ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮುಖ್ಯಮಂತ್ರಿಗಳು ಕೊಳ್ಳೇಗಾಲ ಕ್ಷೇತ್ರಕ್ಕೆ ನೀಡಿರುವ 25 ಕೋಟಿ ವಿಶೇಷ ಅನುದಾನವನ್ನು ಗಡಿ ಭವನ, ಕನ್ನಡ ಭವನ, ಸ್ತ್ರೀಶಕ್ತಿ ಭವನ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂದು ಶಾಸಕ ಎ. ಆರ್. ಕೖಷ್ಣಮೂರ್ತಿ ಹೇಳಿದರು.ಅವರು ಮಹದೇಶ್ವರ ಕಾಲೇಜು ಕ್ರೀಡಾಂಗಣದಲ್ಲಿ ಮಂಗಳವಾರ ಶಿಕ್ಷಣ ಇಲಾಖೆ, ವಿಶ್ವಚೇತನ ಸ್ವತಂತ್ರ ಪದವಿಪೂರ್ವ ಕಾಲೇಜು ವತಿಯಿಂದ ಅಯೋಜಿಸಲಾಗಿದ್ದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಮಹದೇಶ್ವರ ಕಾಲೇಜು ಕ್ರೀಡಾಂಗಣ ಅಭಿವೖದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3 ಕೋಟಿ ಅನುದಾನ ನೀಡಿದ್ದಾರೆ. ಕ್ರೀಡಾಂಗಣದಲ್ಲಿನ ಸುತ್ತಲೂ ಕುಳಿತು ಕ್ರೀಡಾ ಚಟುವಟಿಕೆ ವೀಕ್ಷಿಸಲು 4 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ, ಅದೇ ಮಹದೇಶ್ವರ ಕಾಲೇಜು ಕಟ್ಟಡ ನವಿಕರಣಕ್ಕಾಗಿ 81 ಲಕ್ಷ ಅನುದಾನಕ್ಕೆ ಮನವಿ ಮಾಡಿದ್ದು ಶೀಘ್ರ ಟೆಂಡರ್ ಪ್ರಕ್ರಿಯೆ ಆಗಲಿದೆ ಎಂದರು.ಕಾಲೇಜಿನ ಸೆಮಿನಾರ್‌ನಲ್ಲಿನ ಕಂಪ್ಯೂಟರ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಹಿಂದೆ ಸುಟ್ಟು ಹೋಗಿತ್ತು, ಲ್ಯಾಬ್ ನವೀಕರಣ ಮಾಡುವಂತೆ ಕುಂತೂರು ಕಾರ್ಖಾನೆ ಮಾಲೀಕತ್ವದ ಶರಣವನ್ ಅವರಿಗೆ ಈಹಿಂದೆ ಮನವಿ ಮಾಡಿದ್ದೆ. ಅದೇ ರೀತಿ ಅವರು ಸಹಾ ಸ್ಪಂದಿಸಿದ್ದಾರೆ. ಶೀಘ್ರ ಲ್ಯಾಬ್ ನವೀಕರಣ ಕೆಲಸ ಆಗಲಿದೆ, ಅವರಿಗೂ ಸಹಾ ನಾನು ಧನ್ಯವಾದ ಹೇಳಿದ್ದೇನೆ. ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಾಸ್ಕೆಟ್ ಬಾಲ್ ಸಿಂಥಟಿಕೆ ಕೋಟ್ ಇರುವುದು ರಾಜ್ಯದಲ್ಲೆ ಪ್ರಥಮ ಎನಿಸಿದೆ. ಅಪೂರ್ಣಗೊಂಡಿರುವ ಕನ್ನಡಭವನ, ಗಡಿಭವನ, ಸ್ತ್ರೀಶಕ್ತಿ ಭವನಗಳಿಗೂ ಸಹಾ ಮುಖ್ಯಮಂತ್ರಿಗಳ ನೀಡಿರುವ 25 ಕೋಟಿ ವಿಶೇಷ ಅನುದಾನದಲ್ಲಿ ಇವುಗಳ ಪೂರ್ಣ೯ಕ್ಕೆ ಅನುದಾನ ಒದಗಿಸಿದ್ದೇನೆ. ಕ್ಷೇತ್ರದ ಅಭಿವೖದ್ಧಿಗೂ ಸಹಾ ಸ್ಪಂದಿಸಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.
ಪಠ್ಯದ ಜೊತೆ ಕ್ರೀಡೆಯೂ ಅಗತ್ಯ. ವಿದ್ಯೆ ಜೊತೆ ಕ್ರೀಡೆಯಲ್ಲೂ ತೊಡಗಿಸಿಕೊಂಡರೆ ಉತ್ತಮ ಕ್ರೀಡಾಪಟುವಾಗಲು ಸಾಧ್ಯ . ಮೂಗೂರಿನ ಕ್ರೀಡಾಧಿಕಾರಿ ಪರಿಶ್ರಮದಿಂದಾಗಿ ಚೈತ್ರ ಎಂಬ ವಿದ್ಯಾರ್ಥಿ ಖೋಖೋ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆಗೈದಿರುವ ಅದೇ ರೀತಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರ ಮಗ ರಾಜ್ಯಮಟ್ಟದಲ್ಲಿ ಡಿಸ್ಕಸ್ ಥ್ರೋ ನಲ್ಲಿ ಸಾಧನೆಗೈದಿರುವುದು ಹೆಮ್ಮೆಯ ವಿಚಾ ರ. ಕ್ರೀಡಾಕೂಟದಲ್ಲಿ ಯಾರು ಸಹಾ ಕಾಟಾಚಾರಕ್ಕೆ ಪಾಲ್ಗೊಳ್ಳಬಾರದು ಎಂದರು.ಈ ವೇಳೆ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ತಾಲೂಕು ಅಧ್ಯಕ್ಷ ರಾಜೇಂದ್ರ, ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಬಿಇಒ ಮಂಜುಳಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ದೈಹಿಕ ಪರಿವೀಕ್ಷಕ ಸ್ಟೀವನ್, ನಟರಾಜು ಇನ್ನಿತರಿದ್ದರು
--- 9ಕೆಜಿಎಲ್ 12 ಕೊಳ್ಳೇಗಾಲದ ಮಹದೇಶ್ವರ ಕಾಲೇಜು ಕ್ರೀಡಾಂಗಣದಲ್ಲಿ ಅಯೋಜಿಸಿದ್ದ ಕ್ರೀಡಾಕೂಟದಲ್ಲಿ ಶಾಸಕ ಕೖಷ್ಣಮೂರ್ತಿ ಮತನಾಡಿದರು.