- ಮಾಗಡಿ ಪಟ್ಟಣದಲ್ಲಿ ವಿವಿಧ ಜನೋಪಯೋಗಿ ಕಟ್ಟಡಗಳನ್ನ ಲೋಕಾರ್ಪಣೆ ಮಾಡಿದ ಸಿಎಂಕನ್ನಡಪ್ರಭ ವಾರ್ತೆ ಮಾಗಡಿ
8 ಕೋಟಿ ರುಪಾಯಿ ವೆಚ್ಚದ ಮಾಗಡಿ ಪುರಸಭೆ ಮಾರುಕಟ್ಟೆ(ಅಂಗಡಿ) ಮಳಿಗೆಗಳ ನಿರ್ಮಾಣ, ಲೋಕೋಪಯೋಗಿ ಇಲಾಖೆ ವತಿಯಿಂದ ಮಾಗಡಿ ಪಟ್ಟಣದ ವ್ಯಾಪ್ತಿಯಲ್ಲಿ ಎಸ್‌ಎಚ್‌ಡಿಪಿ(ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ)ಯ 20 ಕೋಟಿ ರುಪಾಯಿ ವೆಚ್ಚದ ಕಾಮಗಾರಿಗೆ, ಮಾಗಡಿಯ ಜೂನಿಯರ್ ಕಾಲೇಜು ಆವರಣದಲ್ಲಿ 7 ಕೋಟಿ ರುಪಾಯಿಗಳ ವೆಚ್ಚದಲ್ಲಿ ಆಡಿಟೋರಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಬೆಂಗಳೂರು ಹಾಲು ಒಕ್ಕೂಟದ ನೂತನ ಶಿಬಿರ ಕಚೇರಿ ಹಾಗೂ ಮಾಗಡಿ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಐಟಿಐ ಕಾಲೇಜನ್ನು ಉದ್ಘಾಟಿಸಿದರು. ಮಾಗಡಿ ತಾಲೂಕಿನ ಹಾರೋಹಳ್ಳಿ ಗ್ರಾಮದ ಪಾಲಿಟೆಕ್ನಿಕ್ ಕಾಲೇಜಿಗೆ,ಮಾಗಡಿ ಪಟ್ಟಣದಲ್ಲಿ ಅತ್ಯಾಧುನಿಕ ಗ್ರಂಥಾಲಯ ಕಟ್ಟಡ, ಮಾಗಡಿ ತಾಲೂಕು ಜೂನಿಯರ್ ಕಾಲೇಜಿನ ಕ್ರೀಡಾಂಗಣದ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇದೇ ಸಂದರ್ಭದಲ್ಲಿ ವೈ.ಜಿ.ಗುಡ್ಡ ಮುಳುಗಡೆ ಪ್ರದೇಶದ ನಿರಾಶ್ರಿತರಿಗೆ ಹಕ್ಕು ಪತ್ರಗಳನ್ನು ವಿತರಿಸಿದರು.