ಗಂಗಾವತಿ:
ಕವಿಗಳು ಸಮಾಜ ತಿದ್ದುವ ಹಾಗೆ ಕವನಗಳಲ್ಲಿ ವಿಷಯ ಸಂಗ್ರಹಿಸಬೇಕು. ಕವಿಗೋಷ್ಠಿ ಎಂದರೆ ಬಹಳಷ್ಟು ಕವಿಗಳು ಭಾಗವಹಿಸುವ ಆಸಕ್ತಿ ಇಟ್ಟುಕೊಳ್ಳಬೇಕೆಂದು ಸಾಹಿತಿ ವಿಜಯ ವೈದ್ಯ ಹೇಳಿದರು.ನಗರದ ತಾಲೂಕು ಕನ್ನಡ ಸಾಹಿತ್ಯ ಭವನದಲ್ಲಿ ರೋಟರಿ ಕ್ಲಬ್, ಕಾವ್ಯ ಲೋಕ ಸಂಘಟನೆ ಮತ್ತು ವಿಶ್ವರತ್ನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹೊಸಳ್ಳಿ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯ ಸಂಭ್ರಮ 109ನೇ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ರಾಮುಮೂರ್ತಿ ನವಲಿ, ಕವಿಗಳು ಸ್ವರಚಿತ ಕವನ ರಚಿಸುವಾಗ ಪರಿಣಾಮಕಾರಿಯಾಗಿರಬೇಕು. ಅವು ಸಾಮಾಜಿಕ, ರಾಜಕೀಯ, ಸಾಹಿತ್ಯಿಕವಾಗಿರುವ ವಿಷಯಗಳಾಗಿರಬೇಕು ಎಂದರು.
ಇತ್ತಿಚೀನ ದಿನಗಳಲ್ಲಿ ಕವಿಗಳು ಕೇವಲ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತೃಪ್ತಿ ಪಟ್ಟುಕೊಳ್ಳುತ್ತಿದ್ದಾರೆ. ಆದರೆ, ಅವರು ಇಂತಹ ಕವಿಗೋಷ್ಠಿಯಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ತೋರಿಸಬೇಕೆಂದರು.ಸಿಜೆಕೆ ಪ್ರಶಸ್ತಿ ಪುರಸ್ಕ್ರತ ನಾಗರಾಜ್ ಇಂಗಳಗಿ, ಕನ್ನಡಸೇನೆಯ ಜಿಲ್ಲಾಧ್ಯಕ್ಷ ಚೆನ್ನಬಸವ ಜೇಕಿನ್ ಮಾತನಾಡಿ, 110ನೇ ಕವಿಗೋಷ್ಠಿಗೆ 110 ಕವಿಗಳು ಭಾಗವಹಿಸುವ ರೀತಿ ಆಯೋಜಿಸಬೇಕು. ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ರೋಟರಿ ಅಸಿಸ್ಟೆಂಟ್ ಮಾಜಿ ಗವರ್ನರ್ ಟಿ. ಆಂಜನೇಯ, ರೋಟರಿ ಸಂಸ್ಥೆಯ ಪ್ರಗತಿ ಮತ್ತು ಸೇವಾ ಕಾರ್ಯ ಕುರಿತು ವಿವರಿಸಿದರು.ಈ ವೇಳೆ ತಾಪಂ ಅಧ್ಯಕ್ಷೆ ರಾಜೇಶ್ವರಿ ಸುರೇಶ, ಡಾ. ಶಿವಕುಮಾರ, ವಕೀಲ ನಿಂಗಪ್ಪ ಸುದ್ದಿ, ಮಂಜುನಾಥ ಹೊಸಕೇರಾ, ಪುಂಡಪ್ಪಗೌಡ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಕೆ. ಬಸವರಾಜ್, ಕಾವ್ಯ ಲೋಕ ಸಂಘಟನೆ ಅಧ್ಯಕ್ಷ ಎಂ. ಪರುಶರಾಮಪ್ರಿಯ, ವಿಶ್ವರತ್ನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ರಗಡಪ್ಪ ಹೊಸಳ್ಳಿ,
ಶಿಕ್ಷಕಿ ನಾಗರತ್ನ, ಜಡಿಯಪ್ಪ ಇದ್ದರು. ಈ ವೇಳೆ ಕವನ ವಾಚಿಸಿದ 20ಕ್ಕೂ ಹೆಚ್ಚು ಕವಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.