ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿನ ಕೊಡವ ಸಮಾಜದಲ್ಲಿ ಯಲ್ ಡಿ ಸಿ ಕಂಪನಿ ಕುಶಾಲನಗರ ಮತ್ತು ಜಯ ಕಾಫಿ ನೆಲಜಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾಫಿಯಲ್ಲಿ ಉತ್ತಮ ಕೃಷಿ ಪದ್ಧತಿಗಳು ಮತ್ತು ಹಣ್ಣಿನ ಬೆಳೆಗಳ ವೈವಿಧ್ಯೀಕರಣ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾಗತಿಕವಾಗಿ ಕಾಫಿಗೆ ಅಧಿಕ ಬೇಡಿಕೆ ಇದೆ. ಅದರಲ್ಲೂ ಕೊಡಗಿನ ಕಾಫಿ ಉತ್ಕೃಷ್ಟವಾದುದು. ಕಾಫಿ ತೋಟದ ಒಳಗಡೆ ಹಣ್ಣಿನ ತಳಿಗಳನ್ನು ಬೆಳೆಸುವುದರಿಂದ ಕೃಷಿಕರು ಆರ್ಥಿಕವಾಗಿ ಸಬಲರಾಗಬಹುದು. ಬೆಣ್ಣೆ ಹಣ್ಣು, ರಾಂಬುಟನ್, ಲಿಚಿ, ಮ್ಯಾಂಗೋ ಸ್ಟೀನ್, ಕಿತ್ತಳೆ ಮುಂತಾದ ವೈವಿಧ್ಯಮಯ ತಳಿಗಳು ಇಲ್ಲಿನ ಹವಾಮಾನಕ್ಕೆ ಸೂಕ್ತವಾಗಿವೆ. ಉತ್ತಮ ಮಾರುಕಟ್ಟೆಯೂ ಹಣ್ಣಿನ ಬೆಳೆಗಳಿಗೆ ಲಭಿಸುತ್ತಿದೆ. ಅಂತರ ಬೆಳೆಯಾಗಿ ಹಣ್ಣಿನ ಗಿಡಗಳನ್ನು ಬೆಳೆಸುವುದರ ಮೂಲಕ ಕೃಷಿಕರು ವೈವಿಧ್ಯತೆಯನ್ನು ಕಾಪಾಡಿಕೊಳ್ಳಬಹುದು ಎಂದ ಮುರಳೀಧರ್ಹಣ್ಣಿನ ಗಿಡಗಳ ಬೇಸಾಯ ಹಾಗೂ ಗಿಡಗಳ ಪೋಷಣೆ, ಗಿಡಗಳಿಗೆ ಬಾಧಿಸುವ ರೋಗಗಳ ನಿಯಂತ್ರಣ ಮತ್ತು ಹಣ್ಣಿನ ಗಿಡಗಳ ಬೆಳೆಸಲು ಸಿಗುವ
ಕಾಫಿ ಬೆಳೆಗಾರ ಮುಕ್ಕಾಟಿರ ವಿನಯ್ ಮಾತನಾಡಿ, ಕಾಫಿಗೆ ಇಂದು ಜಾಗತಿಕವಾಗಿ ಉತ್ತಮ ಧಾರಣೆ ಲಭಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಬೆಳೆಗಾರರು ಕಡಿಮೆ ಇಳುವರಿಯನ್ನು ಪಡೆಯುತ್ತಿದ್ದಾರೆ. ತಾಪಮಾನದ ವೈಪರೀತ್ಯದಿಂದಾಗಿ ಕಾಫಿ ಬೆಳೆಗೆ ತೊಡಕಾಗುತ್ತಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಉನ್ನತ ಮಟ್ಟದ ಸಂಶೋಧನೆ ಆಗಬೇಕಿದೆ. ಕಾಫಿ ತೋಟಗಳಲ್ಲಿ ತೇವಾಂಶ ಉಳಿಸಿಕೊಳ್ಳುವ ಬಗ್ಗೆ ರೈತರಿಗೆ ಮಾಹಿತಿ ನೀಡಿ ರೈತರು ಸಂಕಷ್ಟದಿಂದ ಹೊರಬರಲು ನೆರವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲಜಿ ಗ್ರಾಮದ ಜಯ ಕಾಫಿ ಮಾಲೀಕ ಮಂಡಿರ ಜಯದೇವಯ್ಯ ವಹಿಸಿ ಮಾತನಾಡಿ, ನಮ್ಮೊಂದಿಗೆ ವ್ಯವಹರಿಸುವ ಕಾಫಿ ಬೆಳೆಗಾರರಿಗೆ ಉತ್ತಮ ಬೋನಸ್ ಅನ್ನು ನೀಡಿದ್ದು ಮುಂದೆಯೂ ಎಲ್ಲ ಬೆಳೆಗಾರರು ನಮ್ಮೊಂದಿಗೆ ವ್ಯವಹರಿಸುವಂತೆ ಮನವಿ ಮಾಡಿಕೊಂಡರು.