ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೈಸೂರು ಹಾಗೂ ಚಾಮರಾಜನಗರ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲುವ ಸುಳಿವು ಅರಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹತಾಶೆಯಿಂದ ಬಿಜೆಪಿ ನಾಯಕರಾದ ಸ್ವಾಭಿಮಾನಿ ಚಕ್ರವರ್ತಿ ವಿ. ಶ್ರೀನಿವಾಸಪ್ರಸಾದ್ ಅವರಿಗೆ ದೂರವಾಣಿ ಕರೆ ಮಾಡಿ ಬೆಂಬಲ ನೀಡುವಂತೆ ದಯನೀಯವಾಗಿ ಕೋರಿಕೊಂಡಿದ್ದಾರೆ ಎಂದು ಕಾಡಾ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಜಿ. ನಿಜಗುಣರಾಜು ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಶ್ರೀನಿವಾಸ ಪ್ರಸಾದ್ ಅವರಿಗೆ ಮಾಡಿದ ಅಪಮಾನವನ್ನು ಮರೆತಿರಬಹುದು. ಅಧಿಕಾರ ಬಂದಾಗ ಹಿರಿಯರು ಎಂಬುದನ್ನು ಲೆಕ್ಕಿಸದ ಅವರನ್ನು ಸಂಪುಟದಿಂದ ಕಿತ್ತೋಗೊದು, ಕಾಂಗ್ರೆಸ್ ಪಕ್ಷದಿಂದಲೇ ಹೊರ ಹೋಗುವಂತೆ ಮಾಡಿದ್ದು, ಉಪ ಚುನಾವಣೆಯನ್ನು ಅವರನ್ನು ಸೋಲಿಸುವ ಮೂಲಕ ಸ್ವಾಭಿಮಾನ ನಾಯಕರಿಗೆ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ. ಈಗ ಎಲ್ಲವನ್ನು ಮರೆತು ನಾವು ಒಂದಾಗೋಣ ಎಂದು ದೂರವಾಣಿ ಕರೆಯನ್ನು ಮಾಡುವ ಮೂಲಕ ನರಿ ಬುದ್ದಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು. ಇದ್ಯಾವುದನ್ನು ಪ್ರಸಾದ್ ಅವರು ನಂಬುವುದಿಲ್ಲ. ಅವರೇ ಘೋಷಣೆ ಮಾಡಿರುವಂತೆ ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದಾರೆ. ಅವರು ಈಗಾಗಲೇ ಸ್ಪಷ್ಪವಾಗಿ ಮತ್ತೇ ದೇಶಕ್ಕೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು. ಹೀಗಾಗಿ ಬಿಜೆಪಿಯನ್ನು ಯುವ ಸಮುದಾಯ ಬೆಂಬಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದರು. ಸ್ವಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅತ್ಮೀಯ ಸ್ನೇಹಿತನ ಮಗ ಸುನೀಲ್ ಬೋಸ್ ಗೆಲ್ಲಿಸಿಕೊಂಡರೆ ಮಾತ್ರ ಸಿಎಂ ಕುರ್ಚಿ ಉಳಿದುಕೊಳ್ಳುತ್ತದೆ ಎಂಬ ಸತ್ಯವನ್ನು ಅರಿತಿರುವ ಸಿದ್ದರಾಮಯ್ಯ ಅಳೆದು ತೂಗಿ ಕೊನೆಗಳಿಗೆಯಲ್ಲಿ ಸ್ನೇಹಿತನ ಮಗನಿಗೆ ಟಿಕೆಟ್ ಕೊಡಿಸಿದ್ದಾರೆ. ಈಗ ಮುಂದಿನ ಭಾಗವಾಗಿ ಬಿಜೆಪಿಯಲ್ಲಿರುವ ಮುಖಂಡರನ್ನು ಪಕ್ಷಕ್ಕೆ ಆಹ್ವಾನಿಸುವುದು. ಅವರು ಸೇರ್ಪಡೆಗೆ ಒಪ್ಪದಿದ್ದರೆ ಪತ್ರಿಕೆ ಹಾಗೂ ದೃಶ್ಯ ಮಾದ್ಯಮಗಳ ಮೂಲಕ ಕಾಂಗ್ರೆಸ್ ಸೇರ್ಪಡೆ ಯಾಗುತ್ತಾರೆ ಎಂದು ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಹಬ್ಬಿಸುವ ಮೂಲಕ ಬಿಜೆಪಿಯನ್ನು ಸೋಲಿಸಲು ಮಾಡುತ್ತಿರುವ ಪಿತೂರಿ ನಡೆಯುದಿಲ್ಲ. ದೇಶದ್ಯಂತ ನರೇಂದ್ರ ಮೋದಿ ಅವರ ಅಲೆ ಎದ್ದಿದ್ದು, ಇದನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ. ಹೀಗಾಗಿ ಮೈಸೂರು ಮತ್ತು ಚಾಮರಾಜನಗರ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ನಿಜಗುಣರಾಜು ತಿಳಿಸಿದರು. ಮಂತ್ರಾಕ್ಷತೆ ಬಗ್ಗೆ ಕೀಳು ಮಟ್ಟದ ಹೇಳಿಕೆ ಸಹಿಸಲ್ಲ:ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸನಾತನ ಹಿಂದು ಧರ್ಮವನ್ನು ಅಪಮಾನಿಸಿದ್ದಾರೆ. ಅನ್ನಭಾಗ್ಯ ಅಕ್ಕಿಗೆ ಅರಿಶಿನ ಬೆರೆಸಿ ಮನೆ ಮನೆಗೆ ಹಂಚಿಕೆ ಮಾಡಲಾಗಿದೆ ಎಂಬ ಬಾಲಿಶ ಹೇಳಿಕೆ ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಹಿಂದು ಕಾರ್ಯಕರ್ತರನ್ನು ಏಕ ವಚನದಲ್ಲಿ ಮಾತನಾಡಿಸುವ ನಿಮ್ಮ ತೃಷ್ಠೀಕರಣ ನೀತಿ ಈ ಚುನಾವಣೆಯಲ್ಲಿ ಬಟ್ಟ ಬಯಲಾಗಲಿದೆ. ಶ್ರೀರಾಮ ಮಂದಿರ, ಮಂತ್ರಾಕ್ಷತೆ, ಕಳಸ ಹಾಗೂ ಹಿಂದು ಭಕ್ತರ ಭಾವನೆಗಳ ಜೊತೆಗೆ ಚೆಲ್ಲಾಡುವ ನೀವುಗಳು ನಿಜವಾದ ಹಿಂದು ವಿರೋಧಿಗಳು. ಸನತನ ಧರ್ಮ ಹಾಗು ಆಚಾರದ ಅರವಿಲ್ಲವರಿಗೆ ಹಿಂದುಗಳು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ಧಾಳಿ ನಡೆಸಿದರು. ಬಿಜೆಪಿ ಬಿಡುವ ಪ್ರಶ್ನೆಯೆ ಇಲ್ಲ:
ಅನೇಕ ಕಡೆ ನನ್ನನ್ನು ಸಹ ಕಾಂಗ್ರೆಸ್‌ಗೆ ಹೋಗುತ್ತಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿದೆ. ನಾನು ಬಿಜೆಪಿ ತತ್ವ ಸಿದ್ಧಾಂತ ಮತ್ತು ವಿಚಾರವನ್ನಟ್ಟುಕೊಂಡು ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಹಿಂದುತ್ವದ ಪ್ರತಿಪಾದಕನಾಗಿ ಬಿಜೆಪಿಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹತಾಶೆಯಿಂದ ಇಂಥ ಅಪಪ್ರಚಾರ ಮಾಡುವ ಮೂಲಕ ವಾಮ ಮಾರ್ಗದಿಂದ ಗೆಲುವು ಸಾಧಿಸುವ ನಿಮ್ಮ ಭ್ರಮೆ ಈಡೇರುವುದಿಲ್ಲ. ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಲಕ್ಷಕ್ಕು ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಶತಸಿದ್ದ ಎಂದು ತಿಳಿಸಿದರು. ಈ ವೇಳೆ ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ಮಾಜಿ ನಿರ್ದೇಶಕ ಕಿಲಗೆರೆ ಬಸವರಾಜು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜು, ನಗರ ಮಂಡಲದ ಅಧ್ಯಕ್ಷ ಶಿವರಾಜನಾಯಕ, ರೈತ ಮೋರ್ಚಾ ಉಪಾಧ್ಯಕ್ಷ ಚಿನ್ನಮುತ್ತು, ಎಸ್ಪಿ ಮೋರ್ಚಾ ಅಧ್ಯಕ್ಷ ಮೂಡಹಳ್ಳಿ ಮೂರ್ತಿ ಮತ್ತಿತರರಿದ್ದರು.