಚೊಂಬು : ಸಿಎಂ ಸಿಡಿಮಿಡಿ