ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ರಾಜಕೀಯ ಬಣಗಳ ಕಿತ್ತಾಟದ ಪರಿಣಾಮ ದಿವಾಳಿಯಾಗುವ ಅಪಾಯ ಎದುರಿಸುತ್ತಿದೆ ಎಂದು ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಸಂಚಾಲಕ ಸಿ.ರಾಮಕೃಷ್ಣಪ್ಪ ತಿಳಿಸಿದರು.
ಸಹಕಾರ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಸಹಕಾರ ಸಂಘದ ಚುನಾವಣೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದವರು ಜೆಡಿಎಸ್ ಮುಖಂಡ ಹರೀಶ್ ಗೌಡರ ಪಾತ್ರ ಮತ್ತು ತಾಲೂಕಿಗೆ ಅವರು ನೀಡಿದ ಕೊಡುಗೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಹಲವು ರಚನಾತ್ಮಕ ಕಾರ್ಯಯೋಜನೆಗಳನ್ನು ಹೊಂದುವ ಮೂಲಕ ಜೆಡಿಎಸ್ ಬಲವರ್ಧನೆ ಹಾಗೂ ಪಕ್ಷ ಸಂಘಟನೆಗೆ ಶ್ರಮಿಸಿದ್ದಾರೆ ಎಂದರು.
ಹರೀಶ್‌ಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸಲ್ಲ. ಶಾಸಕರು ಈ ತುಚ್ಛ ಮನಸ್ಥಿತಿಯ ಬಗ್ಗೆ ತಮ್ಮ ಹಿಂಬಾಲಕರಿಗೆ ಬುದ್ದಿ ಹೇಳಬೇಕು. ಕ್ಷುಲ್ಲಕ ಹಾಗೂ ಮಾನಹಾನಿಕರ ಹೇಳಿಕೆಗಳ ವಿರುದ್ದ ಕಾನೂನು ಹೋರಾಟ ಮಾಡಲಾಗುವುದು ಎಂದರು.ಕಾಂಗ್ರೆಸ್ ಮುಖಂಡ ಅಜಯ್ ಮಾತನಾಡಿ, ಒಪ್ಪಂದ ಮಾಡಿಕೊಳ್ಳುವ ಮನಸ್ಥಿತಿ ಇರುವ ಬಿಜೆಪಿಗರು ನಾವು ಬೆಂಬಲಿಸಿ ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರಗಳನ್ನು ಬಲವಂತದಿಂದ ಹಿಂಪಡೆಯುವಂತೆ ಮಾಡುವುದು ಎಷ್ಟು ಸರಿ? ಅವರು ಕುತಂತ್ರದಿಂದ ಚುನಾವಣೆಗೆ ಮುಂದಾಗಿದ್ದರು, ಅದಕ್ಕೆ ತಕ್ಕ ಉತ್ತರ ನಾವು ನೀಡಿದ್ದೇವೆ ಎಂದರು.
ಈ ವೇಳೆ ಗ್ರಾಪಂ ಸದಸ್ಯ ವಿರೇಗೌಡ, ಮುಖಂಡರಾದ ವೆಂಕಟೇಶ್, ಚೈತ್ರ ಭಾಸ್ಕರ್, ಅಜಯ್, ದೀಪು, ಮಂಜುನಾಥ್, ಚೈತ್ರ ಶ್ರೀಧರ್, ಪ್ರವೀಣ್ ಶಾಂತಿನಗರ ಉಪಸ್ಥಿತರಿದ್ದರು.
ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರ ಸಂಘ ಚುನಾವಣೆ ಕುರಿತು ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಸಂಚಾಲಕ ಸಿ.ರಾಮಕೃಷ್ಣಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.