ಎಥೆನಾಲ್ ಸ್ಟೌ ನಿರಾಣಿ ಸಲಹೆಗೆ ಮಹಾ ಸಿಎಂ ಫಿದಾ!

KannadaprabhaNewsNetwork |  
Published : Mar 15, 2026, 03:15 AM IST
ಪೊಟೋ ಮಾ.14ಎಂಡಿಎಲ್ 1. ಮಹಾರಾಷ್ಟ್ರ ಸಿಎಂ ದೇವೆಂದ್ರ್ ಪಡ್ನವಿಸ್ ಅವರನ್ನು ಮಾಜಿ ಸಚಿವ ಎಮ್.ಆರ್.ನಿರಾಣಿ ಭೇಟಿಯಾದರು. | Kannada Prabha

ಸಾರಾಂಶ

ಯುದ್ಧದ ಕಾರಣದಿಂದಾಗಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಕೊರತೆ ಉಂಟಾಗಿರುವುದರಿಂದ ಪರ್ಯಾಯವಾಗಿ ಎಥೆನಾಲ್ ಸ್ಟೌ ಬಳಸಲು ಖ್ಯಾತ ಉದ್ಯಮಿ, ಮಾಜಿ ಸಚಿವ ಮುರುಗೇಶ ಆರ್.ನಿರಾಣಿ ಅವರ ಸಲಹೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೆಚ್ಚುಗೆ ಸೂಚಿಸಿ ಅಭಿನಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮುಧೋಳ

ಯುದ್ಧದ ಕಾರಣದಿಂದಾಗಿ ಎಲ್ಪಿಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಕೊರತೆ ಉಂಟಾಗಿರುವುದರಿಂದ ಪರ್ಯಾಯವಾಗಿ ಎಥೆನಾಲ್ ಸ್ಟೌ ಬಳಸಲು ಖ್ಯಾತ ಉದ್ಯಮಿ, ಮಾಜಿ ಸಚಿವ ಮುರುಗೇಶ ಆರ್.ನಿರಾಣಿ ಅವರ ಸಲಹೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೆಚ್ಚುಗೆ ಸೂಚಿಸಿ ಅಭಿನಂದಿಸಿದ್ದಾರೆ.

ಮುರುಗೇಶ ನಿರಾಣಿ ಶನಿವಾರ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಅಡುಗೆಗೆ ಎಥೆನಾಲ್ ಇಂಧನ ಬಳಕೆಯ ವಿಷಯ ಚರ್ಚೆಗೆ ಬಂತು. ಇದೊಂದು ಸರಳ ಮತ್ತು ಸುಲಭವಾಗಿ ಕಾರ್ಯರೂಪಕ್ಕೆ ತರುವ ಸಲಹೆಯಾಗಿದೆ. ಕಬ್ಬು, ಭತ್ತ, ಮೆಕ್ಕೆಜೋಳ ಬೆಳೆಯುವ ರೈತರ ಆರ್ಥಿಕ ಉನ್ನತಿಗೂ ಇದು ಅನುಕೂಲವಾಗುವುದು. ಸಾಧ್ಯವಿರುವ ಕಡೆ ಮಹಾರಾಷ್ಟ್ರದಲ್ಲಿ ಬಳಕೆಗೆ ಪ್ರೋತ್ಸಾಹಿಸುವುದಾಗಿ ಹಾಗೂ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಮಹಾರಾಷ್ಟ್ರದ ಸಿಎಂ ತಿಳಿಸಿದರು. ಪುಣೆ ನಿಂಬಕರ್ ಕೃಷಿ ಸಂಶೋಧನಾ ಕೇಂದ್ರ ಸ್ಟೇನ್ಲೆಸ್ ಸ್ಟೀಲ್ ಎಥೆನಾಲ್ ಸ್ಟೌ ಅಭಿವೃದ್ಧಿಪಡಿಸಿದ ಸಂಗತಿಯನ್ನು ಎಂ.ಆರ್. ನಿರಾಣಿ ಅವರು ಮಹಾರಾಷ್ಟ್ರ ಸಿಎಂಗೆ ವಿವರಿಸಿದರು. ಅನೇಕ ಮುಂದುವರಿದ ದೇಶಗಳು ಅಡುಗೆ ಮನೆಯ ಇಂಧನವಾಗಿ ಎಥೆನಾಲ್ ಬಳಸುತ್ತಿವೆ. ನಮ್ಮಲ್ಲಿಯೂ ಈ ಚಿಂತನೆ ಸಾಕಾರಗೊಳ್ಳಬೇಕೆಂಬ ಆಶಯ ನಿರಾಣಿ ಅವರು ತಮ್ಮ ಮಾತುಕತೆಯ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಇದೊಂದು ಸೌಹಾರ್ದ ಭೇಟಿಯಾಗಿತ್ತೆಂದು ಮುರುಗೇಶ ನಿರಾಣಿ ಅವರು ತಿಳಿಸಿದ್ದಾರೆ. ಈ ವೇಳೆ ಶಾಸಕ ರಾಹುಲ್ ಕೂಲ್ ಅವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ವೀಟ್ - 14
13 ಮಂದಿ ಐಎಎಸ್‌ ಅಧಿಕಾರಿಗಳ ವರ್ಗ, ಕೆಲವರಿಗೆ ಹೆಚ್ಚುವರಿ ಹೊಣೆ