ಪಿಯುಸಿ ಫಲಿತಾಂಶದಲ್ಲಿ ಕುಸಿದ ಕಾಫಿನಾಡು

KannadaprabhaNewsNetwork |  
Published : Apr 10, 2026, 01:15 AM IST
9 ಬೀರೂರು 2ಕಡೂರು ಪಟ್ಟಣದ ಕನ್ನಡಭವನದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಸಮ್ಮೇಳನದ ಅಂತಿಮ ಸಿದ್ದತೆಯ ಬಗ್ಗೆ ಮಾಹಿತಿ ಹಂಚಿಕೊಂಡರು. ಸೂರಿಶ್ರೀನಿವಾಸ್, ಯರದಕೆರೆ ರಾಜಪ್ಪ, ಆಸಂಧಿಕಲ್ಲೇಶ್, ಚಿಕ್ಕನಲ್ಲೂರು ಪರಮೇಶ್, ಕೃಷ್ಣಸ್ವಾಮಿ, ಕೆ.ಎಚ್. ಮಂಜುನಾಥ್, ಕೆ.ಜಿ.ಲೋಕೇಶ್ವರ್ ಮತ್ತಿತರಿದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರುದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಶೇಕಡವಾರು ಉತ್ತಮ ಸಾಧನೆ ಮಾಡಿದರೂ ಕಳೆದ‌ ಬಾರಿಗೆ ಹೋಲಿಸಿದರೆ ಒಂದು ಸ್ಥಾನ ಕುಸಿತ ಕಂಡಿದೆ.ಕಳೆದ ವರ್ಷ ಶೇ.79.56ರಷ್ಟು ಫಲಿತಾಂಶ ಪಡೆದು 9ನೇ ಸ್ಥಾನದಲ್ಲಿದ್ದ ಚಿಕ್ಕಮಗಳೂರು ಈ ಬಾರಿ ಶೇ.90.80ರಷ್ಟು ಫಲಿತಾಂಶ ಪಡೆದರೂ 10ನೇ ಸ್ಥಾನಕ್ಕೆ ಇಳಿದಿದೆ. ಜಿಲ್ಲೆ ಒಟ್ಟು 8692 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 7616 ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ. 87.63 ರಷ್ಟು ಫಲಿತಾಂಶ ಬಂದಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಶೇಕಡವಾರು ಉತ್ತಮ ಸಾಧನೆ ಮಾಡಿದರೂ ಕಳೆದ‌ ಬಾರಿಗೆ ಹೋಲಿಸಿದರೆ ಒಂದು ಸ್ಥಾನ ಕುಸಿತ ಕಂಡಿದೆ.

ಕಳೆದ ವರ್ಷ ಶೇ.79.56ರಷ್ಟು ಫಲಿತಾಂಶ ಪಡೆದು 9ನೇ ಸ್ಥಾನದಲ್ಲಿದ್ದ ಚಿಕ್ಕಮಗಳೂರು ಈ ಬಾರಿ ಶೇ.90.80ರಷ್ಟು ಫಲಿತಾಂಶ ಪಡೆದರೂ 10ನೇ ಸ್ಥಾನಕ್ಕೆ ಇಳಿದಿದೆ. ಜಿಲ್ಲೆ ಒಟ್ಟು 8692 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 7616 ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ. 87.63 ರಷ್ಟು ಫಲಿತಾಂಶ ಬಂದಿದೆ.

ಇದರಲ್ಲಿ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ 8,149 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 7,399 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪ್ರಕಾರ ಜಿಲ್ಲೆಗೆ ಶೇ. 90.80ರಷ್ಟು ಫಲಿತಾಂಶ ಬಂದಿದೆ.

ಕಲಾ ವಿಭಾಗದಲ್ಲಿ 2,044 ಹೊಸ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ, 1,682 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಕಲಾ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಶೇ. 82.29 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 2,688 ಹೊಸ ವಿದ್ಯಾರ್ಥಿಗಳು ಪರೀಕ್ಷೆ ಬರೆದು 2,486 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ. ಈ ಮೂಲಕ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಶೇ. 92.49 ರಷ್ಟು ಫಲಿತಾಂಶ ಬಂದಿದೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ, ಹಿಂದಿನಿಂದಲೂ ವಿಜ್ಞಾನ ವಿಭಾಗದಲ್ಲಿ ತನ್ನ ಪ್ರಾಬಲ್ಯ ತೋರುತ್ತಲೇ ಬಂದಿದೆ. ಈ ಬಾರಿ ವಿಜ್ಞಾನ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲೆ ಶೇ.94.56ರಷ್ಟು ಫಲಿತಾಂಶ ಪಡೆದಿರುವುದು ವಿಶೇಷ. 3,417 ಹೊಸ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 3,231 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.ಮೊದಲ ಬಾರಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಶೇಕಡವಾರು ಆಧಾರದ ಮೇಲೆ ಚಿಕ್ಕಮಗಳೂರು ಜಿಲ್ಲೆ ಹತ್ತನೇ ಸ್ಥಾನ ದಲ್ಲಿದ್ದರೂ, ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಪರಿಗಣಿಸಿದರೆ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿಯೇ 7ನೇ ಸ್ಥಾನದಲ್ಲಿದೆ.

-- ಬಾಕ್ಸ್....

ಅಂಕಿ ಅಂಶ

ವಿವರ. ಪರೀಕ್ಷೆ ಬರೆದವರು ಉತ್ತೀರ್ಣ. ಶೇ

ಒಟ್ಟು ಪರೀಕ್ಷೆ ವಿದ್ಯಾರ್ಥಿ 8692. 7616 87.63

ಹೊಸ ವಿದ್ಯಾರ್ಥಿ 8149. 7399. 90.8

ಖಾಸಗಿ ವಿದ್ಯಾರ್ಥಿ 192. 106. 55.21

ಪುನರಾವರ್ತಿತ ವಿದ್ಯಾರ್ಥಿ 351. 112. 31.91...ಬಾಕ್ಸ್...

ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ

ಪರೀಕ್ಷೆ ಬರೆದ ಒಟ್ಟು 4051 ಹೊಸ ವಿದ್ಯಾರ್ಥಿಗಳಲ್ಲಿ 3827 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಶೇ.94.47 ರಷ್ಟು ಫಲಿತಾಂಶ ಪಡೆದಿದ್ದಾರೆ. ನಗರದ ಪ್ರದೇಶದ 4098 ಹೊಸ ವಿದ್ಯಾರ್ಥಿಗಳು ಪರೀಕ್ಷೆ ಬರೆದರೂ 3572 ವಿದ್ಯಾರ್ಥಿಗಳಷ್ಟೇ ಪಾಸ್ ಆಗಿದ್ದು, ಕೇವಲ ಶೇ. 87.16 ರಷ್ಟು ಫಲಿತಾಂಶ ಬಂದಿದೆ......ಬಾಕ್ಸ್....ಹುಡುಗಿಯರೇ ಟಾಪ್

ಪರೀಕ್ಷೆ ಬರೆದ 4974 ಬಾಲಕಿಯರಲ್ಲಿ 4473 ಮಂದಿ ತೇರ್ಗಡೆಆಗುವ ಮೂಲಕ ಶೇ.89.93 ರಷ್ಟು‌ ಫಲಿತಾಂಶ ಬಂದಿದೆ. ಆದರೆ, ಪರೀಕ್ಷೆ ಬರೆದ 3718 ಹುಡುಗರ ಪೈಕಿ 3144 ಮಾತ್ರ ಪಾಸ್ ಆಗಿದ್ದು, ಶೇ.84.56ರಷ್ಟು ಫಲಿತಾಂಶ ಬಂದಿದೆ. ಈ ಮೂಲಕ ಹುಡುಗಿಯರು ಜಿಲ್ಲೆಯಲ್ಲಿ ಮೇಲುಗೈ ಸಾಧಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಥೋತ್ಸವದ ಯಶಸ್ಸಿಗೆ ಸಹಕರಿಸಿದವರಿಗೆ ಮಾಜಿ ಧರ್ಮದರ್ಶಿ ಧನ್ಯವಾದ
ಜನಸ್ಪಂದನಾ ಸಭೆ ಹಿನ್ನೆಲೆ ಪೂರ್ವಸಿದ್ಧತಾ ಸಭೆ ನಡೆಸಿದ ಡೀಸಿ