ಕುಷ್ಠ ರೋಗಮುಕ್ತ ಸಮಾಜಕ್ಕಾಗಿ ಸಹಕರಿಸಿ: ಎಸ್.ಡಿ.ಬೆನ್ನೂರ

KannadaprabhaNewsNetwork |  
Published : Jan 31, 2026, 01:45 AM IST
30ಕೆಎಂಎನ್ ಡಿ18 | Kannada Prabha

ಸಾರಾಂಶ

ಕುಷ್ಠ ರೋಗವು ಇತರೆ ಕಾಯಿಲೆಗಳಂತೆ ಒಂದು ಸಾಮಾನ್ಯ ಕಾಯಿಲೆ. ಇದು ಚರ್ಮ ಮತ್ತು ನರಗಳಿಗೆ ಸಂಬಂಧಿಸಿದೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು, ರೋಗವನ್ನು ಬಹು ಔಷಧಿ ಚಿಕಿತ್ಸೆಯಿಂದ ಸಂಪೂರ್ಣ ಗುಣಪಡಿಸಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕುಷ್ಠ ರೋಗವನ್ನು ಸಂಪೂರ್ಣ ನಿವಾರಿಸಲು, ರೋಗಮುಕ್ತ ಸಮಾಜಕ್ಕಾಗಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸರ್ಕಾರದ ಸಂಕಲ್ಪದೊಂದಿಗೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಹೇಳಿದರು.

ತಾಲೂಕಿನ ಕೊಡಿಯಾಲ ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಕೊಡಿಯಾಲ ಆಯುಷ್ಮಾನ್ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ಸ್ಪರ್ಶ್ ಕುಷ್ಟರೋಗ ಅರಿವು ಆಂದೋಲನದಲ್ಲಿ ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಕುಷ್ಠ ರೋಗ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸುತ್ತಿದ್ದರು. ಅವರ ನೆನಪಿಗಾಗಿ ಪ್ರತಿ ವರ್ಷ ಜನವರಿ 30 ರಿಂದ ಫೆಬ್ರವರಿ 13ರವರೆಗೆ ಕುಷ್ಠರೋಗ ಅರಿವು ಆಂದೋಲನವನ್ನು ಆಯೋಜಿಸಲಾಗಿದೆ ಎಂದರು.

ಕುಷ್ಠ ರೋಗವು ಇತರೆ ಕಾಯಿಲೆಗಳಂತೆ ಒಂದು ಸಾಮಾನ್ಯ ಕಾಯಿಲೆ. ಇದು ಚರ್ಮ ಮತ್ತು ನರಗಳಿಗೆ ಸಂಬಂಧಿಸಿದೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು, ರೋಗವನ್ನು ಬಹು ಔಷಧಿ ಚಿಕಿತ್ಸೆಯಿಂದ ಸಂಪೂರ್ಣ ಗುಣಪಡಿಸಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ನಂತರ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪುಷ್ಪ ಕುಷ್ಠ ರೋಗದ ಲಕ್ಷಣಗಳು, ಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರತ್ನಮ್ಮ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಹಿರಿಯ ನಾಗರಿಕರಾದ ಕೃಷ್ಣೇಗೌಡ, ಬೋಳೇಗೌಡ, ಅಂಗನವಾಡಿ ಕಾರ್ಯಕರ್ತೆ ಸಿದ್ದಮ್ಮ, ಆಶಾ ಕಾರ್ಯಕರ್ತೆ ಶಾರದಮ್ಮ, ಶಾಂತಮ್ಮ ಹಾಗೂ ಮಕ್ಕಳ ತಾಯಂದಿರರು ಸೇರಿದಂತೆ ಇತರರು ಇದ್ದರು.ರೇಣುಕಾ(ಎಲ್ಲಮ್ಮ)ದೇವಿ ಜಾತ್ರಾ ಮಹೋತ್ಸವ

ಮದ್ದೂರು: ತಾಲೂಕಿನ ಹೊಳೆಬೀದಿಯ ಶ್ರೀ ಕ್ಷೇತ್ರ ಚಿಕ್ಕಸವದತ್ತಿ, ಶ್ರೀ ರೇಣುಕಾ(ಎಲ್ಲಮ್ಮ)ದೇವಿಯ ದೇವಸ್ಥಾನದಲ್ಲಿ ಜ.31 ಮತ್ತು ಫೆ.1 ಎರಡು ದಿನಗಳ ಕಾಲ ರೇಣುಕಾ(ಎಲ್ಲಮ್ಮ)ದೇವಿಯ 54ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು 27ನೇ ವರ್ಷದ ಮಹಾಚಂಡಿಕಾ ಹೋಮ ನಡೆಯಲಿದೆ.

ಜ.31 ರಂದು ಸಂಜೆ 6.30ಕ್ಕೆ ಮೂಲದೇವರ ಅನುಜ್ಞೆ, ಭೂಶಾಂತಿ, ಗಣಪತಿ ಪೂಜೆ, ಸ್ವಸ್ತಿವಾಚನ, ರಕ್ಷಾಬಂಧನ, ಪಂಚಗವ್ಯಾರಾಧನೆ, ದೇವನಾಂದಿ, ಋತ್ವಿಕ್ ವರಣ, ಕ್ಷೇತ್ರಪಾಲ ವಾಸ್ತೋಷ್ಪತಿ ಪ್ರಾರ್ಥನೆ, ಕಳಶಸ್ಥಾಪನೆ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಜರುಗಲಿದೆ.

ಫೆ.1 ರಂದು ಬೆಳಗ್ಗೆ ಮುತ್ತೈದೆ ಹುಣ್ಣಿಮೆ, ಭಾರತ ಹುಣ್ಣಿಮೆ ಪ್ರಯುಕ್ತ ಸುಪ್ರಭಾತ ಸೇವೆ, ಗಣಪತಿ ಪ್ರಾರ್ಥನೆ, ದೇವಿಗೆ ಅಭಿಷೇಕ ಮತ್ತು ಅಲಂಕಾರ, ಬೆಳಗ್ಗೆ 8.30ಕ್ಕೆ ಚಂಡಿಕಾಯಾಗ ಪ್ರಾರಂಭ, 11.30ಕ್ಕೆ ಮಹಾಪೂರ್ಣಾಹುತಿ ನಂತರ ಸುಹಾಸಿನಿ ಆರಾಧನೆ ಹಾಗೂ ಕನ್ನಿಕಾ ಆರಾಧನೆ ನಡೆಯಲಿದೆ.

ನಂತರ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮುತ್ತೈದೆಯರಿಂದ ತಂಬಿಟ್ಟಿನ ಆರತಿ, 1 ಗಂಟೆಗೆ ದೇಗುಲದ ಆವರಣದಲ್ಲಿ ಅನ್ನಸಂತರ್ಪಣೆ, ಸಂಜೆ 4.15ಕ್ಕೆ ದೇವಿಗೆ ನಿಂಬೆಹಣ್ಣಿನ ದೀಪದ ಆರತಿ, ಉಯ್ಯಾಲೋತ್ಸವ ಜರುಗಲಿದೆ. ಸಂಜೆ 7 ಗಂಟೆಗೆ ಎಲ್ಲಮ್ಮ ದೇವಿ ಮುತ್ತಿನ ಪಲ್ಲಕ್ಕಿಯಲ್ಲಿ ಪುಷ್ಪಮಾಲೆಗಳಿಂದ ಅಲಂಕೃತ ಮೆರವಣಿಗೆ ನಡೆಯಲಿದೆ.

ಫೆ.2 ರಂದು ಬೆಳಗ್ಗೆ ದೇವಿಯ ಮೂಲಸ್ಥಾನಕ್ಕೆ ಆಹ್ವಾನ, 8.30ಕ್ಕೆ ಪಂಚಗವ್ಯಾರಾಧನೆ, ಪುಣ್ಯಾಹವಾಚನ, ಕ್ಷೀರಾಭಿಷೇಕ, ಅಲಂಕಾರ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದಲ್ಲಿ ಮಹಿಳೆ ಮೇಲೆ ನಾಯಿ ಅಟ್ಟಹಾಸ, ವಿವಿಧೆಡೆ 50 ಹೊಲಿಗೆ
ಭ್ರಷ್ಟಾಚಾರಕ್ಕೆ ಸಾಕ್ಷ್ಯ ಕೊಟ್ರೆ ರಾಜೀನಾಮೆ : ಸಚಿವರ ಸವಾಲ್