ಸಿಎಂ, ಗೃಹಮಂತ್ರಿ ಸಿಡಿಯೂ ಬರಬಹುದು

KannadaprabhaNewsNetwork |  
Published : May 08, 2024, 01:03 AM IST
ರಮೇಶ್ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಗೋಕಾಕ ಇವತ್ತು ಒಬ್ಬರಿಗೆ (ಪ್ರಜ್ವಲ್‌ ರೇವಣ್ಣ) ಆಗಿದೆ. ಮುಂದೆ ಸಿದ್ದರಾಮಯ್ಯಗೂ ಬರಬಹುದು, ಪರಮೇಶ್ವರ ಅವರ ವಿಡಿಯೋಗಳು ಬರಬಹುದು. ದಯವಿಟ್ಟು ಗೃಹ ಸಚಿವರು, ಮುಖ್ಯಮಂತ್ರಿಗಳು ಪಕ್ಷಾತೀತವಾಗಿ ಇದಕ್ಕೆ ಇತಿಶ್ರೀ ಹಾಡಬೇಕೆಂದು ಸಿಎಂ ಅವರನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ ಇವತ್ತು ಒಬ್ಬರಿಗೆ (ಪ್ರಜ್ವಲ್‌ ರೇವಣ್ಣ) ಆಗಿದೆ. ಮುಂದೆ ಸಿದ್ದರಾಮಯ್ಯಗೂ ಬರಬಹುದು, ಪರಮೇಶ್ವರ ಅವರ ವಿಡಿಯೋಗಳು ಬರಬಹುದು. ದಯವಿಟ್ಟು ಗೃಹ ಸಚಿವರು, ಮುಖ್ಯಮಂತ್ರಿಗಳು ಪಕ್ಷಾತೀತವಾಗಿ ಇದಕ್ಕೆ ಇತಿಶ್ರೀ ಹಾಡಬೇಕೆಂದು ಸಿಎಂ ಅವರನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಮನವಿ ಮಾಡಿದರು.ನಗರದಲ್ಲಿ ಮತದಾನ ಮಾಡಿದ ಬಳಿಕ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ವಿಚಾರದ ಕುರಿತು ಮೊದಲಿಂದಲೂ ಮೇಲಿಂದ ಮೇಲೆ ಹೇಳಿಕೊಂಡು ಬಂದಿರುವೆ. ಆಗ ಎಲ್ಲರೂ ನನ್ನನ್ನು ನಿರ್ಲಕ್ಷ್ಯ ಮಾಡಿ ನಗುತ್ತ ಕುಳಿತಿದ್ದರು. ಇವತ್ತು ಒಬ್ಬರಿಗೆ ಆಗಿದೆ. ಮುಂದೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರಿಗೂ ಬರಬಹುದು ಎಂದು ಎಚ್ಚರಿಕೆ ನೀಡಿದರು.

ಪ್ರಜ್ವಲ್‌​ ಲೈಂಗಿಕ ದೌರ್ಜನ್ಯ ಪ್ರಕರಣ ಯಾರೂ ಹೆಮ್ಮೆ ಪಡುವ ವಿಷಯವಲ್ಲ. ಎಲ್ಲರೂ ತಲೆತಗ್ಗಿಸುವ ವಿಷಯ. ಬಹಳ ಕೆಟ್ಟ ರೀತಿಯಲ್ಲಿ ಆಗಿದೆ. ರೇವಣ್ಣ ಕಾನೂನು ರೀತಿ ಹೋರಾಟ ಮಾಡಲಿ. ಕಾನೂನು ಒಂದೇ ಅದಕ್ಕೆ ಇರುವ ಉತ್ತರ ಎಂದು ತಿಳಿಸಿದರು.

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಅವರ ಆಡಿಯೋ ರಿಲೀಸ್ ವಿಚಾರದ ಕುರಿತು ಮಾತನಾಡಿದ ಅವರು, ಆ ಆಡಿಯೋ ಸುತ್ತು ಹಾಕಿ ಇದೆ. ನನ್ನ ಕೇಸ್​ನಲ್ಲಿ ನೇರವಾಗಿ ಇರೋದೇ ಇದೆ. ಡಿ.ಕೆ.ಶಿವಕುಮಾರ ನೇರವಾಗಿ ಭಾಗಿಯಾದ ಬಗ್ಗೆ ನನ್ನ ಬಳಿ ಸಾಕ್ಷಿಗಳಿವೆ. ಅವರ ಬಳಿ ಅಲ್ಲಿ ಇಲ್ಲಿ ಅಂತಾ ಸುತ್ತು ಹಾಕಿರೋದು ಇದೆ. ನನ್ನ ಕೇಸ್​ನಲ್ಲಿ ಡಿಕೆ ಶಿವಕುಮಾರ್ ಮಾತಾಡಿದ್ದೇ ಕೊಡುತ್ತೇನೆ. ನನ್ನ ಬಗ್ಗೆ ಷಡ್ಯಂತ್ರ ಮಾಡಿದ್ದು‌ ಇದೆ. ಆದರೆ, ಮಾಧ್ಯಮದ ಮುಂದೆ ಕೊಡಲ್ಲ. ಸಿಬಿಐಗೆ ಕೇಸ್ ಕೊಟ್ಟರೇ ಸಾಕ್ಷಿ ಕೊಡುತ್ತೇನೆ ಎಂದು ತಿಳಿಸಿದರು.

ಎಸ್‌ಐಟಿ ಮೇಲೆ ವಿಶ್ವಾಸವಿಲ್ಲ:

ನನ್ನ ಕೇಸ್​ನಲ್ಲೂ ಎಸ್‌ಐಟಿ ಮೇಲೆ ವಿಶ್ವಾಸ ಇಲ್ಲ. ಈಗಲೂ ಎಸ್ಐಟಿ ಮೇಲೆ ವಿಶ್ವಾಸ ಇಲ್ಲ‌. ಸಿಬಿಐಗೆ ಕೇಸ್ ಕೊಟ್ಟರೂ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮೇಲುಸ್ತುವಾರಿ ಮಾಡಬೇಕು. ಮಹಾನ್ ನಾಯಕ ಹಣದಲ್ಲಿ ಬಹಳಷ್ಟು ಪ್ರಭಾವಿ ಇದ್ದಾರೆ. ಹಣ ಕೊಟ್ಟು ಎಲ್ಲವನ್ನೂ ಖರೀದಿ ಮಾಡಬೇಕು ಅನ್ನೋ ಸೊಕ್ಕಿದೆ. ದೇಶದಲ್ಲಿ ಕಾನೂನು ಉಳಿಯಬೇಕು ಎಂದರೇ ಈ ಕೇಸ್​ನಲ್ಲಿ ಫಿಕ್ಸ್ ಆಗಬೇಕು. ನನ್ನ ಕೇಸ್​ನಲ್ಲಿ ಬರೀ ಡಿ.ಕೆ.ಶಿವಕುಮಾರ್ ಭಾಗಿಯಾಗಿಲ್ಲ. ನಮ್ಮವರೂ ಕೇಸ್​ನಲ್ಲಿದ್ದಾರೆ. ಜೂ.4ರ ನಂತರ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ಸತತ 4 ವರ್ಷಗಳಿಂದ ಪ್ರಶ್ನೆಯಾಗಿ ಕಾಡುತ್ತಿದ್ದು, ಜೂನ್ 4ರ ನಂತರ ಇತಿಶ್ರೀ ಹಾಡೋಣ ಎಂದರು.ರಾಜಕಾರಣದಲ್ಲಿ ನನ್ನ ವಿರೋಧಿಗಳು ಪ್ರಬಲರು ಎಂದು ಮೊದಲಿನಿಂದಲೂ ಹೇಳುತ್ತ ಬಂದಿದ್ದೇನೆ. ನಮ್ಮ ವಿರೋಧಿಗಳು ಪ್ರಬಲರು ಎಂದು‌ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.ಬೆಳಗಾವಿ ದಕ್ಷಿಣ, ಗೋಕಾಕ್​ ಶಾಸಕರು ಗೂಂಡಾಗಿರಿ ಮಾಡುತ್ತಾರೆಂಬ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ‌ಹಟ್ಟಿಹೊಳಿ ಆರೋಪಕ್ಕೆ ಜೂ.4ರ‌ ನಂತರ ಈ ಬಗ್ಗೆ ‌ಮಾತನಾಡುತ್ತೇನೆ ಮತ್ತು ಎಲ್ಲ‌ ವಿಷಯ ಹೇಳುತ್ತೇನೆ ಎಂದರು.ದೇಶಾದ್ಯಂತ ಬಿಜೆಪಿಗೆ ಹೆಚ್ಚಿನ ಬೆಂಬಲ:ಬಿಜೆಪಿಗೆ ರಾಜ್ಯದಲ್ಲಿ ಮತದ ಪ್ರಮಾಣ ಜಾಸ್ತಿಯಾಗಿದೆ. 28 ಕ್ಷೇತ್ರಗಳ ಪೈಕಿ 22 ರಿಂದ 24 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಮೋದಿ ಹೇಳಿದ್ದಾರೆ ಅಬ್ ಕಿ ಬಾರ್, ಚಾರ್ ಸೋ ಫಾರ್ ಎಂದು. ಆದರೆ, ಅದಕ್ಕಿಂತ ಹೆಚ್ಚಿನ ಸ್ಥಾನ ಬಿಜೆಪಿ ಗೆಲ್ಲಲಿದೆ. ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳು ಪ್ರಬಲರೆಂದೇ ನಾವು ಚುನಾವಣೆ ಎದುರಿಸುತ್ತಿದ್ದೇವೆ. 2 ಲಕ್ಷ ಮತಗಳಿಂದ ಗೆಲ್ಲುತ್ತೇವೆನ್ನುವ ವಿರೋಧಿಗಳು ಹತಾಶರಾಗಿದ್ದಾರೆಂದು ತಿಳಿದುಕೊಳ್ಳಬೇಕು. ಜಗದೀಶ್ ಶೆಟ್ಟರ್ ಅಷ್ಟೆ ಅಲ್ಲ ದೇಶಾದ್ಯಂತ ಬಿಜೆಪಿಗೆ ಹೆಚ್ಚಿನ ಬೆಂಬಲ ಸಿಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕೋಟ್‌...

ಹಣ ಕೊಟ್ಟು ಮತ ತೆಗೆದುಕೊಳ್ಳುವುದಾದರೇ ಎಲ್ಲರೂ ಎಂಪಿ, ಎಂಎಲ್‌ಎ ಆಗುತ್ತಾರೆ. ಹಣದಿಂದ ಗೆಲ್ಲುತ್ತೇವೆ ಎಂಬುವುದು ಸಾಧ್ಯವಿಲ್ಲ. ಕ್ಯಾಂಡಿಡೇಟ್ ವೀಕಾದರೇ ಹಣ ಹಂಚುತ್ತಾರೆ. ಆತ್ಮವಿಶ್ವಾಸವಿರುವ ಅಭ್ಯರ್ಥಿ ಹಣ ಹಂಚಲ್ಲ. ಪಕ್ಷ, ಮತದಾರರ ಮೇಲೆ ವಿಶ್ವಾಸ ಇದ್ದರೇ ಹಣ ಹಂಚಲ್ಲ. ಕಾಂಗ್ರೆಸ್‌ನವರಂತೆ ಬಿಜೆಪಿಯವರು ಈ ಮಟ್ಟಕ್ಕೆ ಇಳಿಯಲ್ಲ. ವಿರೋಧಿಗಳು ಮಾಡುವ ಆರೋಪಗಳಿಗೆ ಜೂ.4ರ ನಂತರ ಉತ್ತರ ನೀಡುತ್ತೇನೆ.

-ರಮೇಶ ಜಾರಕಿಹೊಳಿ, ಶಾಸಕ.-----------------

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ