ಬ್ಯಾಂಕಿನ ರೀತಿ ಸಹಕಾರ ಸಂಘ ಸೇವೆ

KannadaprabhaNewsNetwork |  
Published : Jun 14, 2024, 01:02 AM IST
ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ  ಮೊದಲ ಹಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ | Kannada Prabha

ಸಾರಾಂಶ

ಚಾಮರಾಜನಗರ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಘದ ಅಧ್ಯಕ್ಷ ಗೌರಿಶಂಕರ್ ಹಾಗೂ ಮೂರು ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಸಂಘದ ನಿರ್ದೇಶಕರು ಶಂಕುಸ್ಥಾಪನೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದಲ್ಲಿರುವ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಘದ ಅಧ್ಯಕ್ಷ ಗೌರಿಶಂಕರ್ ಹಾಗೂ ಮೂರು ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಂಘದ ನಿರ್ದೇಶಕರ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಶ್ರೀ ಬಸವೇಶ್ವರ ಪತ್ತಿನ ಸಂಘದ ಅಧ್ಯಕ್ಷ ಗೌರಿಶಂಕರ್ ಮಾತನಾಡಿ, ಸುಮಾರು ೧೬ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕಳೆದ ೨೨ ವರ್ಷಗಳ ಹಿಂದೆ ಆರಂಭವಾದ ನಮ್ಮ ಸಹಕಾರ ಸಂಘವು ಉತ್ತಮವಾಗಿ ವಹಿವಾಟು ನಡೆಸಿ, ೧೫ ಕೋಟಿಗೂ ಹೆಚ್ಚು ವ್ಯವಹಾರವನ್ನು ನಡೆಸುತ್ತಿದೆ. ೧೦೯೨ ಮಂದಿ ಸದಸ್ಯರಿದ್ದು, ಈಗಾಗಲೇ ಸುಮಾರು ೨೦ ಲಕ್ಷ ರು. ವೆಚ್ಚದಲ್ಲಿ ಹಿಂದಿನ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿಯವರು ಕಟ್ಟಡ ನಿರ್ಮಾಣ ಮಾಡಿದ್ದು, ಇದರ ಮುಂದುವರಿದ ಭಾಗವಾಗಿ ಮೊದಲ ಅಂತಸ್ತು ಕಟ್ಟಲಾಗುತ್ತಿದೆ. ಸುಸಜ್ಜಿತ ಸಭಾಭವನ, ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿ ಸೇರಿದಂತೆ ವಿಶಾಲವಾದ ಹೈಟೆಕ್ ಸಭಾಭವನ ನಿರ್ಮಾಣವಾಗಲಿದೆ ಎಂದರು.

ಈಗಾಗಲೇ ನಮ್ಮ ಪತ್ತಿನ ಸಹಕಾರ ಸಂಘವು ಸದಸ್ಯರಿಗೆ ಬ್ಯಾಂಕಿನ ಮಾದರಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಸದಸ್ಯರಿಗೆ ಮನೆ ಮತ್ತು ಸೈಟ್ ಖರೀದಿ ಸಾಲ, ವೈಯಕ್ತಿಕ ಸಾಲ, ಆರ್.ಡಿ. ನಿಶ್ವಿತ ಠೇವಣಿ ಸೇರಿ ಅನೇಕ ಸೌಲಭ್ಯ ನೀಡಲಾಗುತ್ತಿದೆ. ಸಿದ್ದಗಂಗಾ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ೫ ರು. ದರದಲ್ಲಿ ಕುಡಿಯುವ ನೀರು ಪೂರೈಕೆ, ಇ ಸ್ಟಾಫಿಂಗ್ ಸೇವೆಯನ್ನು ಸಂಘದಿಂದ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಮಾದರಿಯಾಗಿ ಸಂಘವನ್ನು ಮುನ್ನಡೆಸಿಕೊಂಡು ಬಂದಿರುವ ಕೀರ್ತಿ ನಮ್ಮ ಸಂಘಕ್ಕೆ ಸಲ್ಲುತ್ತದೆ ಎಂದು ಗೌರಿಶಂಕರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೂರು ಸಂಘಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಬಸಪ್ಪ, ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಮುದ್ದು ಬಸವಣ್ಣ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ವಸಂತಮ್ಮ, ಸಹಕಾರ ಸಂಘದ ಉಪಾದ್ಯಕ್ಷ ಕುಮಾರಸ್ವಾಮಿ, ನಿರ್ದೇಶಕರಾದ ಡಾ. ಪರಮೇಶ್ವರಪ್ಪ, ಕೆ.ಎಸ್. ಮಹದೇವಸ್ವಾಮಿ, ಎಸ್. ಗುರುಸ್ವಾಮಿ, ಎಂ. ಲಿಂಗರಾಜಮೂರ್ತಿ, ಎಚ್.ಎಂ. ಗುರುಸ್ವಾಮಿ, ಬಿ. ನಾಗೇಂದ್ರ, ವಿ. ನಂಜುಂಡಸ್ವಾಮಿ, ಎನ್. ದೊರೆಸ್ವಾಮಿ, ಸಿ. ರಾಜಶೇಖರಮೂರ್ತಿ, ಪ್ರಮೀಳಾ ಆರ್. ಉದಗಟ್ಟಿ, ಎಸ್. ನಾಗಮಣಿ, ಸಂಘದ ಮಾಜಿ ಅಧ್ಯಕ್ಷರಾದ ಶಿವಕುಮಾರ್, ಯೋಗಪ್ರಕಾಶ್, ಶಿವಲಿಂಗಪ್ಪ, ಶಿವಕುಮಾರಸ್ವಾಮಿ, ಕಾರ್ಯದರ್ಶಿ ನಂಜುಂಡಸ್ವಾಮಿ, ಸಿಬ್ಬಂದಿಗಳಾದ ಮಹೇಂದ್ರ, ಆಕಾಶ್ ಹಾಗೂ ಮೂರು ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ