ಕನ್ನಡಪ್ರಭ ವಾರ್ತೆ ಶಿಕಾರಿಪುರ
ಅವರು ಇಲ್ಲಿನ ವಾಲ್ಮೀಕಿ ಭವನದಲ್ಲಿ ನಡೆದ ಶಿಕಾರಿಪುರ ತಾ.ಶ್ರೀ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ದೊಡ್ಡ ದೊಡ್ಡ ಬ್ಯಾಂಕುಗಳು ಹೆಚ್ಚು ಹಣ ಹೊಂದಿರುವವರಿಗೆ ಹೆಚ್ಚು ಆದ್ಯತೆಗಳನ್ನು ನೀಡುತ್ತವೆ ಆದರೆ ಸಣ್ಣ ಪುಟ್ಟ ಸಹಕಾರಿ ಸಂಘಗಳು ಆರ್ಥಿಕವಾಗಿ ತೀರಾ ಹಿಂದುಳಿದವರನ್ನು ಮೇಲೆತ್ತುವ ಪ್ರಯತ್ನ ಮಾಡುತ್ತಿರುವುದು ಅತ್ಯಂತ ಪ್ರಶಂಶನೀಯ ಕಾರ್ಯವಾಗಿದೆ. ಸಹಕಾರಿ ಸಂಘಗಳ ಅಭಿವೃದ್ಧಿಗೆ ಉತ್ತಮ ಆಡಳಿತ ಮಂಡಳಿ ಹಾಗೂ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಸದಸ್ಯರು ಇದ್ದಾಗ ಮಾತ್ರ ಆ ಸಂಘಗಳು ಲಾಭದಾಯಕವಾಗಿ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ ಈ ದಿಸೆಯಲ್ಲಿ ಇಲ್ಲಿನ ವಾಲ್ಮೀಕಿ ಪತ್ತಿನ ಸಹಕಾರಿ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಲ್ಮೀಕಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಎಚ್.ಟಿ.ಬಳಿಗಾರ್ ಮಾತನಾಡಿ, ಹಿಂದುಳಿದ ವರ್ಗ,ಪರಿಶಿಷ್ಟ ಜಾತಿ/ಪಂಗಡದ ಸಹಿತ ಶೋಷಿತ ವರ್ಗದ ಏಳಿಗೆಗಾಗಿ ಹಾಗೂ ಸಹಕಾರಿ ಕ್ಷೇತ್ರದ ಪ್ರಗತಿಗೆ ಶ್ರಮಿಸಿದ ದೇವರಾಜ್ ಅರಸು ಹಾಗೂ ಎಲ್.ಜಿ. ಹಾವನೂರಂತಹ ಮಹಾನ್ ನಾಯಕರನ್ನು ನಾವು ಮರೆಯಬಾರದು, ಸದಾ ಅವರನ್ನು ಎಲ್ಲ ವರ್ಗದ ಜನರು ಗೌರವಿಸುವ ಅಗತ್ಯವಿದೆ
ಪ್ರಾಸ್ತಾವಿಕವಾಗಿ ಸಂಘದ ಸದಸ್ಯ ಕೆ.ಎಸ್.ಹುಚ್ರಾಯಪ್ಪ ಮಾತನಾಡಿದರು. ಆಹ್ವಾನ ಪತ್ರಿಕೆಯನ್ನು ಅನ್ನಪೂರ್ಣಮ್ಮ ಓದಿದರು. ಸಹಕಾರಿ ಸಂಘದ ಆಡಳಿತ ವರದಿಯನ್ನು ಉಮೇಶ್ ಮಾರವಳ್ಳಿ ವಾಚಿಸಿದರು.2023-24 ರ ಸಾಲಿನ ಸಂಘದ ಆಡಿಟ್ ಆದ ವರದಿಯನ್ನು ಕಾರ್ಯದರ್ಶಿ ಕಿರಿಟ್.ಎಸ್.ರಾಯ್ಕರ್ ಸಭೆಗೆ ಮಂಡಿಸಿದರು.ವೇದಿಕೆಯಲ್ಲಿ ಮುಖ್ಯ ಅತಿಥಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್
ಪ್ರಸಕ್ತ ಸಾಲಿನಲ್ಲಿ ಅಗಲಿದ ಶೇರುದಾರರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಹಾಗೂ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಯಿತು. ಮಮತಾಸಾಲಿ ಪ್ರಾರ್ಥಿಸಿ, ಜಗದೀಶ್ ಸ್ವಾಗತಿಸಿ, ಸುರೇಶ್ ನಿರೂಪಿಸಿದರು.