ಲೋಕ ಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯ ಸರ್ಕಾರ ಪತನ: ಶೆಟ್ಟರ

KannadaprabhaNewsNetwork |  
Published : Apr 03, 2024, 01:35 AM IST
ಶೆಟ್ಟರ | Kannada Prabha

ಸಾರಾಂಶ

ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಭವಿಷ್ಯ ನುಡಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಭವಿಷ್ಯ ನುಡಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಭದ್ರತೆಗೆ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ದೂರಿದರು.

ಜಗದೀಶ ಶೆಟ್ಟರ ಅವರು ಮಹಾಂತ ದುರದುಂಡೇಶ್ವರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಿಜೆಪಿ ಮುಖಂಡ ಅಜೀತಕುಮಾರ ದೇಸಾಯಿ ಮೆನೆಗೆ ಭೇಟಿ ನೀಡಿದ ವೇಳೆ ಕಾರ್ಯಕರ್ತರ ಸಭೆಯನ್ನು ಕೂಡ ನಡೆಸಲಾಯಿತು. ಈ ವೇಳೆ ಅಜೀತಕುಮಾರ ದೇಸಾಯಿ, ವಿರೂಪಾಕ್ಷ ಮಾಮನಿ, ಸೌರಭ ಚೊಪ್ರಾ, ವಿನಯಕುಮಾರ ದೇಸಾಯಿ, ಈರಣ್ಣ ಚಂದರಗಿ, ಡಾ.ಕೆ.ವಿ. ಪಾಟೀಲ, ದಾವಲಸಾಬ್‌ ಚ್ಪಟಿ, ಮಹಾಂತೇಶ ಗೋಡಿ, ಶಿವಾನಂದ ಯರಗಣವಿ, ಪುಂಡಲೀಕ ಮೇಟಿ, ಪರ್ವತಗೌಡ ಪಾಟೀಲ, ಮಹಾಂತೇಶ ಜಕಾತಿ, ವಿಠ್ಠಲಗೌಡ ದೇವರಡ್ಡಿ, ಬಸನಗೌಡ ಪಾಟೀಲ, ಸದಾನಂದ ಹಣಬರ, ಚೇತನ ಜಕಾತಿ, ಬಿ.ಪಿ.ಗೋಡಿ, ಸದಾನಂದ ಪಾಟೀಲ, ಕೃಷ್ಣಮೂರ್ತಿ ತೊರಗಲ್, ರಾಜು ಸಾಲಿಮಠ ಸೇರಿದಂತೆ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!