ವಿಚಾರಣೆ ನಡೆಸಿ, ಸೂಕ್ತ ಕ್ರಮಕ್ಕೆ ಸಿಎಸ್‌ಗೆ ಸಿಎಂ ಆದೇಶ

KannadaprabhaNewsNetwork |  
Published : Oct 23, 2026, 01:15 AM IST
22ಕೆಡಿವಿಜಿ3-ಸಚಿವ ಕೆ.ಎಸ್.ಬಸವಂತಪ್ಪ. | Kannada Prabha

ಸಾರಾಂಶ

ಮೈಸೂರು ದಸರಾ ವೇಳೆ ಸಚಿವರನ್ನು ಐಪಿಎಸ್‌ ಅಧಿಕಾರಿಯು ತಡೆದ ವಿಚಾರ ಗೊತ್ತಾಗುತ್ತಿದ್ದಂತೆಯೇ, ಅದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ತಿಳಿಸಿದ್ದಾರೆ.

- ಮೈಸೂರಲ್ಲಿ ಸಚಿವರನ್ನು ತಡೆದ ಐಪಿಎಸ್ ಅಧಿಕಾರಿ ಪ್ರಕರಣ ಬಗ್ಗೆ ಸಚಿವ ಕೆ.ಎಸ್.ಬಸವಂತಪ್ಪ ಪ್ರತಿಕ್ರಿಯೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೈಸೂರು ದಸರಾ ವೇಳೆ ಸಚಿವರನ್ನು ಐಪಿಎಸ್‌ ಅಧಿಕಾರಿಯು ತಡೆದ ವಿಚಾರ ಗೊತ್ತಾಗುತ್ತಿದ್ದಂತೆಯೇ, ಅದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾ ವೇಳೆ ತಾವೂ ಸೇರಿದಂತೆ ಕೆಲ ಸಚಿವರು ಸಿಎಂ ಜೊತೆಗೆ ತೆರಳುತ್ತಿದ್ದೆವು. ಈ ವೇಳೆ ಸ್ಥಳದಲ್ಲಿದ್ದ ಐಪಿಎಸ್ ಅಧಿಕಾರಿಯು ನಮ್ಮನ್ನು ತಡೆದ ವಿಚಾರ ಗೊತ್ತಾಗುತ್ತಿದ್ದಂತೆಯೇ, ಅದನ್ನು ಸಿಎಂ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು.

ಮುಖ್ಯಮಂತ್ರಿ ಸೂಚನೆ ಮೇರೆಗೆ ಸಚಿವರನ್ನು ತಡೆದ ಪ್ರಕರಣದ ವಿಚಾರಣೆ ನಡೆಸಿ, ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶಿಸಿದ್ದಾರೆ. ವರದಿ ಬಳಿಕ ಆ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಮುಖ್ಯಮಂತ್ರಿ ತಿಳಿಸಿದ್ದಾರೆ. ಸಂಬಂಧಿಸಿದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಆಗುತ್ತದೆಂಬ ಭರವಸೆ ಇದೆ ಎಂದು ಹೇಳಿದರು.

ಶಿಷ್ಟಾಚಾರ ಇದ್ದಿದ್ದರೆ ನಮಗೆ ಮುಂಚೆಯೇ ಗೊತ್ತಾಗುತ್ತಿತ್ತು. ಅಂತಹ ಯಾವುದೇ ಶಿಷ್ಟಾಚಾರವೂ ಅಲ್ಲಿ ಇರಲಿಲ್ಲ. ಯಾವ ಕಾರಣಕ್ಕಾಗಿ ನಮ್ಮನ್ನು ತಡೆದರು ಎಂಬ ಬಗ್ಗೆ ತನಿಖೆ ಮಾಡಬೇಕಿದೆ. ಸಚಿವರು ಅಂತಾ ಗೊತ್ತಿದ್ದರೂ ನಮ್ಮನ್ನು ತಡೆಗಟ್ಟಿದ್ದು ಸರಿಯಾದ ಕ್ರಮ ಅಲ್ಲ. ಈ ಘಟನೆ ಬಗ್ಗೆ ಗೊತ್ತಾಗುತ್ತಿದ್ದಂತೆಯೇ ಮುಖ್ಯಮಂತ್ರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿ, ಕ್ರಮಕ್ಕೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಮೈಸೂರು ಅರಮನೆ ಆವರಣದಲ್ಲಿ ಬುಧವಾರ ನಡೆದ ನಂದಿಧ್ವಜ ಪೂಜಾ ಕಾರ್ಯಕ್ರಮದ ವೇಳೆ ಸಚಿವರು, ಹಿರಿಯ ಜನ ಪ್ರತಿನಿಧಿಗಳನ್ನು ತಡೆದು, ಅಗೌರವದಿಂದ ವರ್ತಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಆಗುತ್ತದೆ. ಜನಪ್ರತಿನಿಧಿಗಳನ್ನು ಹೀಗೆ ತಡೆದು, ಅಗೌರವರಿಂದ ವರ್ತಿಸುವುದು ಸರಿಯಲ್ಲ. ನಿಯಮ ಮತ್ತು ಶಿಷ್ಟಾಚಾರ ಮೀರಿ ನಡೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಮುಂದಿನ ದಿನಗಳಲ್ಲೂ ಸೂಕ್ತ ಕ್ರಮ ಆಗಲಿದೆ ಎಂದು ಹೇಳಿದರು.

ಸಚಿವರು, ಶಾಸಕರಿಗೆ ಪ್ರವೇಶ ನಿರಾಕರಿಸುವಂತೆ ಮುಖ್ಯಮಂತ್ರಿಗಳಾಗಲೀ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಲೀ ನಿರ್ದೇಶನ ನೀಡಿದ್ದರೆಂಬ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಂತಹ ಯಾವುದೇ ಸೂಚನೆ, ನಿರ್ದೇಶನಗಳನ್ನು ಮುಖ್ಯಮಂತ್ರಿಗಳು ನೀಡಿರಲಿಲ್ಲ. ಬದಲಾಗಿ ಹೊರಗಿದ್ದಂತಹ ಶಾಸಕರನ್ನು ಸ್ವತಃ ಮುಖ್ಯಮಂತ್ರಿಗಳೇ ತಮ್ಮ ಬಳಿಗೆ ಕರೆಸಿಕೊಂಡು, ಗೌರವಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಚಿವ ಕೆ.ಎಸ್.ಬಸವಂತಪ್ಪ ಸ್ಪಷ್ಟಪಡಿಸಿದರು.

- - -

-22ಕೆಡಿವಿಜಿ3: ಕೆ.ಎಸ್.ಬಸವಂತಪ್ಪ, ಮುಜರಾಯಿ ಸಚಿವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೈಸೂರು ದಸರಾದಲ್ಲಿ ಸ್ತ್ರೀ ಶಕ್ತಿಗೆ ಭಾರೀ ಮೆಚ್ಚುಗೆ
ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಕೊಡಲು ವಿಳಂಬ