ತರೀಕೆರೆ, ಪರಿಸರದಲ್ಲಿ ಆಗುತ್ತಿರುವ ಅತಿಯಾದ ಬದಲಾವಣೆಯಂದಾಗಿ ಹವಮಾನ ವೈಪರೀತ್ಯಗಳು ಉಂಟಾಗುತ್ತಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಶಾಂತ್.ಎಚ್.ತಿಳಿಸಿದರು.
ತರೀಕೆರೆಯಲ್ಲಿ ಪುರಸಭೆಯಿಂದ ವಿಶ್ವ ಪರಿಸರ ದಿನಾಚರಣೆಕನ್ನಡಪ್ರಭ ವಾರ್ತೆ, ತರೀಕೆರೆ
ಪರಿಸರದಲ್ಲಿ ಆಗುತ್ತಿರುವ ಅತಿಯಾದ ಬದಲಾವಣೆಯಂದಾಗಿ ಹವಮಾನ ವೈಪರೀತ್ಯಗಳು ಉಂಟಾಗುತ್ತಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಶಾಂತ್.ಎಚ್.ತಿಳಿಸಿದರು.ಬುಧವಾರ ಪುರಸಭೆಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪರಿಸರದಲ್ಲಿ ಹೆಚ್ಚು ಗಿಡ ಮರಗಳನ್ನು ಬೆಳೆಸುವುದರಿಂದ ಕಾಲಕಾಲಕ್ಕೆ ಮಳೆ ನಿರೀಕ್ಷಿಸಬಹುದು ಹಾಗೂ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿ ಕೊಳ್ಳಬೇಕು ಎಂದು ತಿಳಿಸಿದ ಅವರು ಉದ್ಯಾನವನದಲ್ಲಿ ನೆಡಲಾದ ಸಸಿಗಳನ್ನು ಶಾಲೆ ವತಿಯಿಂದ ಪೋಷಿಸುವಂತೆ ಅವರು ಮನವಿ ಮಾಡಿದರು. ಪ್ರೀಮಿಯರ್ ಪಬ್ಲಿಕ್ ಶಾಲೆ ಮುಖ್ಯೋಪಾಧ್ಯಾಯರು ಮಾತನಾಡಿ ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಉದ್ಯಾನವನದಲ್ಲಿ ನೆಡಲಾದ ಸಸಿಗಳನ್ನು ಪೋಷಿಸಲು ವಾರದಲ್ಲಿ ಒಂದು ಅವಧಿಯನ್ನು ಇದಕ್ಕಾಗಿಯೇ ಮೀಸಲಿಡುವುದಾಗಿ ತಿಳಿಸಿದರುಪುರಸಭೆಯ ನೌಕರರು, ಕಾರ್ಮಿಕರು ಮತ್ತು ಪ್ರೀಮಿಯರ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಒಡಗೂಡಿ ತುಂಗಭದ್ರಾ ಮಹಾವಿದ್ಯಾಲಯದ ಮುಂಭಾಗದಲ್ಲಿರುವ ಪುರಸಭಾ ಉದ್ಯಾನವನದಲ್ಲಿ ಬೆಳೆದಿದ್ದ ಅನವಶ್ಯಕ ಗಿಡಗಂಟಿಗಳನ್ನು ತೆರವುಗೊಳಿಸಿ ಅರಣ್ಯ ಇಲಾಖೆಯಿಂದ ನೀಡಲಾದ ವಿವಿಧ ಜಾತಿಯ ಉಪಯುಕ್ತ ಮರಗಳ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆಯ ಪರಿಸರ ಅಭಿಯಂತರರು, ಕಂದಾಯಾಧಿಕಾರಿ ಮತ್ತು ಇನ್ನಿತರ ಸಿಬ್ಬಂದಿಗಳು, ಪೌರಕಾರ್ಮಿಕರು ಹಾಗೂ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.
5ಕೆಟಿಆರ್.ಕೆ.8ಃ ತರೀಕೆರೆ ಪುರಸಭೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.