ಗೋಡೆ ಕೊರೆದು ಹುಂಡಿಗಳ ಕಳವು

KannadaprabhaNewsNetwork |  
Published : May 25, 2025, 03:22 AM IST
ಪೊಟೋ ಇದೆ : 24 ಕೆಜಿಎಲ್ 1 : ಅರಣ್ಯ ಪ್ರದೇಶದಲ್ಲಿ ಬಿದ್ದಿರುವ ದೇವಾಲಯದ ಹುಂಡಿಗಳು  | Kannada Prabha

ಸಾರಾಂಶ

ತಾಲೂಕಿನ ಬಿಳಿ ದೇವಾಲಯ ವ್ಯಾಪ್ತಿಯ ಮೆಣಸಿನಹಳ್ಳಿ ಗ್ರಾಮದ ಬೆಟ್ಟದ ರಂಗನಾಥ ಸ್ವಾಮಿ ಗುಡ್ಡದಲ್ಲಿರುವ ದೇವಾಲಯದಲ್ಲಿ ಮತ್ತೊಮ್ಮೆ ಮೂರು ಹುಂಡಿಗಳನ್ನು ಗೋಡೆ ಕೊರೆದು ಕಳ್ಳರು ಕಳ್ಳತನ ಮಾಡಿದ್ದು ಸ್ಥಳಕ್ಕೆ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಕಳ್ಳರ ಬಂಧನಕ್ಕಾಗಿ ತಪಾಸಣೆ ನಡೆಸುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಕುಣಿಗಲ್ ತಾಲೂಕಿನ ಬಿಳಿ ದೇವಾಲಯ ವ್ಯಾಪ್ತಿಯ ಮೆಣಸಿನಹಳ್ಳಿ ಗ್ರಾಮದ ಬೆಟ್ಟದ ರಂಗನಾಥ ಸ್ವಾಮಿ ಗುಡ್ಡದಲ್ಲಿರುವ ದೇವಾಲಯದಲ್ಲಿ ಮತ್ತೊಮ್ಮೆ ಮೂರು ಹುಂಡಿಗಳನ್ನು ಗೋಡೆ ಕೊರೆದು ಕಳ್ಳರು ಕಳ್ಳತನ ಮಾಡಿದ್ದು ಸ್ಥಳಕ್ಕೆ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಕಳ್ಳರ ಬಂಧನಕ್ಕಾಗಿ ತಪಾಸಣೆ ನಡೆಸುತ್ತಿದ್ದಾರೆ ಬಿಳಿ ದೇವಾಲಯ ಮೆಣಸಿನಹಳ್ಳಿಗೆ ಸೇರಿದ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿರುವ ರಂಗಸ್ವಾಮಿ ಗುಡ್ಡದ ಮೇಲೆ ಇತಿಹಾಸ ಪ್ರಸಿದ್ಧ ಕಂಬದ ರಂಗನಾಥ ಸ್ವಾಮಿ ದೇವಾಲಯ ಇದ್ದು, ಕಳೆದ ಎರಡು ವರ್ಷಗಳಿಂದ ಹತ್ತಾರು ಬಾರಿ ಈ ದೇವಾಲಯದಲ್ಲಿ ಹುಂಡಿ ಕಳವಾಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ

. ಈ ಹಿಂದೆಯೂ ಸಹ ಇದೆ ದೇವಾಲಯದ ಭದ್ರತಾ ಗೋಡೆಯನ್ನು ಕೊರೆದು ಕಳ್ಳರು ಕದ್ದಿದ್ದ ಜಾಗದಲ್ಲೇ ಮತ್ತೊಂದು ಕೊರೆತ ಮಾಡಿ ಮೂರು ಹುಂಡಿಗಳನ್ನು ಅಪಹರಿಸಿದ್ದಾರೆ. ದೇವಾಲಯದಲ್ಲಿ ನಿರಂತರ ಕಳ್ಳತನ ನಡೆದಿದ್ದು, ಕಳ್ಳರು ಗೋಡೆಯನ್ನು ಕೊರೆದು ಅಲ್ಲಿಂದ ಮೂರು ಹುಂಡಿಗಳನ್ನು ತೆಗೆದುಕೊಂಡು ಹೋಗಿ ಸ್ವಲ್ಪ ದೂರದ ಅರಣ್ಯ ಪ್ರದೇಶದಲ್ಲಿ ಒಡೆದು ಅದರಲ್ಲಿದ್ದ ಹಣ ನಗದು ಮತ್ತು ಒಡವೆಗಳನ್ನು ಆಪರಿಸಿದ್ದಾರೆ.

ಈ ಸಂಬಂಧ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೇವಾಲಯದಲ್ಲಿದ್ದ ಮೂರು ಕಳವಾಗಿರುವ ಹುಂಡಿಗಳಲ್ಲಿ ಅಂದಾಜು ಇಪ್ಪತ್ತೈದು ಸಾವಿರ ಹಣ ಇರಬಹುದು ಎಂದು ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಪಿಎಸ್ಐ ಕೃಷ್ಣಕುಮಾರ್, ಸಿಪಿಐ ನವೀನ ಗೌಡ ಹಾಗೂ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸೇರಿದಂತೆ ಪೋಲಿಸ್ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಮಕೂರಿಂದ ಬಂದಿದ್ದ ಶ್ವಾನ ಜಾಕಿ ಹುಂಡಿ ಇಟ್ಟಿದ್ದ ಜಾಗವನ್ನು ಪರಿಶೀಲಿಸಿ ನಂತರ ಹುಂಡಿ ಹೊಡೆದ ಜಾಗವನ್ನು ಖಾತರಿ ಪಡಿಸಿದ್ದು ಬೆರಳಚ್ಚು ತಜ್ಞರು ಹಲವಾರು ಸಾಕ್ಷಿಗಳನ್ನು ಸಂಗ್ರಹಿಸಿ ಪೊಲೀಸರ ವಶಕ್ಕೆ ನೀಡಿದ್ದು ಆರೋಪಿಗಳನ್ನು ಆದಷ್ಟು ಬೇಗ ಬಂದಿಸುವುದಾಗಿ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದರು.

ಬಾಗಿಲು ಹಾಕಲು ಒತ್ತಾಯ :-

ಇತಿಹಾಸ ಪ್ರಸಿದ್ಧ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯಕ್ಕೆ ಬಾಗಿಲು ಇಲ್ಲ ಎಂಬುದಕ್ಕೆ ಒಂದು ಕಥೆ ಇದೆ ಭಕ್ತರೊಬ್ಬರು ತಾವು ಕಷ್ಟದಲ್ಲಿದ್ದಾಗ ಬೆಟ್ಟದ ರಂಗನಾಥ ಸ್ವಾಮಿಯನ್ನು ಪ್ರಾರ್ಥಿಸಿದಾಗ ಸ್ವಾಮಿಗೆ ಭಕ್ತರ ಬಳಿಗೆ ಹೋಗಲು ಬಾಗಿಲು ತೊಂದರೆಯಾಗಿತ್ತು ಎಂಬ ಕಾರಣಕ್ಕೆ ಬಾಗಿಲನ್ನು ತನ್ನ ಕಾಲಿಂದು ಒದ್ದ ತಕ್ಷಣ ದೊಡ್ಡ ಕೆರೆಗೆ ಹೋಗಿ ಬಿದ್ದಿದೆ ಅಂದಿನಿಂದ ಇಂದಿನವರೆಗೆ ಆ ದೇವಾಲಯಕ್ಕೆ ಬಾಗಿಲು ಹಾಕುವಂತಿಲ್ಲ ಎಂಬ ನಂಬಿಕೆ ಜೀವಂತವಾಗಿದೆ ಅದಕ್ಕಾಗಿ ಆ ದೇವಾಲಯಕ್ಕೆ ಬಾಗಿಲು ಹಾಕಿಲ್ಲ ಅಲ್ಲಿದ್ದ ಹುಂಡಿಯನ್ನು ಪಕ್ಕದಲ್ಲಿ ಭದ್ರತಾ ಕೋಣೆಯೊಂದನ್ನು ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಲಾಗಿತ್ತು.

ಈ ಹುಂಡಿ ಬಳಕೆಗೆ ಮನವಿ

ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಮುಜರಾಯಿ ಇಲಾಖೆಯಿಂದ ಈ ಹುಂಡಿ ಅವಕಾಶ ಕಲ್ಪಿಸಲಾಗಿದೆ ಭಕ್ತರು ತಮ್ಮ ಸಮರ್ಪಣೆಯನ್ನು ಹಣದ ರೂಪದಲ್ಲಿ ಮಾಡುವಾಗ ಈ ಹುಂಡಿ ಸ್ಕ್ಯಾನರನ್ನು ಸ್ಕ್ಯಾನ್ ಮಾಡಿ ತಮ್ಮ ಹಣವನ್ನು ನೇರವಾಗಿ ದೇವಾಲಯದ ಖಾತೆಗೆ ಪಾವತಿಸಬಹುದು ಇದರಿಂದ ಹಣದ ಸುರಕ್ಷತೆ ಮತ್ತು ದೇವಾಲಯದ ಅಭಿವೃದ್ಧಿಗೆ ಸಹಕಾರ ಆಗುತ್ತದೆ ಎಂದು ಕಾರ್ಯನಿರ್ವಹಣಾಧಿಕಾರಿ ಮಹೇಶ್ ತಿಳಿಸಿದ್ದಾರೆ.

ವಿಗ್ರಹ ಮುರಿದ ವ್ಯಕ್ತಿಯ ಬಂಧನವಿಲ್ಲ

ಕಳೆದ ಹಲವಾರು ತಿಂಗಳ ಹಿಂದೆ ರಂಗನಾಥಸ್ವಾಮಿ ಬೆಟ್ಟಕ್ಕೆ ಮೆಟ್ಟಿಲು ಮುಖಾಂತರ ಹತ್ತುವಾಗ ಭಕ್ತರು ತಮ್ಮ ಭಕ್ತಿ ಸಮರ್ಪಣೆ ಮಾಡುವ ಸಲುವಾಗಿ ಬೆಟ್ಟದ ಕೆಳಭಾಗದಲ್ಲಿ ಆಂಜನೇಯ ಸ್ವಾಮಿ ದೇವಾಲಯದ ಬಳಿ ವಿಷ್ಣು ರೂಪದ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ವ್ಯಕ್ತಿಯೊಬ್ಬ ತನ್ನ ಕಾಲಿನಿಂದ ಒದ್ದು ಕಲ್ಲಿನಿಂದ ವಿಗ್ರಹವನ್ನು ಹೊಡೆದುಹಾಕಿ ಧ್ವಂಸ ಮಾಡಿದ್ದ ಸಂಬಂದ ಸಿಸಿಟಿವಿ ದಾಖಲಾತಿಗಳೊಂದಿಗೆ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದರೂ ಇದುವರೆವಿಗೂ ಆರೋಪಿಯನ್ನು ಪತ್ತೆ ಹಚ್ಚಿಲ್ಲ ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಪೊಟೋ ಇದೆ : 24 ಕೆಜಿಎಲ್ 1 : ಅರಣ್ಯ ಪ್ರದೇಶದಲ್ಲಿ ಬಿದ್ದಿರುವ ದೇವಾಲಯದ ಹುಂಡಿಗಳು

ಪೋಟೋ ಇದೆ : 24 ಕೆಜಿಎಲ್ 2 : ದೇವಾಲಯದ ಭದ್ರತಾ ಕೊಠಡಿಯ ಗೋಡೆ ಕೊರೆದಿರುವ ದೃಶ್ಯ .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''