ಯಲಬುರ್ಗಾ : ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯರ ಕೊಡುಗೆ ಅಪಾರ : ಬಸವರಾಜ ರಾಯರಡ್ಡಿ

KannadaprabhaNewsNetwork |  
Published : Jan 27, 2025, 12:49 AM ISTUpdated : Jan 27, 2025, 01:04 PM IST
೨೬ವೈಎಲ್‌ಬಿ೧:ಯಲಬುರ್ಗಾದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ತಾಲೂಕಾಡಳಿತ ವತಿಯಿಂದ ನಡೆದ ೭೬ನೇ ಗಣರಾಜೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿದರು. | Kannada Prabha

ಸಾರಾಂಶ

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ತ್ಯಾಗ, ಬಲಿದಾನ ಮಾಡಿದ ಮಹನೀಯರ ಸ್ಮರಣೆ ಮಾಡಲೇಬೇಕು.

  ಯಲಬುರ್ಗಾ : ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ತ್ಯಾಗ, ಬಲಿದಾನ ಮಾಡಿದ ಮಹನೀಯರ ಸ್ಮರಣೆ ಮಾಡಲೇಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ೭೬ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಸಂವಿಧಾನದಡಿಯಲ್ಲಿ ನಡೆಯುವ ಮೂಲಕ ನಮ್ಮ ಸಂಸ್ಕೃತಿ, ರಾಷ್ಟ್ರೀಯತೆ ಕುರಿತು ಹೆಚ್ಚಿನ ಕಳಿಕಳಿ ಬೆಳೆಸಿಕೊಂಡಾಗ ಮಾತ್ರ ಸ್ವಾತಂತ್ರ್ಯದ ರಕ್ಷಣೆ ಸಾಧ್ಯ ಎಂದರು.

ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅದೆಷ್ಟೂ ನೆನೆಸಿಕೊಂಡರೂ ಸಾಲದು. ತಾಲೂಕಿನ ಚಿಕ್ಕೋಪ ತಾಂಡದಲ್ಲಿ ರೈತರಿಗಾಗಿ ₹೧೧.೫೦ ಕೋಟಿ ವೆಚ್ಚದಲ್ಲಿ ಕೊಲ್ಡ್ ಸ್ಟೋರೆಜ್ ನಿರ್ಮಾಣಕ್ಕಾಗಿ ಸರ್ಕಾರದಿಂದ ಅನುದಾನ ನೀಡಿದ್ದಾರೆ. ಇದರಿಂದ ರೈತರು ಅಲ್ಲಿ ನಾನಾ ವ್ಯಾಪಾರವನ್ನು ಮಾಡಲು ಸಾಕಷ್ಟು ಅನುಕೂಲವಾಗಲಿದೆ. ಇನ್ನೂ ₹೧೫೦ಕೋಟಿ ವೆಚ್ಚದಲ್ಲಿ (ಸ್ಕೀಲ್ ಡೆವಲ್‌ಮೆಂಟ್) ಕೌಶಲ್ಯಾಭಿವೃದ್ಧಿಯಿಂದ ಈ ಭಾಗದ ಯುವಕ, ಯುವತಿಯರಿಗೆ ಹಲವಾರು ಉದ್ಯೋಗಾವಕಾಶಗಳನ್ನು ಪಡೆದುಕೊಂಡು ಹೊಸ ಬದುಕು ಕಟ್ಟಿಕೊಳ್ಳಲು ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಿದರು.

ಯಲಬುರ್ಗಾ ವಿಧಾನಸಭಾ ಸೇರಿದಂತೆ ರಾಜ್ಯದ ಎಲ್ಲಾ ವಿಧಾನಸಭಾ ಹಾಗೂ ಲೋಕಸಭಾ ಮತಕ್ಷೇತ್ರಗಳ ಬದಲಾವಣೆ ಆಗಲಿವೆ. ಯಾವ್ಯಾವ ಕ್ಷೇತ್ರಗಳು ಎಸ್ಸಿ, ಎಸ್ಟಿ ,ಸಾಮಾನ್ಯ, ಮಹಿಳಾ ಕ್ಷೇತ್ರಗಳಾಗಲಿವೆ ಎನ್ನುವುದರ ಬಗ್ಗೆ ೨೦೨೬ಕ್ಕೆ ಜನಗಣತಿಯ ಮೂಲಕ ಕ್ಷೇತ್ರ ವಿಗಂಡಣೆಯಾಗಲಿವೆ. ಮುಂದಿನ ೨೦೨೮ಕ್ಕೆ ಎಲ್ಲ ಸ್ಪಷ್ಟ ಚಿತ್ರಣ ದೊರೆಯಲಿದೆ. ಈ ಸಾರಿಯ ಬಜೆಟ್ ₹೪ ಲಕ್ಷ ಕೋಟಿ ಆಗಲಿದೆ. ಈ ತಾಲೂಕು ಕ್ರೀಡಾಂಗಣವನ್ನು ಮುಂದಿನ ವರ್ಷ ₹೨೦ಕೋಟಿ ವೆಚ್ಚದಲ್ಲಿ ಮಾದರಿಯ ಕ್ರೀಡಾಂಗಣವನ್ನಾಗಿ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

ತಹಸೀಲ್ದಾರ ಬಸವರಾಜ ತೆನ್ನಳ್ಳಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪಪಂ ಅಧ್ಯಕ್ಷ ಅಂದಾನಯ್ಯ ಕಳ್ಳಿಮಠ, ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಪಾಟೀಲ, ರಾಘವೇಂದ್ರಚಾರ್ಯ ಜೋಶಿ, ಕೆರಿಬಸಪ್ಪ ನಿಡಗುಂದಿ, ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ಫಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಪಪಂ ಮುಖ್ಯಾಧಿಕಾರಿ ನಾಗೇಶ, ಸರ್ವ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. 

ಆಮಂತ್ರಣದ ಪತ್ರಿಕೆ ಬಿಡುಗಡೆ:

ಕುಕನೂರಿನಲ್ಲಿ ಫೆ.೮ರಂದು ನಡೆಯಲಿರುವ ಬೃಹತ್ ಸಹಕಾರಿ ಜಾಗೃತಾ ಸಮಾವೇಶದ ಆಮಂತ್ರಣದ ಪತ್ರಿಕೆಗಳನ್ನು ಶಾಸಕ ಬಸವರಾಜ ರಾಯರಡ್ಡಿ ಬಿಡುಗಡೆಗೊಳಿಸಿದರು. ಬಳಿಕ ಅವರು ಮಾತನಾಡಿ, ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದರು. ತದನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

PREV

Recommended Stories

ಧರ್ಮಸ್ಥಳ ಪ್ರಕರಣ ಮುಚ್ಚಿ ಹಾಕುವ ಯತ್ನ
ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೀರು ಕಲುಷಿತ