ಮಠಾಧೀಶರ ಕುರಿತ ಹೇಳಿಕೆಯಿಂದ ಸಿಎಂ ನೈಜ ಗುಣ ಹೊರಬಂದಿದೆ: ಬೊಮ್ಮಾಯಿ

KannadaprabhaNewsNetwork |  
Published : Oct 08, 2026, 02:00 AM IST
ಕರ್ನಾಟಕ ರಾಜ್ಯರೈತ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ ಆರೋಪಿಸಿದರು. | Kannada Prabha

ಸಾರಾಂಶ

ಚುನಾವಣೆ ವಿಷಯದಲ್ಲಿ ಲೋಪವಾಗಿದ್ದರೆ ಆಯೋಗ ಮಾತ್ರ ದೂರು ದಾಖಲಿಸಲು ಸಾಧ್ಯ

ಹಾವೇರಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ವೀರಶೈವ ಲಿಂಗಾಯತ ಮಠಾಧಿಪತಿಗಳ ಬಗ್ಗೆ ತಮ್ಮ ನೈಜ ಗುಣವನ್ನು ಒಳಗಡೆ ಮುಚ್ಚಿಟ್ಟುಕೊಂಡು ಬೇರೆ ತರ ಪ್ರೊಜೆಕ್ಟ್ ಮಾಡಲು ನೋಡಿದ್ದರು. ಆದರೆ, ಇದೀಗ ಅವರ ನೈಜ ಗುಣ ಹೊರಬಂದಿದ್ದು ಅದು ಅವರ ಸಂಸ್ಕೃತಿಯಾಗಿದೆ. ಅವರ ಹೇಳಿಕೆ ಬಗ್ಗೆ ಮುಂದೆ ಜನ ತೀರ್ಮಾನಿಸುತ್ತಾರೆಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಮಠಾಧಿಪತಿಗಳು ನನ್ನ ಸೇವೆ ಮಾಡಬೇಕು ಎಂಬ ಹೇಳಿಕೆ ಅವರ ಸಂಸ್ಕೃತಿ ತೋರುತ್ತಿದೆ. ಈಗ ನಾನು ಹಾಗೇ ಹೇಳಿಲ್ಲ ಎಂದು ಹೇಳುತ್ತಾರೆ. ಆಡಿದ ಮಾತನ್ನು ಮರಳಿ ಪಡೆಯಲು ಆಗುವುದಿಲ್ಲ ಎಂದರು.

ಖಾಸಗಿ ದೂರಿಗೆ ಅವಕಾಶವಿಲ್ಲ: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿಯವರು ಫಾರಂ ನಂ. 7 ಕೊಟ್ಟು ಕಾಂಗ್ರೆಸ್ ಮತದಾರನ್ನು ತೆಗೆಸುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಎಸ್‌ಐಆರ್‌ ಪಾರದರ್ಶಕವಾಗಿ ನಡೆದಿದೆ. ಆದರೆ, ಕಾಂಗ್ರೆಸ್‌ ಮತದಾರರನ್ನು ತೆಗೆಸಿಲಾಗುತ್ತಿದೆ ಎಂದು ದೂರು ನೀಡಿದ್ದು ಇದಕ್ಕೆ ಅವರಿಗೆ ಅಧಿಕಾರವೇ ಇಲ್ಲ. ಚುನಾವಣೆ ವಿಷಯದಲ್ಲಿ ಲೋಪವಾಗಿದ್ದರೆ ಆಯೋಗ ಮಾತ್ರ ದೂರು ದಾಖಲಿಸಲು ಸಾಧ್ಯ ಎಂದು ಹೇಳಿದರು.

ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಎಂ.ಆರ್. ಪೂವಮ್ಮ ಅವರಿಗೆ ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಓಲಂಪಿಕ್ ಟ್ರೇನಿಂಗ್‌ಗೆ ₹ 10 ಲಕ್ಷ ನೀಡುತ್ತಿದ್ದೇವು. ಆದರೆ, ಈ ಸರ್ಕಾರಕ್ಕೆ ಮಕ್ಕಳ ಸಾಧನೆ ಗುರುತಿಸಲು ಸಮಯವೇ ಇಲ್ಲ. ಕೇವಲ ಅಧಿಕಾರದ ದರ್ಬಾರ್‌ನಲ್ಲಿ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್‌ಗೆ ನಡೆಯುತ್ತಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ನೂರಕ್ಕೆ ನೂರು ಗೆಲುವು ಸಾಧಿಸುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ತಜ್ಞರ ರೀತಿ ಮಾತನಾಡುವುದು ಬೇಡ..

ಬೆಡ್ತಿ-ವರದಾ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಈ ಕುರಿತು ಸಿಎಂ ಡಿ.ಕೆ. ಶಿವಕುಮಾರಗೆ ಪತ್ರ ಬರೆದಿದ್ದೇನೆ. ಡಿಪಿಆರ್‌ಗೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಡಿಪಿಆರ್ ಬಂದ ಮೇಲೆ ಎಷ್ಟು ಅರಣ್ಯ ಹೋಗುತ್ತದೆ ಎನ್ನುವುದು ಗೊತ್ತಾಗುತ್ತದೆ. ಅದು ಬರುವ ಮೊದಲೇ ನಾವೇ ತಜ್ಞರ ತರ ಮಾತಾಡುವುದು ಬೇಡ. ಈ ಬಗ್ಗೆ ಚರ್ಚಿಸಲು ಜನ ಪ್ರತಿನಿಧಿಗಳು ಹಾಗೂ ಹೋರಾಟಗಾರರ ಸಭೆ ಕರೆಯುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಅವರು ಸಭೆ ಕರೆಯುವ ಭರವಸೆ ಇದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರ್ ತಿದ್ದುಪಡಿಗೆ ಹಗಲು- ರಾತ್ರಿ ಕಾಯುವ ಜನ
ಮೋದಿಯವರ 25 ವರ್ಷ ಜನಸೇವೆಯೇ ನವಭಾರತಕ್ಕೆ ಪ್ರೇರಣೆ: ವಿಜಯೇಂದ್ರ