ಕಾಫಿ ಉತ್ತಮ ಲಾಭದಾಯಕ ಬೆಳೆ: ಡಾ.ಪ್ರಭುಗೌಡ

KannadaprabhaNewsNetwork | Published : Jul 10, 2024 12:30 AM

ಸಾರಾಂಶ

ಶೃಂಗೇರಿ, ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಕಾಫಿ ಬೆಳೆ ಉತ್ತಮ ಲಾಭದಾಯಕ ಬೆಳೆಯಾಗಿದೆ ಎಂದು ಕೊಪ್ಪ ಕಾಫಿ ಬೋರ್ಡನ ಹಿರಿಯ ರೈಸೋನ್ ಅಧಿಕಾರಿ ಡಾ.ಪ್ರಭುಗೌಡ ಹೇಳಿದರು.

ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಕಾಫಿ ಬೆಳೆ ಉತ್ತಮ ಲಾಭದಾಯಕ ಬೆಳೆಯಾಗಿದೆ ಎಂದು ಕೊಪ್ಪ ಕಾಫಿ ಬೋರ್ಡನ ಹಿರಿಯ ರೈಸೋನ್ ಅಧಿಕಾರಿ ಡಾ.ಪ್ರಭುಗೌಡ ಹೇಳಿದರು.

ತಾಲೂಕಿನ ನೆಮ್ಮಾರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾವರಣದಲ್ಲಿ ನಡೆಯುತ್ತಿರುವ ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಆಯೋಜಿಸಲಾಗಿದ್ದ ಕಾಫಿ ಬೆಳೆ ವೈಜ್ಞಾನಿಕ ವಿಧಾನಗಳ ಕುರಿತು ವಿಚಾರ ಸಂಕಿರಣ, ಸಂವಾದ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಕಾಫಿ ಬೆಳೆ ನಮ್ಮ ದೇಶಿಯ ಬೆಳೆಯಲ್ಲ. ವಿದೇಶಿ ಬೆಳೆಯಾದ ಕಾಫಿ ಇಥಿಯೋಪಿಯದಲ್ಲಿ ಹುಟ್ಟಿದ್ದು ಕ್ರಿ.ಶ 16 ನೇ ಶತಮಾನದಲ್ಲಿ ನಮ್ಮ ದೇಶಕ್ಕೆ ಕಾಲಿಟ್ಟಿತು. ನಮ್ಮ ರಾಜ್ಯದ ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆ ಉಗಮಿಸಿತು ಎಂಬ ಇತಿಹಾನವಿದೆ. ಅರೇಬಿಕಾ ಕಾಫಿ ಇಥಿಯೋಪಿಯಾದಲ್ಲಿ, ರೋಬಾಸ್ಟಿಕಾ ಕಾಫಿ ಕಾಂಗೋ ದೇಶದಲ್ಲಿ ಹುಟ್ಟಿತು. ನಮ್ಮ ದೇಶದಲ್ಲಿ ಇವೆರೆಡು ತಳಿಗಳನ್ನು ಬೆಳೆಯಲಾಗುತ್ತಿದೆ. ನಮ್ಮ ರಾಜ್ಯವಲ್ಲದೇ ನೆರೆಯ ಕೇರಳ, ತಮಿಳುನಾಡು, ಆಂದ್ರ, ಒರಿಸ್ಸಾಗಳಲ್ಲಿಯೂ ಕಾಫಿ ಬೆಳೆ ಬೆಳೆಯಲಾಗುತ್ತಿದೆ.

ನಮ್ಮ ದೇಶದಲ್ಲಿ ಹೆಚ್ಚು ಕಾಫಿಯನ್ನು ವಿದೇಶಗಳಿಗೆ ರಪ್ತು ಮಾಡಲಾಗುತ್ತಿದೆ. 3.50 ಲಕ್ಷ ಹೆಕ್ಟೇರ್‌ ಪ್ರದೇಶಗಳಲ್ಲಿ ಕಾಫಿ ಬೆಳೆ ಬೆಳೆಯಲಾಗುತ್ತಿದೆ. 4 ಲಕ್ಷ ಕಾಫಿ ಬೆಳೆಗಾರರಿದ್ದಾರೆ. 1820 ರಿಂದ ಬ್ರಿಟೀಷರ ಆಳ್ವಿಕೆ ಅವಧಿಯಲ್ಲಿ ಕಾಫಿ ಎಸ್ಟೇಟ್‌ಗಳು ಹೆಚ್ಚಾಗಿ ಕಾಫಿ ಉದ್ಯಮ ಅಭಿವೃದ್ದಿ ಗೊಂಡಿತು. ಲಾಭದಾಯಕ ಬೆಳೆಯಾಗಿರುವ ಕಾಫಿಗೆ ಇಂದಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ ಎಂದರು. ಕೃಷಿಕ ಮಹೇಶ್‌ ಮಾತೋಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರಾಮಕೃಷ್ಣ , ರಾಘವೇಂದ್ರ ರೆಡ್ಡಿ, ಮನು, ಡಾ.ಆಶಾ ಬಿ.ಜಿ, ತೇಜಸ್ವಿನಿ ಮತ್ತಿತರರು ಉಪಸ್ಥಿತರಿದ್ದರು.

8 ಶ್ರೀ ಚಿತ್ರ 2-

ಶೃಂಗೇರಿ ನೆಮ್ಮಾರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಆಯೋಜಿಸಲಾಗಿದ್ದ ಕಾಫಿ ಬೆಳೆಯ ವೈಜ್ಞಾನಿಕ ವಿಧಾನಗಳ ಕುರಿತ ವಿಚಾರ ಸಂಕೀರಣ-ಸಂವಾದ ಗೋಷ್ಠಿಯನ್ನು ಕೃಷಿಕ ಮಹೇಶ್‌ ಮಾತೋಳ್ಳಿ ಉದ್ಘಾಟಿಸಿದರು.

Share this article