ಇತ್ತೀಚೆಗೆ ತಾಲೂಕಿನ ನಾವೂರು ಎಂಬಲ್ಲಿ ಕ್ಲಿನಿಕ್ ಇರುವ ಕಟ್ಟಡಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದನ್ನು ಖಂಡಿಸಿ ವೈದ್ಯರು ಪ್ರತಿಭಟನೆ ನಡೆಸಿದರು.
ಬೆಳ್ತಂಗಡಿ ; ಇತ್ತೀಚೆಗೆ ತಾಲೂಕಿನ ನಾವೂರು ಎಂಬಲ್ಲಿ ಕ್ಲಿನಿಕ್ ಇರುವ ಕಟ್ಟಡಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದನ್ನು ಖಂಡಿಸಿ ವೈದ್ಯರು ಪ್ರತಿಭಟನೆ ನಡೆಸಿದರು. ವೈದ್ಯಕೀಯ ವೃತ್ತಿಯೊಂದಿಗೆ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ಗುರುತಿಸಿ ಕೊಂಡಿದ್ದ ಡಾ. ಪ್ರದೀಪ್ ನಾವೂರ ಅವರ ಕ್ಲಿನಿಕ್‌ನ ವೈದ್ಯಕೀಯ ಉಪಕರಣಗಳು, ಲ್ಯಾಬ್‌ಗೆ ಸಂಬಂಧಪಟ್ಟ ಉಪಕರಣಗಳು, ಪೀಠೋಪಕರಣಗಳು ಇತ್ಯಾದಿ ಅಮೂಲ್ಯ ವಸ್ತುಗಳು ಬೆಂಕಿಯಿಂದ ನಾಶವಾಗಿದೆ.
ವೈದ್ಯಕೀಯ ಸಂಘಟನೆಗಳಾದ ಆಯುಷ್ ಫೆಡರೇಶನ್ ಆಫ್ ಇಂಡಿಯಾ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಇಂಡಿಯನ್ ಡೆಂಟಲ್ ಅಸೋಸಿಯೇಶನ್ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ಬೆಳ್ತಂಗಡಿಯಲ್ಲಿ ಸಭೆ ನಡೆಸಿ ವೈದ್ಯಾಧಿಕಾರಿಗಳು, ಬೆಳ್ತಂಗಡಿ ತಹಸೀಲ್ದಾರರು ಮತ್ತು ಬೆಳ್ತಂಗಡಿ ಡಿವೈಎಸ್ಪಿ ಅವರಿಗೆ ತಪ್ಪಿತಸ್ಥ ರನ್ನು ಶೀಘ್ರ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.ಸಂಘಟನೆಗಳ ಪ್ರಮುಖರಾದ ಡಾ.ಕೃಷ್ಣಎಂ. ಗೋಖಲೆ, ಡಾ. ಸುಷ್ಮಾ ಡೊಂಗ್ರೆ, ಡಾ. ಸ್ವರ್ಣಲತಾ, ಡಾ.ರಜತಾ, ಡಾ.ರಾಘ ವೇಂದ್ರ ಪಿದಮಲೆ, ಡಾ.ಶಶಿಧರ್ ಡೋಂಗ್ರೆ, ಬೆನಕ ಆಸ್ಪತ್ರೆಯ ಡಾ.ಗೋಪಾಲಕೃಷ್ಣ ಅಭಯ ಆಸ್ಪತ್ರೆಯ ಡಾ.ಶ್ರೀಹರಿ ಭಟ್ ಹಾಗೂ ತಾಲೂಕಿನ ವೈದ್ಯರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.