ಪ್ರಜ್ವಲ್‌ ಕೇಸ್‌ನ ಎಸ್‌ಐಟಿ ಎಸ್ಪಿ ಸೇರಿ 153 ಮಂದಿಗೆ ಸಿಎಂ ಪದಕ

KannadaprabhaNewsNetwork |  
Published : Mar 29, 2026, 01:30 AM IST
Prasheela | Kannada Prabha

ಸಾರಾಂಶ

2025ನೇ ಸಾಲಿನ ಮುಖ್ಯಮಂತ್ರಿ ಪುರಸ್ಕಾರಕ್ಕೆ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ಹಗರಣದ ವಿಶೇಷ ತನಿಖಾ ತಂಡದ ಎಸ್ಪಿ ಸೇರಿ 153 ಪೊಲೀಸರು ಭಾಜನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ 2025ನೇ ಸಾಲಿನ ಮುಖ್ಯಮಂತ್ರಿ ಪುರಸ್ಕಾರಕ್ಕೆ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ಹಗರಣದ ವಿಶೇಷ ತನಿಖಾ ತಂಡದ ಎಸ್ಪಿ ಸೇರಿ 153 ಪೊಲೀಸರು ಭಾಜನರಾಗಿದ್ದಾರೆ.

ಎಸ್ಪಿಗಳಾದ ಉಡುಪಿಯ ಡಾ.ಕೆ.ಅರುಣ್‌, ಯಾದಗಿರಿಯ ಪೃಥ್ವಿಕ್ ಶಂಕರ್‌, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ (ಸಂಚಾರ) ಡಾ.ಎಂ.ಗೋಪಾಲ.ಎಂ.ಬ್ಯಾಕೋಡ, ಶಿವಮೊಗ್ಗದ ಎಎಸ್ಪಿ ಎಸ್‌.ರಮೇಶ್ ಕುಮಾರ್‌, ರಾಜ್ಯ ಗುಪ್ತದಳದ ಡಿವೈಎಸ್ಪಿಗಳಾದ ಆರ್‌.ವಾಸು, ರಾಘವೇಂದ್ರ ಹವಾಲ್ದಾರ್‌, ಬೆಳಗಾವಿ ಎಸಿಪಿ ಸಂತೋಷ್‌ ದಯಾನಂದ್ ಸತ್ಯನಾಯಕ್‌, ವಿಜಯಪುರದ ಡಿವೈಎಸ್ಪಿ ತುಳಜಪ್ಪ ಸುಲ್ಫಿ, ಸಿಸಿಬಿ ಎಸಿಪಿ ಎಚ್‌.ಕೆ.ಮಹಾನಂದ್‌, ಸಿಐಡಿ ಡಿವೈಎಸ್ಪಿ ಎಂ.ಎಚ್‌.ಉಮೇಶ್‌, ಎಸಿಪಿ (ಸಂಚಾರ ಯೋಜನೆ) ಜಿ.ಪ್ರಭಾಕರ್‌, ಸಿಎಎಆರ್‌ ಎಸಿಪಿ ನಾಗರಾಜ್‌.ಕೆ.ಕೆನ್ನಿಕರ್‌, ಸಹಾಯಕ ಕಮಾಂಡೆಂಟ್‌ ಐಎಸ್‌ಡಿ ಎಚ್.ಕೆ.ಪ್ರದೀಪ್, ಗೋಣಿಕೊಪ್ಪ ಪಿಐ ಶಿವರಾಜ್‌.ಆರ್‌.ಮುಧೋಳ್‌, ಮೈಸೂರು ಪಿಟಿಎಸ್‌ ಪಿಐ ಕೆ.ಷಣ್ಮುಗ ವರ್ಮಾ, ಚಿಕ್ಕಜಾಲ ಸಂಚಾರ ಠಾಣೆ ಪಿಐ ಬಿ.ಎಸ್‌.ಪ್ರಶೀಲಾ ಹಾಗೂ ಶಂಕರಪುರ ಠಾಣೆಯ ಜಿ.ಉದಯರವಿ, ಹೆಬ್ಬಗೋಡಿ ಪಿಐ ಜಿ.ಸೋಮಶೇಖರ್‌, ಮೈಸೂರು ವಿಜಯನಗರ ಪಿಐ ಎಸ್‌.ಡಿ.ಸುರೇಶ್ ಕುಮಾರ್‌, ಕೆಎಸ್‌ಐಎಸ್‌ಎಫ್‌ 1ನೇ ಪಡೆ ಪಿಐ ಪಿ.ಬಿ.ರಾಮನಾಥ್‌, ಕೆಐಎ ಪಿಐ ಬಿ.ಮಲ್ಲಿಕಾರ್ಜುನ, ಕುಮಾರಪಟ್ಟಣದ ಪಿಐ ಎಂ.ಡಿ.ಸಿದ್ದೇಶ್‌, ಕೆಎಸ್‌ಆರ್‌ಪಿ ಆರ್‌ಪಿಐ ಬಸವಣ್ಣ, ಗಿರಿನಗರ ಪಿಐ ಯು.ಸತೀಶ್ ಕುಮಾರ್, ಕಲಬುರಗಿಯ ಚೌಕ ಪಿಐ ಸುಶೀಲ್ ಕುಮಾರ್‌, ಚಿಕ್ಕಮಗಳೂರು ಗ್ರಾಮಾಂತರ ಪಿಐ ಜೆ.ಶ್ರೀಶೈಲ ಕುಮಾರ್‌, ವಿಜಯಪುರ ಕೆಎಲ್‌ಎ ಪಿಐ ಆನಂದ.ವಿ.ಠಕ್ಕಣನವರ್‌, ಕೆಎಸ್‌ಆರ್‌ಪಿ 5ನೇ ಪಡೆ ಆರ್‌ಪಿಐ ಪ್ರದೀಪ್ ನಾಯಕ್‌, ಸಿಟಿ ನಿಯಂತ್ರಣ ಕೊಠಡಿ ಪಿಐ ಎಂ.ಜೆ.ಮಂಜೇಶ್‌, ಸಿಸಿಬಿ ಪಿಐ ಲಕ್ಷ್ಮೀನಾರಾಯಣ್‌, ಸದ್ದುಗುಂಟೆಪಾಳ್ಯ ಠಾಣೆಯ ಪಿಐ ರಮೇಶ್‌ ಬಸನಗೌಡ ಚಾಯಗೊಳ್, ಸಿಐಡಿ ಡಿಟೆಕ್ಟಿವ್‌ ಪಿಐ ಎಂ.ಸೃಜನ, ಮುನಿರಾದಾಬಾದ್ ಕೆಎಸ್‌ಆರ್‌ಪಿ ಆರ್‌ಎಸ್‌ಐ ಆರ್‌.ಸುಬ್ರಮಣಿ, ವಿಜನಗರದ ಹೊಸಬಡಾವಣೆ ಪಿಎಸ್ಐ ಇ.ಕೋದಂಡಪಾಣಿ, ಎಸ್‌ಸಿಆರ್‌ಬಿ ಪಿಎಸ್‌ಐ ಎ.ಗ್ಲೋರಿ ಕ್ರಿಸ್ಟಿನ, ಕೆಜಿಎಫ್‌ನ ಕಾಮಸಮುದ್ರ ಪಿಎಸ್‌ಐ ಬಿ.ವಿ.ಕಿರಣ್ ಕುಮಾರ್‌, ಬೆಳಗಾವಿಯ ಐಗಳಿ ಪಿಎಸ್‌ಐ ಕುಮಾರ್‌.ದುಂಡಪ್ಪ.ಹಡ್ಕರ್, ಕೋರಮಂಗಲ ಪಿಎಸ್‌ಐ ಶ್ರೀಕಂಠೇಗೌಡ, ಬಳ್ಳಾರಿ ಮೋಕ ಪಿಎಸ್ಐ ಎ.ಕಳಿಂಗ, ಚಿತ್ರದುರ್ಗ ಗ್ರಾಮಾಂತರ ಪಿಎಸ್‌ಐ ಸುರೇಶ್‌, ಬೆಂಗಳೂರು ಸಿಎಸ್‌ಬಿ ಪಿಎಸ್‌ಐ ಸುನೀಲ್ ಪವಾರ್‌, ಗುಪ್ತವಾರ್ತೆ ಪಿಎಸ್‌ಐ ಟಿಪ್ಪುಸುಲ್ತಾನ್‌ ನಾಯಕ್‌ ವಾಡಿ, ಶಿರಸಿ ನ್ಯೂ ಮಾರ್ಕೆಟ್‌ ಪಿಎಸ್‌ಐ ರಾಜ್ ಕುಮಾರ್ ಸಿದ್ರಾಮಪ್ಪ ಉಕ್ಕಳಿ, ಹಳೇ ಹುಬ್ಬಳ್ಳಿ ಪಿಎಸ್‌ಐ ಭೀಮಪ್ಪ ನಾಗಪ್ಪ ಸಾತಣ್ಣವರ, ಎಎನ್‌ಎಫ್‌ ಕಾರ್ಕಳ ಆರ್‌ಎಸ್‌ಐ ಮಂಜುನಾಥ್‌, ಯಾದಗಿರಿ ಟೌನ್‌ ಪಿಎಸ್‌ಐ ಮಂಜನಗೌಡ ಪಾಟೀಲ್‌, ಸಿಎಆರ್‌ ಆರ್‌ಎಸ್‌ಐ ಬಿ.ಎಸ್.ಕಾರ್ತಿಕ್‌ ಹಾಗೂ ವಿಜಯಪುರದ ಮನಗುಳಿ ಪಿಎಸ್‌ಐ ಶ್ರೀಕಾಂತ್ ಕಾಂಬ್ಳೆ ಸೇರಿ ಇತರ ಅಧಿಕಾರಿ-ಸಿಬ್ಬಂದಿ ಆಯ್ಕೆಯಾಗಿದ್ದಾರೆ. ಎಸ್‌ಐಟಿ ತಂಡಕ್ಕೆ ಪುರಸ್ಕಾರ:

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಹಗರಣದ ಎಸ್‌ಐಟಿ ಎಸ್ಪಿ ಸುಮನ್‌.ಡಿ.ಪೆನ್ನೇಕರ್, ಹಾಸನ ಜಿಲ್ಲೆಯ ಎಎಸ್ಪಿ ಎಂ.ಕೆ.ತಮ್ಮಯ್ಯ, ಡಿಟೆಕ್ಟಿವ್‌ ಇನ್ಸ್‌ಪೆಕ್ಟರ್‌ ಆರ್‌.ರಾಜೇಶ್‌ ಸಿದ್ದಾಪುರದ ಎಟಿಎಂ ದರೋಡೆ ಪ್ರಕರಣದ ತನಿಖೆಗೆ ಜಯನಗರ ಎಸಿಪಿ ನಾರಾಯಣಸ್ವಾಮಿ ಹಾಗೂ ಸಿಸಿಬಿ ಇನ್ಸ್‌ಪೆಕ್ಟರ್ ದಯಾನಂದ್ ಅವರಿಗೆ ಪ್ರಶಸ್ತಿ ಸಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜೃಂಭಣೆಯಿಂದ ನಡೆದ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ
ಸಿಎನ್‌ಜಿ ದರ ಏರಿಕೆಗೆ ಆಟೋ ಚಾಲಕರ ಆಕ್ರೋಶ