ಹಾರೋಹಳ್ಳಿ: ತಾಲೂಕಿನ ಯಡುವನಹಳ್ಳಿಯ ಬೆಂಗಳೂರು-ಕನಕಪುರ ಮುಖ್ಯ ರಸ್ತೆಯಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿ ತೆರವು ಕಾರ್ಯಚರಣೆ ನಡೆಸಿದರು.
ಹಾರೋಹಳ್ಳಿ: ತಾಲೂಕಿನ ಯಡುವನಹಳ್ಳಿಯ ಬೆಂಗಳೂರು-ಕನಕಪುರ ಮುಖ್ಯ ರಸ್ತೆಯಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿ ತೆರವು ಕಾರ್ಯಚರಣೆ ನಡೆಸಿದರು.
ಯಡುವನಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿನ ಚೀಲೂರು ಸರ್ವೆ ನಂ. 194 ರಲ್ಲಿ 34 ಗುಂಟೆ ಸರ್ಕಾರಿ ಗುಂಡುತೋಪಿನ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಾಚರಣೆಗೆ ತಹಸೀಲ್ದಾರ್ ಆರ್.ಸಿ.ಶಿವಕುಮಾರ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಹತ್ತಾರು ವರ್ಷಗಳ ಹಿಂದೆ ಗುಂಡುತೋಪು ಜಾಗವನ್ನು ಅತಿಕ್ರಮಿಸಿ 20ಕ್ಕೂ ಹೆಚ್ಚು ಖಾಸಗಿ ವ್ಯಕ್ತಿಗಳು ವಾಣಿಜ್ಯ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದರು. ಹಲವಾರು ವರ್ಷಗಳಿಂದ ಚೀಲೂರು ಗ್ರಾಪಂ ಹಾಗೂ ತಾಲೂಕು ಆಡಳಿತಕ್ಕೆ ಗ್ರಾಮಸ್ಥರು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾರೊಹಳ್ಳಿ ತಾಲೂಕು ಆದ ನಂತರ ತಹಸೀಲ್ದಾರ್ ಆಗಿ ಕರ್ತವ್ಯ ವಹಿಸಿಕೊಂಡ ಶಿವಕುಮಾರ್ ಸರ್ಕಾರಿ ಜಾಗ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜೈನ್ ಶಾಲೆಯ ಮುಂಭಾಗದಲ್ಲಿರುವ ಅಂಗಡಿ ಮಾಲೀಕರೊಬ್ಬರು ಕಾರ್ಯಾಚರಣೆಗೆ ಅಡ್ಡಿಪಡಿಸಿ ಈ ಹಿಂದೆ ಈ ಜಾಗ ನ್ಯಾಯಾಲಯಲ್ಲಿದೆ ಎಂದು ಹೇಳುತ್ತಿದ್ದರು. ಈಗ ತಹಸೀಲ್ದಾರ್‌ರ ಮುಂದೆ ಸ್ವತ್ತಿನ ದಾಖಲಾತಿಗಳಿವೆ ಎಂದು ಅಡ್ಡಿಪಡಿಸಿದರು. ಇದಕ್ಕೆ ತಹಸೀಲ್ದಾರ್ 2 ದಿನಗಳೊಳಗಾಗಿ ನಿಮ್ಮ ಎಲ್ಲಾ ದಾಖಲಾತಿಗಳನ್ನು ಕಚೇರಿಗೆ ನೀಡಿದಾಗ ಪರಿಶೀಲಿಸಿ ನಂತರ ತೆರವು ಕಾರ್ಯಾಚರಣೆ ನಡೆಸುವುದಾಗಿ ಎಚ್ಚರಿಸಿದರು.
ಕಾರ್ಯಾಚರಣೆಯಲ್ಲಿ ಕಂದಾಯ ಇಲಾಕೆ ನಿರೀಕ್ಷಕ ಭರತ್, ಗ್ರಾಮ ಲೆಕ್ಕಿಗ ಮಂಜುಕುಮಾರ್, ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
1ಕೆಆರ್ ಎಂಎನ್ 9.ಜೆಪಿಜಿ
ಹಾರೋಹಳ್ಳಿ ತಾಲೂಕು ಯಡುವನಹಳ್ಳಿ ಮುಖ್ಯ ರಸ್ತೆಯ ಸರ್ಕಾರಿ ಗುಂಡುತೋಪಿನಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿ ಮುಂಗಟ್ಟುಗಳನ್ನು ತಹಸೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ತೆರವುಗೊಳಿಸಿದರು. ಭರತ್, ಮಂಜುಕುಮಾರ್, ಪೋಲಿಸ್ ಅಧಿಕಾರಿಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.